ಇದೀಗ ದೇಶೀಯ ಅಂಗಳದಲ್ಲಿ ಸಿಡಿಲಬ್ಬರ ಪ್ರದರ್ಶಿಸಿರುವ ರಜತ್ ಪಾಟಿದಾರ್ ಐಪಿಎಲ್ನಲ್ಲೂ ಅಬ್ಬರಿಸುವ ನಿರೀಕ್ಷೆಯಿದೆ. ಏಕೆಂದರೆ RCB ಪರ 24 ಇನಿಂಗ್ಸ್ ಆಡಿರುವ ಪಾಟಿದಾರ್ 799 ರನ್ ಕಲೆಹಾಕಿದ್ದಾರೆ. ಈ ವೇಳೆ 54 ಸಿಕ್ಸ್ ಹಾಗೂ 51 ಫೋರ್ ಸಿಡಿಸಿದ್ದರು. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಪಾಟಿದಾರ್ ಕಡೆಯಿಂದ ಈ ಬಾರಿಯ ಐಪಿಎಲ್ನಲ್ಲಿ ಸಿಕ್ಸರ್ಗಳ ಸುರಿಮಳೆ ನಿರೀಕ್ಷಿಸಬಹುದು.