2022 ರಲ್ಲಿ ಶ್ರೇಯಸ್ ಅಯ್ಯರ್ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಈ ವರ್ಷ, ಅವರ ಬ್ಯಾಟ್‌ನಿಂದ ಪ್ರತಿಯೊಂದು ಸ್ವರೂಪದಲ್ಲೂ ರನ್‌ಗಳ ಮಳೆ ಸುರಿದಿದೆ. ಟೆಸ್ಟ್, ಏಕದಿನ ಅಥವಾ ಟಿ20 ಇರಲಿ... ಅವರು ರನ್ ಗಳಿಸದೇ ಇರುವ ಸ್ವರೂಪವಿಲ್ಲ.
ಸ್ಫೋಟಕ ಬ್ಯಾಟ್ಸ್‌ಮನ್ ಈ ವರ್ಷ ಎಲ್ಲಾ ಮೂರು ಸ್ವರೂಪಗಳಲ್ಲಿ 40 ಇನ್ನಿಂಗ್ಸ್‌ಗಳಲ್ಲಿ ಒಟ್ಟು 1609 ರನ್ ಗಳಿಸಿದ್ದಾರೆ. ಈ ಮೂಲಕ 2022 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಅಯ್ಯರ್ ನಂತರ, ಎರಡನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ 1424 ರನ್ ಗಳಿಸಿದ್ದಾರೆ. ಹಾಗೆಯೇ 1329 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಒಟ್ಟು 116 ರನ್ ಗಳಿಸಿದರು. ಇದರೊಂದಿಗೆ ಈ ವರ್ಷ ಟೆಸ್ಟ್ನಲ್ಲಿ ಒಟ್ಟು 422 ರನ್ ಗಳಿಸಿದ್ದಾರೆ.
ಅಯ್ಯರ್ ಈ ವರ್ಷ ಏಕದಿನದಲ್ಲಿ 724 ರನ್ ಮತ್ತು ಟಿ20 ಪಂದ್ಯಗಳಲ್ಲಿ 463 ರನ್ ಗಳಿಸಿದ್ದಾರೆ.
Published On - 12:41 pm, Sun, 25 December 22