
ಭಾರತದಲ್ಲಿ ಸೌತ್ ಆಫ್ರಿಕಾ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಕಳೆದ 93 ವರ್ಷಗಳಿಂದ ತವರಿನಲ್ಲಿ ಟೀಮ್ ಇಂಡಿಯಾ ಮೆರೆದ ಪ್ರಾಬಲ್ಯವನ್ನು ಕೊನೆಗಾಣಿಸುವ ಮೂಲಕ. ಅಂದರೆ ಇದೇ ಮೊದಲ ಬಾರಿಗೆ ತಂಡವೊಂದು ಟೀಮ್ ಇಂಡಿಯಾಗೆ 548 ರನ್ಗಳ ಗುರಿ ನೀಡಿದೆ.

93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಟೀಮ್ ಇಂಡಿಯಾಗೆ ಯಾವತ್ತೂ ತವರಿನಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ 545+ ರನ್ಗಳ ಗುರಿ ಪಡೆದೇ ಇರಲಿಲ್ಲ. ಈ ಬಾರಿ ಭಾರತೀಯ ಬೌಲರ್ಗಳ ಬೆಂಡೆತ್ತುವ ಮೂಲಕ ಸೌತ್ ಆಫ್ರಿಕಾ ಪಡೆ ಆಸ್ಟ್ರೇಲಿಯಾದ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದೆ.

ಇದಕ್ಕೂ ಮುನ್ನ 2004 ರಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾಗೆ 542 ರನ್ಗಳ ಗುರಿ ನೀಡಿತ್ತು. ಇದು ತವರಿನಲ್ಲಿ ತಂಡವೊಂದು ನಾಲ್ಕನೇ ಇನಿಂಗ್ಸ್ನಲ್ಲಿ ನೀಡಿದ ಗರಿಷ್ಠ ಗುರಿಯಾಗಿತ್ತು. ಇದೀಗ ಬರೋಬ್ಬರಿ 21 ವರ್ಷಗಳ ಸೌತ್ ಆಫ್ರಿಕಾ ತಂಡ ಈ ದಾಖಲೆಯನ್ನು ಮುರಿದಿದೆ.

ಮೊದಲ ಇನಿಂಗ್ಸ್ನಲ್ಲಿ 288 ರನ್ಗಳ ಮುನ್ನಡೆ ಪಡೆದಿದ್ದ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಬರೋಬ್ಬರಿ 260 ರನ್ ಕಲೆಹಾಕಿದೆ. ಈ ಮೂಲಕ ಭಾರತದಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ಗಳ ಟಾರ್ಗೆಟ್ (548) ನೀಡಿದ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡ ನಿರ್ಮಿಸಿದೆ.

ಇನ್ನು ಈ ಗುರಿಯನ್ನು ಬೆನ್ನತ್ತಿ ಟೀಮ್ ಇಂಡಿಯಾ ಗೆಲ್ಲುವುದು ಕೂಡ ಅಸಾಧ್ಯ. ಏಕೆಂದರೆ ಕೊನೆಯ ಇನಿಂಗ್ಸ್ನಲ್ಲಿ 500+ ರನ್ಗಳ ಗುರಿ ಬೆನ್ನತ್ತಿರುವುದು ಕೇವಲ ಒಮ್ಮೆ ಮಾತ್ರ. ಅದು ಕೂಡ 1939 ರಲ್ಲಿ. ಅಂದು ಸೌತ್ ಆಫ್ರಿಕಾ ನೀಡಿದ 696 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 656 ರನ್ಗಳಿಸಿ ಪಂದ್ಯವನ್ನು ಡ್ರಾಗೊಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಭಾರತದ ಗೆಲುವು ಅಸಾಧ್ಯ ಎಂದೇ ಹೇಳಬಹುದು.