ಐಪಿಎಲ್ 2023 ರ ಸಲುವಾಗಿ ನಡೆದ ಮಿನಿ ಹರಾಜಿನಲ್ಲಿ ಬಹಳಷ್ಟು ಹಣದ ಹರಿವು ಕಂಡುಬಂತು. ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರೆ, ಕ್ಯಾಮೆರಾನ್ ಗ್ರೀನ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಆಟಗಾರರು ಸಹ ಸಾಕಷ್ಟು ಹಣ ಪಡೆದರು. ಇವರೊಂದಿಗೆ ಹಲವು ಆಟಗಾರರಿಗೆ ನಿರೀಕ್ಷೆಗೂ ಮೀರಿದ ಸಂಭಾವನೆ ದೊರೆತಿದೆ. ಈಗ ದೇಶವಾರು ನೋಡುವುದಾದರೆ ಯಾವ ದೇಶದ ಆಟಗಾರರು ಹೆಚ್ಚು ಹಣ ಕೊಳ್ಳೆ ಹೊಡೆದಿದ್ದಾರೆ ಎಂಬುದನ್ನು ಈಗ ನೋಡೋಣ.
ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ಆಟಗಾರರು ನಿರೀಕ್ಷೆಯಂತೆ ಗರಿಷ್ಠ ಹಣ ಲೂಟಿ ಮಾಡಿದರು. ಇಂಗ್ಲೆಂಡ್ ಆಟಗಾರರಿಗೆ ಎಲ್ಲಾ ತಂಡಗಳು ಒಟ್ಟು 58.10 ಕೋಟಿ ರೂ. ಖರ್ಚು ಮಾಡಿವೆ. ಇದರಲ್ಲಿ ಸ್ಯಾಮ್ ಕರನ್ (18.50 ಕೋಟಿ), ಬೆನ್ ಸ್ಟೋಕ್ಸ್ (16.25 ಕೋಟಿ) ಮತ್ತು ಹ್ಯಾರಿ ಬ್ರೂಕ್ (13.25 ಕೋಟಿ) ರೂಪದಲ್ಲಿ ಅಗ್ರ 5 ರಲ್ಲಿರುವ ಮೂರು ಅತ್ಯಂತ ದುಬಾರಿ ಆಟಗಾರರು ಸೇರಿದ್ದಾರೆ.
ಭಾರತದ ಆಟಗಾರರು ಎರಡನೇ ಸ್ಥಾನದಲ್ಲಿದ್ದು, ಇದರಲ್ಲಿ ಭಾರತೀಯರಿಗಾಗಿ 41.95 ಕೋಟಿ ರೂ. ಖರ್ಚು ಮಾಡಲಾಗಿದೆ. ಅನುಭವಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (8.25 ಕೋಟಿ) ಹೈದರಬಾದ್ ಖರೀದಿಸಿದ ಅತ್ಯಂತ ದುಬಾರಿ ಭಾರತೀಯ ಎನಿಸಿಕೊಂಡರು. ಅವರಲ್ಲದೆ, ಭಾರತದ ಅನೇಕ ಅನ್‌ಕ್ಯಾಪ್ಡ್ ಆಟಗಾರರನ್ನು ಸಹ ಮೂಲ ಬೆಲೆಗೆ ಖರೀದಿಸಲಾಯಿತು.
ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ತಂಡಗಳು 23.75 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಈ ಪೈಕಿ ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್ ಅವರಿಗಾಗಿಯೇ 16 ಕೋಟಿ ರೂ. ಖರ್ಚು ಮಾಡಿದೆ. ಇವರಲ್ಲದೆ ಜೇಸನ್ ಹೋಲ್ಡರ್ ಮತ್ತು ಓಡಿಯನ್ ಸ್ಮಿತ್ ಅವರಂತಹ ಆಟಗಾರರೂ ಸಾಕಷ್ಟು ಹಣ ಪಡೆದರು.
ಆಸ್ಟ್ರೇಲಿಯನ್ ಆಟಗಾರರು ಈ ಬಾರಿ ಹೆಚ್ಚು ಬಿಡ್ ಪಡೆಯಲಿಲ್ಲ. ಈ ದೇಶದ ಆಟಗಾರರಿಗೆ ಒಟ್ಟು 21.25 ಕೋಟಿ ಬಿಡ್ ಮಾಡಲಾಗಿದೆ. ಈ ಪೈಕಿ ಯುವ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಬರೋಬ್ಬರಿ 17.50 ಕೋಟಿ ರೂ. ಪಡೆದರು.
ದಕ್ಷಿಣ ಆಫ್ರಿಕಾದ ದೊಡ್ಡ ಹೆಸರುಗಳು ಈ ಬಾರಿ ಹರಾಜಿನಲ್ಲಿ ಇರಲಿಲ್ಲ. ಅದಕ್ಕಾಗಿಯೇ ದಕ್ಷಿಣ ಆಫ್ರಿಕನ್ನರು ಹೆನ್ರಿಕ್ ಕ್ಲಾಸೆನ್ (5.25 ಕೋಟಿ) ಮತ್ತು ರಿಲೆ ರೂಸೋ (4.60 ಕೋಟಿ) ಆಧಾರದ ಮೇಲೆ 10.55 ಕೋಟಿ ಗಳಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಐರ್ಲೆಂಡ್‌ನ ಆಟಗಾರನನ್ನು ಖರೀದಿಸಲಾಗಿದೆ. ಎಡಗೈ ವೇಗಿ ಜೋಶ್ ಲಿಟಲ್ (4.40 ಕೋಟಿ) ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್‌ನ ಇಬ್ಬರು ಆಟಗಾರರು (3 ಕೋಟಿ) ಕೇನ್ ವಿಲಿಯಮ್ಸನ್ (2 ಕೋಟಿ) ಮತ್ತು ಕೈಲ್ ಜೇಮಿಸನ್ (1 ಕೋಟಿ) ರೂಪದಲ್ಲಿ ಮಾರಾಟವಾದರು.
ಇವರುಗಳಲ್ಲದೆ, ಬಾಂಗ್ಲಾದೇಶ (ಶಕೀಬ್ ಅಲ್ ಹಸನ್, ಲಿಟನ್ ದಾಸ್), ನಮೀಬಿಯಾದಲ್ಲಿ 1 ಕೋಟಿ (ಕೇವಲ ಡೇವಿಡ್ ವೀಸಾ), ಅಫ್ಘಾನಿಸ್ತಾನ (50 ಲಕ್ಷ - ನವೀನಲ್ ಹಕ್) ಮತ್ತು ಜಿಂಬಾಬ್ವೆ (50 ಲಕ್ಷ - ಸಿಕಂದರ್ ರಜಾ) ದೇಶಗಳು ಸಹ ತಮ್ಮ ಖಾತೆಗಳನ್ನು ತೆರೆದಿವೆ.
Published On - 10:06 am, Sun, 25 December 22