World Cup 2023: 2023ರ ಏಕದಿನ ವಿಶ್ವಕಪ್ಗೆ 7 ತಂಡಗಳು ನೇರ ಆಯ್ಕೆ
TV9kannada Web Team | Edited By: Zahir PY
Updated on: Nov 28, 2022 | 4:09 PM
World Cup 2023: ಏಕದಿನ ವಿಶ್ವಕಪ್ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ಆಯ್ಕೆಯಾಗಲಿದೆ.
Nov 28, 2022 | 4:09 PM
2023 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಆತಿಥೇಯ ಭಾರತ ಸೇರಿದಂತೆ 7 ತಂಡಗಳು ನೇರ ಅರ್ಹತೆ ಪಡೆದುಕೊಂಡಿದೆ. ಐಸಿಸಿ ಸೂಪರ್ ಲೀಗ್ ಶ್ರೇಯಾಂಕ ಪಟ್ಟಿಯಲ್ಲಿರುವ 13 ತಂಡಗಳಲ್ಲಿ ಮೊದಲ 7 ಸ್ಥಾನ ಪಡೆದಿರುವ ತಂಡಗಳು ನೇರವಾಗಿ ವಿಶ್ವಕಪ್ಗೆ ಆಯ್ಕೆಯಾಗಿದೆ.
1 / 12
ಒಟ್ಟು 8 ತಂಡಗಳಿಗೆ ನೇರ ಅರ್ಹತೆ ಪಡೆಯುವ ಅವಕಾಶವಿದ್ದು, ಇನ್ನೊಂದು ತಂಡದ ಭವಿಷ್ಯವು ಮುಂದಿನ ಸರಣಿಗಳ ಫಲಿತಾಂಶಗಳ ಮೂಲಕ ನಿರ್ಧಾರವಾಗಲಿದೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್, ಐರ್ಲೆಂಡ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವೆ ಪೈಪೋಟಿಯಿದ್ದು, ಹೀಗಾಗಿ ಇದರಲ್ಲಿ ಒಂದು ತಂಡವು ಟಾಪ್-8 ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
2 / 12
2023 ರ ಏಕದಿನ ವಿಶ್ವಕಪ್ಗೆ ನೇರವಾಗಿ ಅರ್ಹತೆ ಪಡೆದುಕೊಂಡ 7 ತಂಡಗಳು ಈ ಕೆಳಗಿನಂತಿವೆ...
3 / 12
1- ಭಾರತ
4 / 12
2- ಇಂಗ್ಲೆಂಡ್
5 / 12
3- ನ್ಯೂಜಿಲೆಂಡ್
6 / 12
4- ಆಸ್ಟ್ರೇಲಿಯಾ
7 / 12
5- ಬಾಂಗ್ಲಾದೇಶ್
8 / 12
6- ಪಾಕಿಸ್ತಾನ್
9 / 12
7- ಅಫ್ಘಾನಿಸ್ತಾನ್
10 / 12
ಇನ್ನುಳಿದಂತೆ ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್, ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನೆದರ್ಲ್ಯಾಂಡ್ಸ್ ತಂಡಗಳಲ್ಲಿ ಒಂದು ತಂಡವು ನೇರ ಅರ್ಹತೆ ಪಡೆಯಲಿದೆ.
11 / 12
ಉಳಿದ 5 ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಬೇಕಾಗುತ್ತದೆ. ಅರ್ಹತಾ ಸುತ್ತಿನಲ್ಲಿ 5 ಇತರೆ ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ಆಯ್ಕೆಯಾಗಲಿದೆ. ಅದರಂತೆ 2023 ರ ಏಕದಿನ ವಿಶ್ವಕಪ್ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ.