AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಇನ್ನಿಂಗ್ಸ್ ಆರಂಭಿಸಿದ ದಾದಾ; ಸೌರವ್ ಗಂಗೂಲಿಗೆ ಮುಖ್ಯ ಕೋಚ್ ಹುದ್ದೆ

Sourav Ganguly: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ದಕ್ಷಿಣ ಆಫ್ರಿಕಾದ SA20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದು ಅವರ ವೃತ್ತಿಪರ ಕ್ರಿಕೆಟ್‌ನಲ್ಲಿ ಮೊದಲ ಪೂರ್ಣ ಸಮಯದ ಕೋಚಿಂಗ್ ಅನುಭವ. ಬಿಸಿಸಿಐ ಅಧ್ಯಕ್ಷರಾಗಿದ್ದ ಅನುಭವ ಹೊಂದಿರುವ ಗಂಗೂಲಿ ಅವರು ಈ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ.

ಪೃಥ್ವಿಶಂಕರ
|

Updated on: Aug 24, 2025 | 5:37 PM

Share
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕ್ರಿಕೆಟ್​ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಹಿಂದೆ ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಸೌರವ್ ಗಂಗೂಲಿ ಶೀಘ್ರದಲ್ಲೇ ದೊಡ್ಡ ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್ ಹುದ್ದೆಗೇರಲಿದ್ದಾರೆ. ಅಂದರೆ ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಮುಖ್ಯ ಕೋಚ್ ಆಗಿ ತಂಡವೊಂದಕ್ಕೆ ತರಬೇತಿ ನೀಡಲಿದ್ದಾರೆ.

1 / 6
ಇತ್ತೀಚೆಗಷ್ಟೇ ಸೌರವ್ ಗಂಗೂಲಿ ಟೀಂ ಇಂಡಿಯಾದ ಕೋಚ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದರು. ನಾನು ಭಾರತೀಯ ತಂಡದ ಕೋಚ್ ಆಗಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರ ನಿರ್ಧಾರವನ್ನು ಒಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ.

2 / 6
ವಾಸ್ತವವಾಗಿ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಎಸ್‌ಎ20 ನ ಮುಂಬರುವ ಸೀಸನ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ಅವರನ್ನು ನೇಮಕ ಮಾಡಲಾಗಿದೆ. ವೃತ್ತಿಪರ ಕ್ರಿಕೆಟ್ ತಂಡದೊಂದಿಗೆ ಗಂಗೂಲಿಯ ಮೊದಲ ಪೂರ್ಣ ಸಮಯದ ತರಬೇತಿ ಅನುಭವ ಇದಾಗಿದೆ.

3 / 6
ಪ್ರಿಟೋರಿಯಾ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗಂಗೂಲಿ ಅವರ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದೆ. ‘ಕೋಲ್ಕತ್ತಾ ರಾಜಕುಮಾರರಿಗೆ ಹೊಸ ಆರಂಭ. ಸೌರವ್ ಗಂಗೂಲಿಯನ್ನು ನಮ್ಮ ಹೊಸ ಮುಖ್ಯ ಕೋಚ್ ಆಗಿ ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದೆ.

4 / 6
ಕಳೆದ ಆವೃತ್ತಿಯಲ್ಲಿ ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಒಂದು ದಿನದ ನಂತರ ಗಂಗೂಲಿ ಅವರ ನೇಮಕವಾಗಿದೆ. ಈಗ ಸೌರವ್ ಗಂಗೂಲಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮೇಲೆ ಹೇಳಿದಂತೆ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಇತ್ತೀಚೆಗೆ, ಅವರು ಐಪಿಎಲ್ ಮತ್ತು ಡಬ್ಲ್ಯೂಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕ್ರಿಕೆಟ್ ನಿರ್ದೇಶಕರಾಗಿದ್ದರು.

5 / 6
ಮುಂಬರುವ SA20 ಸೀಸನ್ 26 ಡಿಸೆಂಬರ್ 2025 ರಿಂದ 25 ಜನವರಿ 2026 ರವರೆಗೆ ನಡೆಯಲಿದೆ. ಆದಾಗ್ಯೂ ಕಳೆದ ಸೀಸನ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ತಂಡವನ್ನು ಹೊಸದಾಗಿ ಕಟ್ಟುವ ಸವಾಲು ಗಂಗೂಲಿ ಮುಂದಿದೆ. ಫ್ರಾಂಚೈಸಿ ಮೊದಲ ಸೀಸನ್‌ನಲ್ಲಿ ಫೈನಲ್ ತಲುಪಿತ್ತು, ಆದರೆ 2025 ರಲ್ಲಿ ಅದರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು.

6 / 6