IND vs WI: ಕೆರಿಬಿಯನ್ ನಾಡಲ್ಲಿ 39 ವರ್ಷಗಳ ನಂತರ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

| Updated By: Vinay Bhat

Updated on: Jul 28, 2022 | 9:06 AM

India vs West Indies ODI: ಬರೋಬ್ಬರಿ 39 ವರ್ಷಗಳ ಬಳಿಕ ಕೆರಿಬಿಯನ್ನರ ನಾಡಲಿಲ್ಲ ಭಾರತ ಏಕದಿನ ಸರಣಿಯನ್ನು ವೈಟ್ ವಾಷ್ ಮಾಡಿದ ಸಾಧನೆ ಗೈದಿದೆ. 1983 ರಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ವೆಸ್ಟ್​ ಇಂಡೀಸ್ ನೆಲದಲ್ಲಿ ಏಕದಿನ ಸರಣಿಯನ್ನು ಆಡಿತ್ತು. (ಫೋಟೋ ಕೃಪೆ: BCCI, Twitter)

1 / 8
ಶಿಖರ್ ಧವನ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಬೆಳೆಸಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಗೈದಿದೆ. ಮೂರನೇ ಏಕದಿನ ಪಂದ್ಯದಲ್ಲೂ ಭರ್ಜರಿ ಆಟವಾಡಿದ ಭಾರತ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 117 ರನ್ ಗಳಿಂದ ಗೆದ್ದು ಬೀಗಿದೆ. ಈ ಮೂಲಕ ವಿಶೇಷ ಸಾಧನೆ ಕೂಡ ಮಾಡಿದೆ.

2 / 8
ಹೌದು, ಬರೋಬ್ಬರಿ 39 ವರ್ಷಗಳ ಬಳಿಕ ಕೆರಿಬಿಯನ್ನರ ನಾಡಲಿಲ್ಲ ಭಾರತ ಏಕದಿನ ಸರಣಿಯನ್ನು ವೈಟ್ ವಾಷ್ ಮಾಡಿದ ಸಾಧನೆ ಗೈದಿದೆ. 1983 ರಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ವೆಸ್ಟ್​ ಇಂಡೀಸ್ ನೆಲದಲ್ಲಿ ಏಕದಿನ ಸರಣಿಯನ್ನು ಆಡಿತ್ತು.

3 / 8
1983 ರಿಂದ ಇಂದಿನ ವರೆಗೆ ಭಾರತ ವೆಸ್ಟ್ ಇಂಡೀಸ್ ನೆಲದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿರಲಿಲ್ಲ. ಇದೀಗ 3-0 ಅಂತರದಿಂದ ಸರಣಿ ವಶಪಡಿಸಿಕೊಳ್ಳುವ ಮೂಲಕ 39 ವರ್ಷಗಳ ನಂತರ ಅವರದ್ದೇ ನೆಲದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ನಾಯಕ ಧವನ್ ಆಗಿದ್ದಾರೆ.

4 / 8
ಮೊದಲು ಬ್ಯಾಟ್ ಮಾಡಿದ ಭಾರತ ಸ್ಫೋಟಕ ಆಟ ಪ್ರದರ್ಶಿಸಿತು. ಓಪನರ್ ​ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್​ ಗೆ ಈ ಜೋಡಿ 113 ರನ್​​ ಗಳ ಜೊತೆಯಾಟ ಆಡಿತು.

5 / 8
ಧವನ್ 74 ಎಸೆತಗಳಲ್ಲಿ 7 ಫೋರ್ ಬಾರಿಸಿ 58 ರನ್ ಗಳಿಸಿದರು. ನಂತರ ಎರಡನೇ ವಿಕೆಟ್​ ಗೆ ಶ್ರೇಯಸ್ ಅಯ್ಯರ್ ಜೊತೆಯಾದ ಗಿಲ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಹೀಗಿರುವಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲ ಸಮಯ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮಳೆ ನಿಂತ ನಂತರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 36 ಓವರ್ ನಿಗದಿ ಪಡಿಸಲಾಯಿತು.

6 / 8
ಬ್ಯಾಟಿಂಗ್ ಮುಂದುವರೆಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಆರ್ಭಟಿಸಿತು. ಗಿಲ್–ಅಯ್ಯರ್ 86 ರನ್ ​ಗಳ ಜೊತೆಯಾಟ ಆಡಿದರು. ಅಯ್ಯರ್ 34 ಎಸೆತಗಳಲ್ಲಿ 44 ರನ್ ಸಿಡಿಸಿದರು. ಸೂರ್ಯಕುಮಾರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 8 ರನ್ ​ಗೆ ಔಟಾದರು. 98 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಅಂತಿಮವಾಗಿ ಭಾರತ 36 ಓವರ್ ​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು.

7 / 8
ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ವಿಂಡೀಸ್ ಗೆಲುವಿಗೆ 35 ಓವರ್‌ಗಳಲ್ಲಿ 257 ರನ್ ಗುರಿ ಮರುನಿಗದಿಪಡಿಸಲಾಯಿತು. ಆದರೆ, ಭಾರತದ ಬೌಲಿಂಗ್ ದಾಳಿಗೆ ಕೆರಿಬಿಯನ್ ಬ್ಯಾಟರ್ ​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಬ್ರಾಂಡನ್ ಕಿಂಗ್ ಮತ್ತು ನಾಯಕ ನಿಕೋಲಸ್ ಪೂರನ್ ತಲಾ 42 ರನ್ ಗಳಿಸಿದ್ದೇ ಹೆಚ್ಚು. ವೆಸ್ಟ್ ಇಂಡೀಸ್ 26 ಓವರ್ ​ಗಳಲ್ಲೇ 137 ರನ್ ​ಗೆ ಸರ್ವಪತನ ಕಂಡಿತು.

8 / 8
ಭಾರತ ಪರ ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರೆ, ಸಿರಾಜ್, ಶಾರ್ದೂಲ್ ತಲಾ 2 ಹಾಗೂ ಅಕ್ಷರ್, ಪ್ರಸಿದ್ಧ್ ತಲಾ 1 ವಿಕೆಟ್ ಪಡೆದರು. ಸರಣಿಯಿದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

Published On - 8:35 am, Thu, 28 July 22