IPL 2024: ಗುಜರಾತ್​ಗೆ ಗಿಲ್ ನಾಯಕ, ಹಾರ್ದಿಕ್ ಮುಂಬೈಗೆ, ಗ್ರೀನ್ ಆರ್​ಸಿಬಿಗೆ: ಐಪಿಎಲ್​ನಲ್ಲಿ ಮಹತ್ವದ ಬೆಳವಣಿಗೆ

Shubman Gill Gujarat Titans Captain: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಿನಿ ಹರಾಜು ಹತ್ತಿರುವಾಗುತ್ತಿದ್ದಂತೆ ಫ್ರಾಂಚೈಸಿ ಮೂಲಗಳಿಂದ ಒಂದೊಂದೆ ಮಾಹಿತಿ ಹೊರಬೀಳುತ್ತಿದೆ. ಸದ್ಯ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆಯಂತೆ. ಅತ್ತ ಮುಂಬೈ ಗ್ರೀನ್ ಅವರನ್ನು ಆರ್​ಸಿಬಿಗೆ ಬಿಟ್ಟುಕೊಟ್ಟಿದೆ. ಇವುಗಳ ನಡುವೆ ಗುಜರಾತ್ ಟೈಟಾನ್ಸ್ ನಾಯಕನಾಗಿ ಶುಭ್​ಮನ್ ಗಿಲ್ ಆಯ್ಕೆ ಆಗಿದ್ದಾರೆ.

Vinay Bhat
|

Updated on: Nov 27, 2023 | 10:27 AM

ಕಳೆದ ಎರಡು ದಿನಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಲೋಕದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ತಮಗೆ ಅಗತ್ಯವಿಲ್ಲದ ಆಟಗಾರರ ಬಿಡುಗಡೆ ಮಾಡಿವೆ. ಇದರ ನಡುವೆ ಟ್ರೇಡ್​ಗಳು ನಡೆಯುತ್ತಿದ್ದು, ಟ್ರೇಡ್ ವಿಂಡೋ ಡಿಸೆಂಬರ್ 12 ರವರೆಗೆ ತೆರೆದಿರುತ್ತದೆ.

1 / 8
ಸದ್ಯ ಮೂಲಗಳಿಂದ ಮತ್ತೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆಯಂತೆ. ಗುಜರಾತ್ ಟೈಟಾನ್ಸ್ ಜೊತೆಗೆ ನಗದು ವ್ಯವಹಾರದ ಮೂಲಕ ಮುಂಬೈ ಪಾಂಡ್ಯರನ್ನು ಕರೆತಂದಿದೆ. ಇದಕ್ಕೂ ಮುನ್ನ ಮುಂಬೈ ಕ್ಯಾಮ್ರೋನ್ ಗ್ರೀನ್ ಅವರನ್ನು ತಂಡದಿಂದ ಕೈಬಿಟ್ಟಿದೆ.

2 / 8
ಮುಂಬೈ ಫ್ರಾಂಚೈಸಿಯಿಂದ ಕ್ಯಾಮ್ರೋನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಿದೆ. ಕಳೆದ ವರ್ಷ INR 17.50 ಕೋಟಿಗೆ ಗ್ರೀನ್​ರನ್ನು ಮುಂಬೈ ಖರೀದಿಸಿತ್ತು. ಈಗ ಇದೇ ಬೆಲೆಯ ಆಸುಪಾಸಿಗೆ ಹಾರ್ದಿಕ್ ಅವರನ್ನು ರೋಹಿತ್ ಟೀಮ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

3 / 8
ಇವೆಲ್ಲದರ ನಡುವೆ ಗುಜರಾತ್ ಟೈಟಾನ್ಸ್ ತಂಡ ಶುಭ್​ಮನ್ ಗಿಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ ಎಂದು ವರದಿ ಆಗಿದೆ. 2024 ಐಪಿಎಲ್​ನಲ್ಲಿ ಜಿಟಿ ತಂಡವನ್ನು ಗಿಲ್ ಮುನ್ನಡೆಸಲಿದ್ದಾರೆ. ಗಿಲ್ ನಾಯಕತ್ವದಲ್ಲಿ ಗುಜರಾತ್ ಯಾವರೀತಿ ಪ್ರದರ್ಶನ ತೋರುತ್ತೆ ನೋಡಬೇಕು.

4 / 8
ಹಾರ್ದಿಕ್ 2015 ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಮ್ ಇಂಡಿಯಾಕ್ಕೂ ಆಯ್ಕೆ ಆದರು. ಮುಂಬೈ ತಂಡದಲ್ಲಿದ್ದಾಗ ಹಾರ್ದಿಕ್ 4 ಬಾರಿ ಪ್ರಶಸ್ತಿ ಗೆದ್ದಿದ್ದರು. ನಂತರ 2022 ರ ಋತುವಿನಲ್ಲಿ, ಗುಜರಾತ್ ಟೈಟಾನ್ಸ್ ಸೇರಿ ಮೊದಲ ಋತುವಿನಲ್ಲಿಯೇ ತಂಡವನ್ನು ಪ್ರಶಸ್ತಿ ಗೆಲ್ಲುವಂತೆ ಮಾಡಿದರು.

5 / 8
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿನಿ ಹರಾಜಿಗೂ ಮುನ್ನ 10 ಆಟಗಾರರನ್ನು ಬಿಡುಗಡೆ ಮಾಡಿದೆ. ಪರ್ಸ್‌ನಲ್ಲಿ ಒಟ್ಟು 40.75 ಕೋಟಿ ರೂ. ಇದೆ. ಗ್ರೀನ್ ಅರನ್ನು ಆರ್‌ಸಿಬಿ ಖರೀದಿಸಿದ ನಂತರ ಇನ್ನೂ 6 ಸ್ಲಾಟ್‌ಗಳು ಬಾಕಿಯಿದೆ. ಮೂಲಗಳ ಪ್ರಕಾರ ಹರಾಜಿನಲ್ಲಿ ಬೆಂಗಳೂರು ರಚಿನ್ ರವೀಂದ್ರ ಮೇಲೆ ಕಣ್ಣಿಟ್ಟಿದೆಯಂತೆ.

6 / 8
ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ: ವನಿಂದು ಹಸರಂಗ, ಫಿನ್ ಅಲೆನ್, ಕೇದರ್ ಜಾಧವ್, ಹರ್ಷಲ್ ಪಟೇಲ್, ಮೈಕೆಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್ ಮತ್ತು ಸಿದ್ದಾರ್ಥ್ ಕೌಲ್.

7 / 8
ಐಪಿಎಲ್ 2024 ರ ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಾಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಮೊಹಮ್ಮದ್ ಸಿರಾಜ್, ರಾಜನ್ ಶರ್ಮಾ, ಹಿಮಾನ್ಸ್ ಶರ್ಮಾ, ವಿಜಯಕುಮಾರ್ ವೈಶಾಕ್.

8 / 8
Follow us
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು

ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?

ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ

ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ

Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್

ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ

ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್