Kannada News » Photo gallery » Cricket photos » Shikhar Dhawan Team India will need solid preparations for 3rd ODI vs New Zealand and they reached Christchurch
IND vs NZ 3rd ODI: ಕ್ರಿಸ್ಟ್ಚರ್ಚ್ ತಲುಪಿದ ಟೀಮ್ ಇಂಡಿಯಾ ಆಟಗಾರರು: ಮಾಸ್ಟರ್ ಪ್ಲಾನ್ ರೆಡಿ ಮಾಡಿದ ಧವನ್
TV9kannada Web Team | Edited By: Vinay Bhat
Updated on: Nov 28, 2022 | 9:59 AM
India vs New Zealand 3rd ODI: ನ. 30 ರಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಮೂರನೇ ಏಕದಿನ ಕದನ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಕ್ರಿಸ್ಟ್ಚರ್ಚ್ಗೆ ಬಂದಿಳಿದಿದ್ದಾರೆ.
Nov 28, 2022 | 9:59 AM
ಭಾನುವಾರ ಹ್ಯಾಮಿಲ್ಟನ್ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಪೂರ್ಣ ಕಾಣದೆ ಮಳೆಯಿಂದಾಗಿ ರದ್ದು ಮಾಡಲಾಯಿತು. ಮೊದಲ ಏಕದಿನ ಗೆದ್ದ ಪರಿಣಾಮ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ತೃತೀಯ ಏಕದಿನ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ.
1 / 7
ನವೆಂಬರ್ 30 ರಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ಇಂಡೋ-ಕಿವೀಸ್ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಕ್ರಿಸ್ಟ್ಚರ್ಚ್ಗೆ ಬಂದಿಳಿದಿದ್ದಾರೆ. ಈ ಬಗ್ಗೆ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
2 / 7
ಯುಜ್ವೇಂದ್ರ ಚಹಲ್ ಮಡದಿ ಧನಶ್ರೀ ವರ್ಮಾ ಹಾಗೂ ಸೂರ್ಯಕುಮಾಅರ್ ಪತ್ನಿ ದೇವಿಶಾ ತಮ್ಮ ಒನ್ಸ್ಟಾಗ್ರಾಮ್ನಲ್ಲಿ ಕ್ರಿಸ್ಟ್ಚರ್ಚ್ಗೆ ತೆರಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ನಾಯಕ ಧವನ್ ಅವರು ಚಹಲ್ ಹಾಗೂ ದೀಪಕ್ ಹೂಡ ಜೊತೆಗೆ ಸೆಲ್ಫೀ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಇನ್ಸ್ಟಾದದಲ್ಲಿ ಶಾರ್ದೂಲ್ ಠಾಕೂರ್ ಜೊತೆ ಬಸ್ನಲ್ಲಿ ಪ್ರಯಾಣಿಸುತ್ತಿರುವ ಫೋಟೋ ಇದೆ.
3 / 7
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ಸಾಕಷ್ಟು ರೋಚಕತೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 7 ವಿಕೆಟ್ಗಳ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡರೆ ದ್ವಿತೀಯ ಪಂದ್ಯ ಮಳೆಯಿಂದಾಗಿ ರದ್ದಾಯಿತು ಇನ್ನು ಉಳಿದಿರುವುದು ಕೇವಲ ಪಂದ್ಯ ಮಾತ್ರ. ಟೀಮ್ ಇಂಡಿಯಾ ಈಗೇನಿದ್ದರು ಕನಿಷ್ಠ ಸರಣಿಯನ್ನು ಕಳೆದುಕೊಳ್ಳದೆ ಸಮಬಲ ಮಾಡಲು ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.
4 / 7
ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್ಗಳು ಪರದಾಡುವುದು ಖಚಿತ.
5 / 7
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ಬಾರತೀಯ ಕಾಲಮಾನದ ಪ್ರಕಾಅರ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. 6:30 ಕ್ಕೆ ಟಾಸ್ ಪ್ರಕ್ರಿಯೆ ಶುರುವಾಗಲಿದೆ. ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೂ ಏಕದಿನ ಪಂದ್ಯವನ್ನು ಆಡಿಲ್ಲ. ನ್ಯೂಜಿಲೆಂಡ್ ಆಡಿದ 11 ಪಂದ್ಯಗಳ ಪೈಕಿ 10 ರಲ್ಲಿ ಜಯ ಸಾಧಿಸಿದೆ. ಈ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
6 / 7
ಇನ್ನು ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ದ್ವಿತೀಯ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ.