ಒಂದೇ ವರ್ಷ 4 ಟ್ರೋಫಿ ಎತ್ತಿ ಹಿಡಿದ ಶ್ರೇಯಸ್ ಅಯ್ಯರ್..!

|

Updated on: Dec 16, 2024 | 7:53 AM

SMAT 2024: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ 2024 ರಲ್ಲಿ ಮುಂಬೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧ್ಯ ಪ್ರದೇಶ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 174 ರನ್ ಕಲೆಹಾಕಿತು. ಈ ಗುರಿಯನ್ನು 17.5 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಮುಂಬೈ ತಂಡವು 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

1 / 5
ಶ್ರೇಯಸ್ ಅಯ್ಯರ್ ಪಾಲಿಗೆ 2024 ಸ್ಮರಣೀಯ ವರ್ಷ. ಏಕೆಂದರೆ ಈ ವರ್ಷ ಅಯ್ಯರ್ ಬರೋಬ್ಬರಿ 4 ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ. ಅದರಲ್ಲಿ 2 ಟ್ರೋಫಿಗಳು ತನ್ನದೇ ನಾಯಕತ್ವದಲ್ಲಿ ಮೂಡಿಬಂದಿರುವುದು ವಿಶೇಷ. ಈ ವರ್ಷ ಶ್ರೇಯಸ್ ಅಯ್ಯರ್ ಗೆದ್ದಂತಹ ಟ್ರೋಫಿಗಳಾವುವು ಎಂದು ನೋಡುವುದಾದರೆ...

2 / 5
ರಣಜಿ ಟ್ರೋಫಿ: 2023-24ರ ರಣಜಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ಪರ ಕಣಕ್ಕಿಳಿದಿದ್ದರು. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಮುಂಬೈ ತಂಡವು 169 ರನ್​ಗಳಿಂದ ಅಮೋಘ ಗೆಲುವು ದಾಖಲಿಸಿತ್ತು. ಈ ಚಾಂಪಿಯನ್​ ಪಟ್ಟದೊಂದಿಗೆ ಶ್ರೇಯಸ್ ಅಯ್ಯರ್ 2024 ಅನ್ನು ಆರಂಭಿಸಿದ್ದರು.

3 / 5
ಐಪಿಎಲ್ ಟ್ರೋಫಿ: ಇಂಡಿಯನ್ ಪ್ರೀಮಿಯರ್ ಲೀಗ್​ 2024 ರಲ್ಲಿ ಶ್ರೇಯಸ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಣಕ್ಕಿಳಿದಿದ್ದರು. ಈ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು.

4 / 5
ಇರಾನಿ ಕಪ್: 2024ರಲ್ಲಿ ನಡೆದ ಇರಾನಿ ಕಪ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ಶೇಷ ಭಾರತ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ, ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ಮುಂಬೈ ಟ್ರೋಫಿ ಎತ್ತಿ ಹಿಡಿಯಿತು.

5 / 5
ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ: 2024ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿದಿತ್ತು. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಒಂದೇ ವರ್ಷದಲ್ಲಿ 4 ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ.