- Kannada News Photo gallery Cricket photos Shubman Gill is also likely to miss second match India vs Afghanistan in ICC World Cup
Shubman Gill: ಶುಭ್‌ಮನ್ ಗಿಲ್ ಬಗ್ಗೆ ಹೊರಬಿತ್ತು ಆಘಾತಕಾರಿ ಸುದ್ದಿ: ಬಿಸಿಸಿಐ ಮೂಲಗಳಿಂದ ಮಾಹಿತಿ
Shubman Gill Miss First Two Matches of World Cup: ಶುಭ್‌ಮನ್ ಗಿಲ್ ಅವರು ಚೆನ್ನೈನಲ್ಲಿ ಭಾನುವಾರ ನಡೆಯಲಿರುವ ಐಸಿಸಿ ವಿಶ್ವಕಪ್ನ ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಮಾತ್ರವಲ್ಲದೆ ಅಕ್ಟೋಬರ್ 11 ರಂದು ದೆಹಲಿಯಲ್ಲಿ ಭಾರತ-ಅಫ್ಘಾನಿಸ್ತಾನ ನಡುವೆ ನಡೆಯಲಿರುವ ಎರಡನೇ ಪಂದ್ಯವನ್ನು ಕೂಡ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
Updated on: Oct 07, 2023 | 10:33 AM

ಭಾರತದ ಸ್ಟಾರ್ ಓಪನಿಂಗ್ ಬ್ಯಾಟರ್ ಶುಭ್‌ಮನ್ ಗಿಲ್ ಅವರು ತೀವ್ರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಭಾನುವಾರ (ಅಕ್ಟೋಬರ್ 8) ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಿಂದ ಅಲಭ್ಯರಾಗಿರಿವುದು ಗೊತ್ತೇ ಇದೆ. ಇದರ ಜೊತೆಗೆ ಮತ್ತೊಂದು ಆಘಾತಕಾರಿ ಸುದ್ದು ಹೊರಬಿದ್ದಿದೆ.

ಈ ವರ್ಷ 20 ಏಕದಿನ ಪಂದ್ಯಗಳಲ್ಲಿ 1230 ರನ್‌ಗಳನ್ನು ಹೊಡೆದು ಐಸಿಸಿ ಏಕದಿನ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂಬರ್ 2 ಸ್ಥಾನದಲ್ಲಿರುವ ಗಿಲ್ ಅಲಭ್ಯತೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಕಾಣಲಿದೆ. ಹೀಗಿರುವಾಗ ಗಿಲ್ ಮತ್ತೊಮ್ಮೆ ಡೆಂಗ್ಯೂ ಪರೀಕ್ಷೆಗೆ ಒಳಗಾಗಿದ್ದು, ಇವರು ಕನಿಷ್ಠ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, 24 ವರ್ಷದ ಬ್ಯಾಟರ್ ಗಿಲ್ ಚೆನ್ನೈನಲ್ಲಿ ಭಾನುವಾರ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಮಾತ್ರವಲ್ಲದೆ ಅಕ್ಟೋಬರ್ 11 ರಂದು ದೆಹಲಿಯಲ್ಲಿ ಭಾರತ-ಅಫ್ಘಾನಿಸ್ತಾನ ನಡುವೆ ನಡೆಯಲಿರುವ ಎರಡನೇ ಪಂದ್ಯವನ್ನು ಕೂಡ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.

ಗಿಲ್ ಅವರ ಅನಾರೋಗ್ಯದ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಆದರೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಇನ್ನೂ 36 ಗಂಟೆಗಳಿರುವಾಗ ಗಿಲ್ ಅವರನ್ನು ಹೊರಗಿಡಲಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಬಿಸಿಸಿಐ ಮೂಲವು ಗಿಲ್ ಮೊದಲ ಎರಡು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದೆ.

"ಗಿಲ್ ಆರೋಗ್ಯವಾಗಿಲ್ಲ, ಮತ್ತು ಅವರು ಕನಿಷ್ಠ ಮೊದಲ ಎರಡು ಪಂದ್ಯಗಳನ್ನು ಆಡುವ ಸ್ಥಿತಿಯಲ್ಲಿಲ್ಲ," ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ. ಶುಕ್ರವಾರ ಚೆನ್ನೈನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ದ್ರಾವಿಡ್, “ಗಿಲ್ ಮೇಲೆ ವೈದ್ಯಕೀಯ ತಂಡವು ನಿಗಾ ಇಟ್ಟಿದೆ ಮತ್ತು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ" ಎಂದು ಹೇಳಿದ್ದರು.

ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರವಿತ್ತು. ತರಬೇತಿ ಅವಧಿಯಲ್ಲಿ ಗಿಲ್ ಅವರು ಡೆಂಗ್ಯೂನಿಂದ ಬಳಲುತ್ತಿದ್ದರು. ಇವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇವರ ಬದಲು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆ ಇದೆ.

ಇನ್ನು ಗಿಲ್ ಅನುಪಸ್ಥಿತಿಯ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ದೊಡ್ಡ ಆಘಾತ ಉಂಟಾಗಿದೆ. ತಂಡದ ಅಭ್ಯಾಸದ ಅವಧಿಯಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಗಾಯಗೊಂಡಿದ್ದಾರೆ. ಪಾಂಡ್ಯ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬೆರಳಿಗೆ ಪೆಟ್ಟಾಗಿದೆ. ಅವರ ಗಾಯದ ಪ್ರಮಾಣ ಎಷ್ಟು ಎಂಬುದು ತಿಳಿದುಬಂದಿಲ್ಲ. ಆದರೆ, ಅವರು ಇಂಜುರಿಗೆ ತುತ್ತಾದ ಬಳಿಕ ಬ್ಯಾಟಿಂಗ್ ಮಾಡಲಿಲ್ಲ.




