ಕಳೆದ ಎರಡು ದಿನಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಲೋಕದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ತಮಗೆ ಅಗತ್ಯವಿಲ್ಲದ ಆಟಗಾರರ ಬಿಡುಗಡೆ ಮಾಡಿವೆ. ಇದರ ನಡುವೆ ಟ್ರೇಡ್ಗಳು ನಡೆಯುತ್ತಿದ್ದು, ಟ್ರೇಡ್ ವಿಂಡೋ ಡಿಸೆಂಬರ್ 12 ರವರೆಗೆ ತೆರೆದಿರುತ್ತದೆ.
ಸದ್ಯ ಮೂಲಗಳಿಂದ ಮತ್ತೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆಯಂತೆ. ಗುಜರಾತ್ ಟೈಟಾನ್ಸ್ ಜೊತೆಗೆ ನಗದು ವ್ಯವಹಾರದ ಮೂಲಕ ಮುಂಬೈ ಪಾಂಡ್ಯರನ್ನು ಕರೆತಂದಿದೆ. ಇದಕ್ಕೂ ಮುನ್ನ ಮುಂಬೈ ಕ್ಯಾಮ್ರೋನ್ ಗ್ರೀನ್ ಅವರನ್ನು ತಂಡದಿಂದ ಕೈಬಿಟ್ಟಿದೆ.
ಮುಂಬೈ ಫ್ರಾಂಚೈಸಿಯಿಂದ ಕ್ಯಾಮ್ರೋನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಿದೆ. ಕಳೆದ ವರ್ಷ INR 17.50 ಕೋಟಿಗೆ ಗ್ರೀನ್ರನ್ನು ಮುಂಬೈ ಖರೀದಿಸಿತ್ತು. ಈಗ ಇದೇ ಬೆಲೆಯ ಆಸುಪಾಸಿಗೆ ಹಾರ್ದಿಕ್ ಅವರನ್ನು ರೋಹಿತ್ ಟೀಮ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಇವೆಲ್ಲದರ ನಡುವೆ ಗುಜರಾತ್ ಟೈಟಾನ್ಸ್ ತಂಡ ಶುಭ್ಮನ್ ಗಿಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ ಎಂದು ವರದಿ ಆಗಿದೆ. 2024 ಐಪಿಎಲ್ನಲ್ಲಿ ಜಿಟಿ ತಂಡವನ್ನು ಗಿಲ್ ಮುನ್ನಡೆಸಲಿದ್ದಾರೆ. ಗಿಲ್ ನಾಯಕತ್ವದಲ್ಲಿ ಗುಜರಾತ್ ಯಾವರೀತಿ ಪ್ರದರ್ಶನ ತೋರುತ್ತೆ ನೋಡಬೇಕು.
ಹಾರ್ದಿಕ್ 2015 ರಲ್ಲಿ ಮುಂಬೈ ಇಂಡಿಯನ್ಸ್ನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಮ್ ಇಂಡಿಯಾಕ್ಕೂ ಆಯ್ಕೆ ಆದರು. ಮುಂಬೈ ತಂಡದಲ್ಲಿದ್ದಾಗ ಹಾರ್ದಿಕ್ 4 ಬಾರಿ ಪ್ರಶಸ್ತಿ ಗೆದ್ದಿದ್ದರು. ನಂತರ 2022 ರ ಋತುವಿನಲ್ಲಿ, ಗುಜರಾತ್ ಟೈಟಾನ್ಸ್ ಸೇರಿ ಮೊದಲ ಋತುವಿನಲ್ಲಿಯೇ ತಂಡವನ್ನು ಪ್ರಶಸ್ತಿ ಗೆಲ್ಲುವಂತೆ ಮಾಡಿದರು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿನಿ ಹರಾಜಿಗೂ ಮುನ್ನ 10 ಆಟಗಾರರನ್ನು ಬಿಡುಗಡೆ ಮಾಡಿದೆ. ಪರ್ಸ್ನಲ್ಲಿ ಒಟ್ಟು 40.75 ಕೋಟಿ ರೂ. ಇದೆ. ಗ್ರೀನ್ ಅರನ್ನು ಆರ್ಸಿಬಿ ಖರೀದಿಸಿದ ನಂತರ ಇನ್ನೂ 6 ಸ್ಲಾಟ್ಗಳು ಬಾಕಿಯಿದೆ. ಮೂಲಗಳ ಪ್ರಕಾರ ಹರಾಜಿನಲ್ಲಿ ಬೆಂಗಳೂರು ರಚಿನ್ ರವೀಂದ್ರ ಮೇಲೆ ಕಣ್ಣಿಟ್ಟಿದೆಯಂತೆ.
ಆರ್ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ: ವನಿಂದು ಹಸರಂಗ, ಫಿನ್ ಅಲೆನ್, ಕೇದರ್ ಜಾಧವ್, ಹರ್ಷಲ್ ಪಟೇಲ್, ಮೈಕೆಲ್ ಬ್ರೇಸ್ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್ ಮತ್ತು ಸಿದ್ದಾರ್ಥ್ ಕೌಲ್.
ಐಪಿಎಲ್ 2024 ರ ಆರ್ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಾಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಮೊಹಮ್ಮದ್ ಸಿರಾಜ್, ರಾಜನ್ ಶರ್ಮಾ, ಹಿಮಾನ್ಸ್ ಶರ್ಮಾ, ವಿಜಯಕುಮಾರ್ ವೈಶಾಕ್.