ಬಾಂಗ್ಲಾದೇಶ್ ಆಲ್​ರೌಂಡರ್ ಶಕೀಬ್ ಅಲ್ ಹಸನ್​ಗೆ ಬೌಲಿಂಗ್ ಬ್ಯಾನ್..!

Shakib Al Hasan: ಬಾಂಗ್ಲಾದೇಶ್ ಪರ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಶಕೀಬ್ ಅಲ್ ಹಸನ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ 246 ವಿಕೆಟ್ ಪಡೆದಿರುವ ಶಕೀಬ್, ಟಿ20 ಕ್ರಿಕೆಟ್​ನಲ್ಲಿ 149 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್​ನಲ್ಲಿ 317 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 16, 2024 | 8:54 AM

ಬಾಂಗ್ಲಾದೇಶ್ ತಂಡದ ಸ್ಟಾರ್ ಆಲ್​ರೌಂಡರ್ ಶಕೀಬ್ ಅಲ್ ಹಸನ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್ ನಿಷೇಧಿಸಲಾಗಿದೆ. ಅವರ ಬೌಲಿಂಗ್ ಶೈಲಿಯಲ್ಲಿ ಲೋಪಗಳು ಕಂಡು ಬಂದಿದ್ದರಿಂದ ನಿಷೇಧ ಹೇರಲಾಗಿದ್ದು, ಹೀಗಾಗಿ ಇನ್ಮುಂದೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶಕೀಬ್ ಬೌಲಿಂಗ್ ಮಾಡುವಂತಿಲ್ಲ.

1 / 5
ಕೆಲ ತಿಂಗಳ ಹಿಂದೆಯಷ್ಟೇ ಶಕೀಬ್ ಅಲ್ ಹಸನ್ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್ ಪಂದ್ಯವಾಡಿದ್ದರು. ಈ ವೇಳೆ ಅವರ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಇದನ್ನು ಪರಿಶೀಲಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶಕೀಬ್ ಅವರಿಗೆ ಬೌಲಿಂಗ್ ಬ್ಯಾನ್ ಹೇರಿತ್ತು.

2 / 5
ಇದರ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ ಕೂಡ ಶಕೀಬ್ ಅಲ್ ಹಸನ್ ಅವರ ಬೌಲಿಂಗ್​ ಶೈಲಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಇದೇ ವೇಳೆ ಶಕೀಬ್ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿರುವುದು ಕಂಡುಬಂದಿದೆ. ಐಸಿಸಿ ನಿಯಮಾವಳಿಗಳ ಪ್ರಕಾರ, ಯಾವುದೇ ಬೌಲರ್‌ನ ಮೊಣಕೈ ಮಿತಿಯನ್ನು ಮೀರಿ ವಿಸ್ತರಿಸಿದರೆ ಕಾನೂನುಬಾಹಿರ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ.

3 / 5
ಅದರಂತೆ ಶಕೀಬ್ ಅಲ್ ಹಸನ್ ಅವರ ಬೌಲಿಂಗ್ ಶೈಲಿಯು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಸ್ಥಾಪಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಖಚಿತವಾಗಿದೆ. ಹೀಗಾಗಿ ಇನ್ಮುಂದೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಾರದೆಂದು ನಿಷೇಧ ಹೇರಲಾಗಿದೆ.

4 / 5
ಬಾಂಗ್ಲಾದೇಶ್ ಪರ 447 ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್ 488 ಇನಿಂಗ್ಸ್​ಗಳಲ್ಲಿ 5165.5 ಓವರ್​​ಗಳನ್ನು ಎಸೆದಿದ್ದಾರೆ. ಈ ವೇಳೆ ಒಟ್ಟು 712 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಾಂಗ್ಲಾ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಬರೆದಿರುವ ಶಕೀಬ್ ಅಲ್ ಹಸನ್ ನಿವೃತ್ತಿಯ ಅಂಚಿನಲ್ಲಿ ಬೌಲಿಂಗ್ ಬ್ಯಾನ್​ಗೆ ಒಳಗಾಗಿದ್ದಾರೆ.

5 / 5
Follow us
Daily Devotional: ಚಿಕ್ಕ ಮಕ್ಕಳಿಗೆ ಜಾತಕ ಬರೆಸಬಹುದಾ? ಇಲ್ಲಿದೆ ಉತ್ತರ

ವಿದೇಶದಲ್ಲಿ ವ್ಯಾಪಾರ ಮಾಡುವ ಈ ರಾಶಿಯವರು ಇಂದು ಸಾಕಷ್ಟು ಲಾಭ ಗಳಿಸುತ್ತಾರೆ

ಗೆದ್ರೆ ಪಕ್ಷದ್ದು, ಸೋತ್ರೆ ಇವಿಎಂನದ್ದು: ಒಮರ್ ಅಬ್ದುಲ್ಲಾ ವ್ಯಂಗ್ಯ

‘ಆಮಿರ್ ಖಾನ್ ಮಾತು ಕೇಳಿ ನನಗೆ ಶಾಕ್ ಆಯಿತು’: ಉಪೇಂದ್ರ

‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..

ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ

ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ

ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ

ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್

ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು