Year Ender 2022: ಈ ವರ್ಷ ಇಹಲೋಕ ತ್ಯಜಿಸಿದ ಕ್ರಿಕೆಟ್ ಜಗತ್ತಿನ ಐವರು ದಿಗ್ಗಜ ಕ್ರಿಕೆಟಿಗರಿವರು

Year Ender 2022: ಶೇನ್ ವಾರ್ನ್, ರಾಡ್ನಿ ಮಾರ್ಷ್ ಮತ್ತು ಆಂಡ್ರ್ಯೂ ಸೈಮಂಡ್ಸ್ ಈ ವರ್ಷ ಜಗತ್ತಿಗೆ ವಿದಾಯ ಹೇಳಿದ ಆಸ್ಟ್ರೇಲಿಯನ್ ಕ್ರಿಕೆಟಿಗರಾದರೆ, ಭಾರತದ ಹೈದರ್ ಅಲಿ ಹಾಗೂ ಪಾಕಿಸ್ತಾನದ ಅಸದ್ ರೌಫ್ ಕೂಡ ಸೇರಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on:Dec 25, 2022 | 5:19 PM

2022ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಈ ವರ್ಷದಲ್ಲಿ ಕ್ರಿಕೆಟ್​ ಜಗತ್ತಿನಲ್ಲೂ ಕೆಲವು ಆಘಾತಕ್ಕಾರಿ ಸಂಗತಿಗಳು ನಡೆದವು. ಅದರಲ್ಲಿ ಒಂದೇ ವರ್ಷದಲ್ಲಿ ಆಸ್ಟ್ರೇಲಿಯಾದ ಮೂವರು ಕ್ರಿಕೆಟ್ ದಿಗ್ಗಜರು ಜಗತ್ತಿಗೆ ವಿದಾಯ ಹೇಳಿದ್ದು ಒಂದಾಗಿತ್ತು. ಶೇನ್ ವಾರ್ನ್, ರಾಡ್ನಿ ಮಾರ್ಷ್ ಮತ್ತು ಆಂಡ್ರ್ಯೂ ಸೈಮಂಡ್ಸ್ ಈ ವರ್ಷ ಜಗತ್ತಿಗೆ ವಿದಾಯ ಹೇಳಿದ ಆಸ್ಟ್ರೇಲಿಯನ್ ಕ್ರಿಕೆಟಿಗರಾದರೆ, ಭಾರತದ ಹೈದರ್ ಅಲಿ ಹಾಗೂ ಪಾಕಿಸ್ತಾನದ ಅಸದ್ ರೌಫ್ ಕೂಡ ಸೇರಿದ್ದಾರೆ.

1 / 6
ಶೇನ್ ವಾರ್ನ್: ದಶಕಗಳ ಕಾಲ ತನ್ನ ಸ್ಪಿನ್ ಮ್ಯಾಜಿಕ್​ನಿಂದ ಕ್ರಿಕೆಟ್​ ಲೋಕದ ಕಿಂಗ್ ಆಗಿ ಮೆರೆದಿದ್ದ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಈ ವರ್ಷದ ಮಾರ್ಚ್​ನಲ್ಲಿ ಹೃದಯಘಾತದಿಂದ ಅಸುನೀಗಿದರು.

2 / 6
ರಾಡ್ನಿ ಮಾರ್ಷ್: ಪೂರ್ವ ಆಸ್ಟ್ರೇಲಿಯಾದ ಕ್ರಿಕೆಟಿಗ ರಾಡ್ ಮಾರ್ಷ್ ಕೂಡ ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು. ಒಂದು ವಾರ ಕೋಮಾದಲ್ಲಿದ್ದ ಮಾರ್ಷ್ ಹೃದಯಘಾತದಿಂದ ಸಾವನ್ನಪ್ಪಿದರು.

3 / 6
ಆಂಡ್ರ್ಯೂ ಸೈಮಂಡ್ಸ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ತಮ್ಮ 46 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು. ಟೌನ್ಸ್‌ವಿಲ್ಲೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಸೈಮಂಡ್ಸ್ ನಿಧನರಾದರು.

4 / 6
ಅಸದ್ ರೌಫ್: ಪಾಕಿಸ್ತಾನದ ಮಾಜಿ ಅಂಪೈರ್ ಅಸದ್ ರೌಫ್ ಕೂಡ ಈ ವರ್ಷ ಇಹಲೋಕ ತ್ಯಜಿಸಿದರು. ತಮ್ಮ 66 ನೇ ವಯಸ್ಸಿನಲ್ಲಿ ರೌಫ್ ಹೃದಯಾಘಾತದಿಂದ ಕೊನೆಯುಸಿರೆಳೆದರು.

5 / 6
ಹೈದರ್ ಅಲಿ: ಭಾರತದ ದೇಶಿ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದ ಹೈದರ್ ಅಲಿ ಕೂಡ ಈ ವರ್ಷ ಜಗತ್ತಿಗೆ ವಿದಾಯ ಹೇಳಿದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 79 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

6 / 6

Published On - 5:19 pm, Sun, 25 December 22

Follow us