ದಾಖಲೆ ವಿಶ್ವ ದಾಖಲೆ… ತನ್ನದೇ ವರ್ಲ್ಡ್​ ರೆಕಾರ್ಡ್ ಮುರಿದ ಸ್ಮೃತಿ ಮಂಧಾನ

Edited By:

Updated on: Dec 29, 2025 | 2:02 PM

Smriti Mandhana Records: ವುಮೆನ್ಸ್ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ ಸ್ಮೃತಿ ಮಂಧಾನ ಅವರ ಪರಾಕ್ರಮ ಮುಂದುವರೆದಿದೆ. ಅದು ಕೂಡ ಒಂದೇ ವರ್ಷದಲ್ಲಿ 1700+ ರನ್ ಕಲೆಹಾಕುವ ಮೂಲಕ. ಅಂದರೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ವರ್ಷದಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಮತ್ತೊಮ್ಮೆ ಸ್ಮೃತಿ ಮಂಧಾನ ಹೆಸರಿಗೆ ಸೇರ್ಪಡೆಯಾಗಿದೆ.

1 / 5
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನದೇ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್​ ಅನ್ನು ಮುರಿಯುವ ಮೂಲಕ ಎಂಬುದೇ ವಿಶೇಷ. 

2 / 5
ಅಂದರೆ ವುಮೆನ್ಸ್ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಸ್ಮೃತಿ ಮಂಧಾನ ಮರು ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ 2024 ರಲ್ಲಿ ಸ್ಮೃತಿ ಟಾಪ್ ಸ್ಕೋರರ್​ ಆಗಿ ಹೊಹೊಮ್ಮಿದ್ದರು. ಇದೀಗ ಕಳೆದ ವರ್ಷದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

3 / 5
2024 ರಲ್ಲಿ ಟೆಸ್ಟ್, ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 35 ಇನಿಂಗ್ಸ್ ಆಡಿದ್ದ ಸ್ಮೃತಿ ಮಂಧಾನ ಒಟ್ಟು 1659 ರನ್ ಕಲೆಹಾಕಿದ್ದರು. ಈ ಮೂಲಕ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಒಂದೇ ವರ್ಷ 1600+ ರನ್ ಕಲೆಹಾಕಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

4 / 5
ಇದೀಗ ತನ್ನದೇ ವಿಶ್ವ ದಾಖಲೆಯನ್ನು ಮುರಿದು ಸ್ಮೃತಿ ಮಂಧಾನ ಹೊಸ ಇತಿಹಾಸ ಬರೆದಿದ್ದಾರೆ. ಈ ವರ್ಷ ಈವರೆಗೆ 32 ಅಂತಾರಾಷ್ಟ್ರೀಯ ಇನಿಂಗ್ಸ್ ಆಡಿರುವ ಟೀಮ್ ಇಂಡಿಯಾ ಉಪನಾಯಕಿ ಒಟ್ಟು 1703 ರನ್ ಕಲೆಹಾಕಿದ್ದಾರೆ. ಈ ಮೂಲಕ ವುಮೆನ್ಸ್ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ ಒಂದೇ ವರ್ಷದೊಳಗೆ 1700+ ರನ್ ಕಲೆಹಾಕಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 / 5
ಅಷ್ಟೇ ಅಲ್ಲದೆ ಈ ವರ್ಷ ಕಲೆಹಾಕಿರುವ 1703 ರನ್​ಗಳೊಂದಿಗೆ ಸ್ಮೃತಿ ಮಂಧಾನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅತೀ ಕಡಿಮೆ ಇನಿಂಗ್ಸ್​​ಗಳ (281) ಮೂಲಕ 10 ಸಾವಿರ ರನ್​ ಕಲೆಹಾಕಿದ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.