ICC Awards: ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಸ್ಮೃತಿ ಮಂದಾನ ನಾಮನಿರ್ದೇಶನ..!
TV9 Web | Updated By: ಪೃಥ್ವಿಶಂಕರ
Updated on:
Dec 31, 2021 | 5:00 PM
ICC Awards: ಸ್ಮೃತಿ ಮಂದಾನ ಅವರನ್ನು 2021 ರ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ICC ಯಿಂದ ನಾಮನಿರ್ದೇಶನ ಮಾಡಲಾಗಿದೆ. ಸ್ಮೃತಿ ಮಂದಾನ ಅವರು ಬುಧವಾರ ವರ್ಷದ ಮಹಿಳಾ T20 ಕ್ರಿಕೆಟಿಗರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
1 / 5
ಎಡಗೈ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಅವರಿಗೆ 2021 ವರ್ಷ ಅತ್ಯುತ್ತಮವಾಗಿತ್ತು. ಟೆಸ್ಟ್, ODI ಮತ್ತು T20 ಎಲ್ಲಾ ಮೂರು ಸ್ವರೂಪಗಳಲ್ಲಿ ಮಂದಾನ ಅಬ್ಬರಿಸಿದ್ದರು. ಇದಲ್ಲದೆ, ಮಹಿಳಾ ಟಿ20 ಲೀಗ್‌ಗಳಲ್ಲಿ ಅವರ ಪ್ರದರ್ಶನವೂ ಅದ್ಭುತವಾಗಿತ್ತು. ಇಂಗ್ಲೆಂಡಿನಲ್ಲಿ ನಡೆದ ಮಹಿಳೆಯರ ಬಿಗ್ ಬ್ಯಾಷ್ ಆಗಿರಲಿ ಅಥವಾ ದಿ ಹಂಡ್ರೆಡ್ ಸ್ಪರ್ಧೆಯೇ ಆಗಿರಲಿ, ಎರಡೂ ಕಡೆ ಮಂದಾನ ಬ್ಯಾಟ್ ಮ್ಯಾಜಿಕ್ ಮಾಡಿದೆ. ಇದೀಗ ವರ್ಷದ ಕೊನೆಯ ದಿನದಂದು ಮಂದಾನಗೆ ಐಸಿಸಿ ಭಾರೀ ಗೌರವ ನೀಡಿದೆ.
2 / 5
ಸ್ಮೃತಿ ಮಂದಾನ ಅವರನ್ನು 2021 ರ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ICC ಯಿಂದ ನಾಮನಿರ್ದೇಶನ ಮಾಡಲಾಗಿದೆ. ಸ್ಮೃತಿ ಮಂದಾನ ಅವರು ಬುಧವಾರ ವರ್ಷದ ಮಹಿಳಾ T20 ಕ್ರಿಕೆಟಿಗರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
3 / 5
ಸ್ಮೃತಿ ಮಂದಾನ ಅವರು 2021 ರಲ್ಲಿ ಬ್ಯಾಟಿಂಗ್ ಮೂಲಕ ಮ್ಯಾಜಿಕ್ ಮಾಡಿದ್ದರು. ಅವರು ಈ ವರ್ಷ 2 ಟೆಸ್ಟ್‌ಗಳಲ್ಲಿ 61 ರ ಸರಾಸರಿಯಲ್ಲಿ 244 ರನ್ ಗಳಿಸಿದರು ಮತ್ತು ಹಗಲು-ರಾತ್ರಿ ಟೆಸ್ಟ್‌ಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗರಾದರು.
4 / 5
ಮಂದಾನ ಈ ವರ್ಷ 11 ಏಕದಿನ ಪಂದ್ಯಗಳಲ್ಲಿ 35.20 ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 85 ಕ್ಕಿಂತ ಹೆಚ್ಚಿತ್ತು. ಅವರು 2 ಅರ್ಧ ಶತಕಗಳನ್ನು ಗಳಿಸಿದರು. T20 ನಲ್ಲಿ, ಮಂಧಾನ 9 T20 ಇನ್ನಿಂಗ್ಸ್‌ಗಳಲ್ಲಿ 31 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 2 ಅರ್ಧ ಶತಕಗಳನ್ನು ಒಳಗೊಂಡಂತೆ 255 ರನ್ ಗಳಿಸಿದರು.
5 / 5
ಸ್ಮೃತಿ ಮಂದಾನ ಹೊರತಾಗಿ, ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರ್ ಪ್ರಶಸ್ತಿಗೆ ಟ್ಯಾಮಿ ಬ್ಯೂಮಾಂಟ್, ಲಿಜ್ಜೀ ಲೀ ಮತ್ತು ಗ್ಯಾಬಿ ಲೂಯಿಸ್ ಅವರನ್ನು ನಾಮನಿರ್ದೇಶನ ಮಾಡಿದೆ. ಹೀಗಿರುವಾಗ ಮಂದಾನಗೆ ಕಠಿಣ ಪೈಪೋಟಿ ಎದುರಾಗಲಿದೆ.