5 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಹರಾಜಾದ ಶುಭ್​ಮನ್ ಗಿಲ್ ಟೆಸ್ಟ್ ಜೆರ್ಸಿ

Updated on: Aug 09, 2025 | 5:01 PM

Shubman Gill Test Jersey: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಅವರ ಜೆರ್ಸಿ 5.41 ಲಕ್ಷ ರೂಪಾಯಿಗಳಿಗೆ ದತ್ತಿ ಹರಾಜಿನಲ್ಲಿ ಮಾರಾಟವಾಗಿದೆ. ಈ ಹರಾಜಿನಿಂದ ಬಂದ ಹಣವನ್ನು ರುತ್ ಸ್ಟ್ರಾಸ್ ಫೌಂಡೇಶನ್‌ಗೆ ನೀಡಲಾಗುತ್ತದೆ. ಗಿಲ್ ಜೊತೆಗೆ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರ ಜೆರ್ಸಿಗಳು ಕೂಡ ಉತ್ತಮ ಬೆಲೆಗೆ ಮಾರಾಟವಾಗಿವೆ. ಈ ಹರಾಜು ಜುಲೈ 10 ರಿಂದ 27 ರವರೆಗೆ ನಡೆಯಿತು.

1 / 6
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದರು. ಈ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗಿಲ್ ಆಡಿದ ಐದು ಪಂದ್ಯಗಳಲ್ಲಿ 75.40 ಸರಾಸರಿಯಲ್ಲಿ 754 ರನ್ ಗಳಿಸಿದರು. ಈ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರು.

2 / 6
ಇದೀಗ ಈ ಸರಣಿ ಮುಗಿದಿದ್ದು ಇಡೀ ತಂಡ ಕೂಡ ಭಾರತಕ್ಕೆ ವಾಪಸ್ಸಾಗಿದೆ. ಈ ನಡುವೆ ಶುಭ್​ಮನ್ ಗಿಲ್ ಅವರ ಟೆಸ್ಟ್ ಜೆರ್ಸಿ ಖರೀದಿಗಾಗಿ ಭಾರಿ ಪೈಪೋಟಿ ಕಂಡುಬಂದಿದೆ. ಇದರಿಂದಾಗಿ ಗಿಲ್ ಅವರ ಟೆಸ್ಟ್ ಜೆರ್ಸಿಯನ್ನು 5 ಲಕ್ಷಕ್ಕೂ ರೂಪಾಯಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

3 / 6
ವಾಸ್ತವವಾಗಿ ದತ್ತಿ ಹರಾಜಿನಲ್ಲಿ, ಭಾರತ ಮತ್ತು ಇಂಗ್ಲೆಂಡ್ ಆಟಗಾರರ ಜೆರ್ಸಿಗಳನ್ನು ಬಿಡ್‌ ಮಾಡಲಾಯಿತು. ಇದರಲ್ಲಿ ಶುಭ್​ಮನ್ ಗಿಲ್ ಅವರ ಜೆರ್ಸಿ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದೆ. ಅಂದರೆ ಗಿಲ್ ಅವರ ಜೆರ್ಸಿ 5.41 ಲಕ್ಷ ರೂ.ಗಳಿಗೆ ಮಾರಾಟವಾಗಿದೆ.

4 / 6
ಈ ಹರಾಜು ಜುಲೈ 10 ರಿಂದ ಜುಲೈ 27 ರವರೆಗೆ ನಡೆಯಿತು. ಈ ಹರಾಜಿನಿಂದ ಬಂದ ಸಂಪೂರ್ಣ ಮೊತ್ತವನ್ನು ರುತ್ ಸ್ಟ್ರಾಸ್ ಫೌಂಡೇಶನ್‌ಗೆ ನೀಡಲಾಗುತ್ತದೆ. ಈ ಫೌಂಡೇಶನ್, ದೀರ್ಘಕಾಲದವರೆಗೆ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಈ ರೋಗದ ವಿರುದ್ಧ ಹೋರಾಡಲು ಹಣವಿಲ್ಲದ ಮಕ್ಕಳು ಅಥವಾ ಕುಟುಂಬ ಸದಸ್ಯರ ಕುಟುಂಬಗಳಿಗೆ ಸಹಾಯ ಮಾಡುತ್ತದೆ.

5 / 6
ವಾಸ್ತವವಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್ ಅವರ ಪತ್ನಿ ರುತ್ ಸ್ಟ್ರಾಸ್ 2018 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ರುತ್ ಅವರ ಮರಣದ ನಂತರ, ಆಂಡ್ರ್ಯೂ ಸ್ಟ್ರಾಸ್ ತಮ್ಮ ಪತ್ನಿಯ ನೆನಪಿಗಾಗಿ ರುತ್ ಸ್ಟ್ರಾಸ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಅವರ ಕುಟುಂಬ ಸದಸ್ಯರ ಬಳಿ ಹೆಚ್ಚು ಹಣವಿಲ್ಲದ ಎಲ್ಲಾ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಈ ಪ್ರತಿಷ್ಠಾನದ ಗುರಿಯಾಗಿದೆ.

6 / 6
ಇನ್ನು ಹರಾಜಿನ ವಿಚಾರಕ್ಕೆ ಬರುವುದಾದರೆ, ಗಿಲ್ ನಂತರ, ವೇಗಿ ಜಸ್ಪ್ರೀತ್ ಬುಮ್ರಾ ಅವರ ಜೆರ್ಸಿ ಎರಡನೇ ಅತಿ ಹೆಚ್ಚು ಬೆಲೆಗೆ ಮಾರಾಟವಾಯಿತು. ಜಸ್ಪ್ರೀತ್ ಬುಮ್ರಾ ಅವರ ಜೆರ್ಸಿ 4.94 ಲಕ್ಷ ರೂ.ಗೆ ಮಾರಾಟವಾದರೆ, ರವೀಂದ್ರ ಜಡೇಜಾ ಅವರ ಜೆರ್ಸಿ ಕೂಡ ಅದೇ ಬೆಲೆಗೆ ಮಾರಾಟವಾಯಿತು. ಕೆಎಲ್ ರಾಹುಲ್ ಅವರ ಜೆರ್ಸಿ 4.71 ಲಕ್ಷ ರೂ.ಗೆ ಬಿಡ್ ಆಗಿದ್ದು, ಭಾರತ ವಿರುದ್ಧದ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಎರಡನೇ ಸ್ಥಾನ ಪಡೆದ ಜೋ ರೂಟ್ ಅವರ ಜೆರ್ಸಿಯನ್ನು 4.47 ಲಕ್ಷ ರೂ.ಗೆ ಖರೀದಿಸಲಾಯಿತು.