IND vs NZ 3rd ODI: ಕ್ರಿಸ್ಟ್​​ಚರ್ಚ್ ತಲುಪಿದ ಟೀಮ್​ ಇಂಡಿಯಾ ಆಟಗಾರರು: ಮಾಸ್ಟರ್ ಪ್ಲಾನ್ ರೆಡಿ ಮಾಡಿದ ಧವನ್

Edited By:

Updated on: Nov 28, 2022 | 9:59 AM

India vs New Zealand 3rd ODI: ನ. 30 ರಂದು ಕ್ರಿಸ್ಟ್​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಮೂರನೇ ಏಕದಿನ ಕದನ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಕ್ರಿಸ್ಟ್​ಚರ್ಚ್​ಗೆ ಬಂದಿಳಿದಿದ್ದಾರೆ.

1 / 7
ಭಾನುವಾರ ಹ್ಯಾಮಿಲ್ಟನ್​ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಪೂರ್ಣ ಕಾಣದೆ ಮಳೆಯಿಂದಾಗಿ ರದ್ದು ಮಾಡಲಾಯಿತು. ಮೊದಲ ಏಕದಿನ ಗೆದ್ದ ಪರಿಣಾಮ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ತೃತೀಯ ಏಕದಿನ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ.

ಭಾನುವಾರ ಹ್ಯಾಮಿಲ್ಟನ್​ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಪೂರ್ಣ ಕಾಣದೆ ಮಳೆಯಿಂದಾಗಿ ರದ್ದು ಮಾಡಲಾಯಿತು. ಮೊದಲ ಏಕದಿನ ಗೆದ್ದ ಪರಿಣಾಮ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ತೃತೀಯ ಏಕದಿನ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ.

2 / 7

ನವೆಂಬರ್ 30 ರಂದು ಕ್ರಿಸ್ಟ್​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ಇಂಡೋ-ಕಿವೀಸ್ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಕ್ರಿಸ್ಟ್​ಚರ್ಚ್​ಗೆ ಬಂದಿಳಿದಿದ್ದಾರೆ. ಈ ಬಗ್ಗೆ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

3 / 7

ಯುಜ್ವೇಂದ್ರ ಚಹಲ್ ಮಡದಿ ಧನಶ್ರೀ ವರ್ಮಾ ಹಾಗೂ ಸೂರ್ಯಕುಮಾಅರ್ ಪತ್ನಿ ದೇವಿಶಾ ತಮ್ಮ ಒನ್​ಸ್ಟಾಗ್ರಾಮ್​ನಲ್ಲಿ ಕ್ರಿಸ್ಟ್​ಚರ್ಚ್​ಗೆ ತೆರಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ನಾಯಕ ಧವನ್ ಅವರು ಚಹಲ್ ಹಾಗೂ ದೀಪಕ್ ಹೂಡ ಜೊತೆಗೆ ಸೆಲ್ಫೀ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಇನ್​ಸ್ಟಾದದಲ್ಲಿ ಶಾರ್ದೂಲ್ ಠಾಕೂರ್ ಜೊತೆ ಬಸ್​ನಲ್ಲಿ ಪ್ರಯಾಣಿಸುತ್ತಿರುವ ಫೋಟೋ ಇದೆ.

4 / 7

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ಸಾಕಷ್ಟು ರೋಚಕತೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 7 ವಿಕೆಟ್​ಗಳ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡರೆ ದ್ವಿತೀಯ ಪಂದ್ಯ ಮಳೆಯಿಂದಾಗಿ ರದ್ದಾಯಿತು ಇನ್ನು ಉಳಿದಿರುವುದು ಕೇವಲ ಪಂದ್ಯ ಮಾತ್ರ. ಟೀಮ್​ ಇಂಡಿಯಾ ಈಗೇನಿದ್ದರು ಕನಿಷ್ಠ ಸರಣಿಯನ್ನು ಕಳೆದುಕೊಳ್ಳದೆ ಸಮಬಲ ಮಾಡಲು ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.

5 / 7

ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್​ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್​ಗಳು ಪರದಾಡುವುದು ಖಚಿತ.

6 / 7

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ಬಾರತೀಯ ಕಾಲಮಾನದ ಪ್ರಕಾಅರ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. 6:30 ಕ್ಕೆ ಟಾಸ್ ಪ್ರಕ್ರಿಯೆ ಶುರುವಾಗಲಿದೆ. ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೂ ಏಕದಿನ ಪಂದ್ಯವನ್ನು ಆಡಿಲ್ಲ. ನ್ಯೂಜಿಲೆಂಡ್ ಆಡಿದ 11 ಪಂದ್ಯಗಳ ಪೈಕಿ 10 ರಲ್ಲಿ ಜಯ ಸಾಧಿಸಿದೆ. ಈ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

7 / 7

ಇನ್ನು ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ದ್ವಿತೀಯ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ.

Published On - 9:19 am, Mon, 28 November 22

Loading...
Unable to load recommendations.
Follow Us