AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

181 ವರ್ಷಗಳ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ಬರೆದ ಪಾಕ್ ಆಟಗಾರ

World Record: ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿದ್ದು 1844 ರಲ್ಲಿ. ಮೊದಲ ಮ್ಯಾಚ್​ನಲ್ಲಿ ಯುಎಸ್​ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದ್ದವು. ಇದಾದ ಬಳಿಕ ಹಲವು ತಂಡಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಹಲವು ದೇಶಗಳ ಆಟಗಾರರು ಇಂಟರ್​ನ್ಯಾಷನಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಇವರಲ್ಲಿ ಒಂದೇ ವರ್ಷ ಅತೀ ಹೆಚ್ಚು ಮ್ಯಾಚ್ ಆಡಿರುವುದು ಪಾಕ್ ಆಟಗಾರ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Nov 26, 2025 | 7:54 AM

Share
ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿ ಬರೋಬ್ಬರಿ 181 ವರ್ಷಗಳಾಗಿವೆ. ಈ 181 ವರ್ಷಗಳಲ್ಲಿ ಒಂದೇ ವರ್ಷ ಅತ್ಯಧಿಕ ಇಂಟರ್​ನ್ಯಾಷನಲ್ ಮ್ಯಾಚ್​ಗಳನ್ನು ಆಡಿದ ವಿಶ್ವ ದಾಖಲೆ ಇದೀಗ ಪಾಕಿಸ್ತಾನ್ ತಂಡದ ಆಟಗಾರ ಸಲ್ಮಾನ್ ಅಲಿ ಅಘಾ (Salman Ali Agha) ಹೆಸರಿಗೆ ಸೇರ್ಪಡೆಯಾಗಿದೆ.

1 / 5
ಝಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳ ವಿರುದ್ಧದ ತ್ರಿಕೋನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳನ್ನಾಡುವ ಮೂಲಕ ಸಲ್ಮಾನ್ ಅಲಿ ಅಘಾ ಒಂದೇ ವರ್ಷದಲ್ಲಿ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಕೂಡ ರಾಹುಲ್ ದ್ರಾವಿಡ್ ಅವರ ವರ್ಲ್ಡ್​ ರೆಕಾರ್ಡ್​ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 5
ಟೀಮ್ ಇಂಡಿಯಾ ಲೆಜೆಂಡ್ ರಾಹುಲ್ ದ್ರಾವಿಡ್ 1999 ರಲ್ಲಿ ಬರೋಬ್ಬರಿ 53 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. ಈ ಮೂಲಕ ಒಂದೇ ವರ್ಷ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.

3 / 5
ಇದಾದ ಬಳಿಕ 2000 ರಲ್ಲಿ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಸರಿಗಟ್ಟಿದ್ದರು. 2000 ರಲ್ಲಿ ಯೂಸುಫ್ 53 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆ ಬಳಿಕ 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ 53 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಮೂಲಕ ಈ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದರು.

4 / 5
ಇದೀಗ ಸಲ್ಮಾನ್ ಅಲಿ ಅಘಾ ಈ ದಾಖಲೆಗಳನ್ನು ಅಳಿಸಿ ಹಾಕಿ ಮುನ್ನುಗ್ಗಿದ್ದಾರೆ. 2025 ರಲ್ಲಿ ಸಲ್ಮಾನ್ ಅಲಿ ಅಘಾ ಬರೋಬ್ಬರಿ 54 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ 181 ವರ್ಷಗಳ ಇಂಟರ್​ನ್ಯಾಷನಲ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತೀ ಹೆಚ್ಚು ಮ್ಯಾಚ್​ಗಳನ್ನಾಡಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

5 / 5