SL vs PAK: 1 ವಿಕೆಟ್​ಗಾಗಿ 1 ವರ್ಷ ಕಾಯ್ದ ಅಫ್ರಿದಿ! ಕೊನೆಗೂ ವಿಕೆಟ್​ಗಳ ಶತಕ ಪೂರೈಸಿದ ಪಾಕ್ ವೇಗಿ

|

Updated on: Jul 16, 2023 | 2:37 PM

SL vs PAK: ಪಂದ್ಯದ ಮೊದಲ ದಿನವೇ ಪಾಕಿಸ್ತಾನದ ಬೆಸ್ಟ್ ಬೌಲರ್ ಶಾಹೀನ್ ಶಾ ಅಫ್ರಿದಿ ಶತಕ ಸಿಡಿಸಿದ್ದಾರೆ. ಅಂದರೆ ಅಫ್ರಿದಿ ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್ ಪೂರೈಸಿದ್ದಾರೆ.

1 / 6
ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದ್ದು, ಪ್ರಸ್ತುತ ಗಾಲೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಪಂದ್ಯದ ಮೊದಲ ದಿನವೇ ಪಾಕಿಸ್ತಾನದ ಬೆಸ್ಟ್ ಬೌಲರ್ ಶಾಹೀನ್ ಶಾ ಆಫ್ರಿದಿ ಶತಕ ಸಿಡಿಸಿದ್ದಾರೆ. ಅಂದರೆ ಅಫ್ರಿದಿ ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್ ಪೂರೈಸಿದ್ದಾರೆ.

2 / 6
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಿಶಾನ್ ಮಧುಶಂಕ ಅವರನ್ನು 4 ರನ್​ಗಳಿಗೆ ಔಟ್ ಮಾಡುವ ಮೂಲಕ ಆಫ್ರಿದಿ ವಿಕೆಟ್​ಗಳ ಶತಕ ಪೂರೈಸಿದರು.

3 / 6
ಈ ಪಂದ್ಯಕ್ಕೂ ಮುನ್ನ ಅಫ್ರಿದಿ ತಮ್ಮ ವಿಕೆಟ್​ಗಳ ಶತಕಕ್ಕೆ ಕೇವಲ ಒಂದು ವಿಕೆಟ್ ಅಂತರದಲ್ಲಿದ್ದರು. ಆದರೆ ಈ ವಿಕೆಟ್ ಪಡೆಯಲು ಅವರು ಒಂದು ವರ್ಷ ಕಾಯಬೇಕಾಯಿತು. ಈ ಹಿಂದೆ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಈ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಬಹಳ ಕಾಲ ದೂರ ಉಳಿದಿದ್ದರು.

4 / 6
2022 ರ ಜುಲೈ 16 ರಿಂದ ಆರಂಭವಾಗಿದ್ದ ಆ ಪಂದ್ಯದಲ್ಲಿ 99ನೇ ವಿಕೆಟ್ ಆಗಿ ಮಹಿಷ್ ಟೀಕ್ಷಣ ಅವರನ್ನು ಔಟ್ ಮಾಡಿದ ಅಫ್ರಿದಿ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಏಳು ಓವರ್‌ಗಳನ್ನು ಬೌಲ್ ಮಾಡಿ ಆ ಬಳಿಕ ಇಂಜುರಿಯಿಂಗೆ ತುತ್ತಾದರು. ಹೀಗಾಗಿ ರಾಷ್ಟ್ರೀಯ ತಂಡದಿಂದ ಅಫ್ರಿದಿ ಹೊರಗುಳಿಯಬೇಕಾಯಿತು.

5 / 6
ಈ ಗಾಯದಿಂದಾಗಿ ಅಫ್ರಿದಿಗೆ ಕಳೆದ ವರ್ಷ ಏಷ್ಯಾಕಪ್ ಆಡಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಟಿ20 ವಿಶ್ವಕಪ್‌ನಲ್ಲಿ ಪಾಕ್ ಪರ ಕಣಕ್ಕಿಳಿದಿದ್ದ ಅಫ್ರಿದಿ ಮತ್ತೆ ಫೈನಲ್‌ ಪಂದ್ಯದಲ್ಲಿ ಗಾಯಗೊಂಡರು. ಈ ಕಾರಣಕ್ಕಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

6 / 6
ಆ ಬಳಿಕ ಮೊಣಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡ ಅಫ್ರಿದಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಿದ್ದರು. ತಮ್ಮ ನಾಯಕತ್ವದಲ್ಲಿ ಲಾಹೋರ್ ಖಲಂದರ್ಸ್‌ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದಲ್ಲದೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದರ ನಂತರ ಏಪ್ರಿಲ್-ಮೇನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಮತ್ತು ಟಿ20 ಸರಣಿಗಳಲ್ಲಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡರು.