AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಗರ್ವಭಂಗ… ಹೊಸ ಇತಿಹಾಸ ನಿರ್ಮಿಸಿದ ಸೌತ್ ಆಫ್ರಿಕಾ

India vs South Africa Test: ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಟೂರ್ನಿಯ ಮೊದಲ ಮ್ಯಾಚ್​ನಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಈ ಸರಣಿಯನ್ನು ಸಮಗೊಳಿಸಲು ದ್ವಿತೀಯ ಮ್ಯಾಚ್​ನಲ್ಲಿ ಟೀಮ್ ಇಂಡಿಯಾಗೆ ಗೆಲುವು ಅನಿವಾರ್ಯ.

ಝಾಹಿರ್ ಯೂಸುಫ್
|

Updated on: Nov 25, 2025 | 5:53 PM

Share
ಭಾರತದಲ್ಲಿ ಸೌತ್ ಆಫ್ರಿಕಾ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಕಳೆದ 93 ವರ್ಷಗಳಿಂದ ತವರಿನಲ್ಲಿ ಟೀಮ್ ಇಂಡಿಯಾ ಮೆರೆದ ಪ್ರಾಬಲ್ಯವನ್ನು ಕೊನೆಗಾಣಿಸುವ ಮೂಲಕ. ಅಂದರೆ ಇದೇ ಮೊದಲ ಬಾರಿಗೆ ತಂಡವೊಂದು ಟೀಮ್ ಇಂಡಿಯಾಗೆ 548 ರನ್​​ಗಳ ಗುರಿ ನೀಡಿದೆ.

1 / 5
93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಟೀಮ್ ಇಂಡಿಯಾಗೆ ಯಾವತ್ತೂ ತವರಿನಲ್ಲಿ ನಾಲ್ಕನೇ ಇನಿಂಗ್ಸ್​ನಲ್ಲಿ 545+ ರನ್​​​ಗಳ ಗುರಿ ಪಡೆದೇ ಇರಲಿಲ್ಲ. ಈ ಬಾರಿ ಭಾರತೀಯ ಬೌಲರ್​​​ಗಳ ಬೆಂಡೆತ್ತುವ ಮೂಲಕ ಸೌತ್ ಆಫ್ರಿಕಾ ಪಡೆ ಆಸ್ಟ್ರೇಲಿಯಾದ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದೆ.

2 / 5
ಇದಕ್ಕೂ ಮುನ್ನ 2004 ರಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾಗೆ 542 ರನ್​​​ಗಳ ಗುರಿ ನೀಡಿತ್ತು. ಇದು ತವರಿನಲ್ಲಿ ತಂಡವೊಂದು ನಾಲ್ಕನೇ ಇನಿಂಗ್ಸ್​ನಲ್ಲಿ ನೀಡಿದ ಗರಿಷ್ಠ ಗುರಿಯಾಗಿತ್ತು. ಇದೀಗ ಬರೋಬ್ಬರಿ 21 ವರ್ಷಗಳ ಸೌತ್ ಆಫ್ರಿಕಾ ತಂಡ ಈ ದಾಖಲೆಯನ್ನು ಮುರಿದಿದೆ.

3 / 5
ಮೊದಲ ಇನಿಂಗ್ಸ್​ನಲ್ಲಿ 288 ರನ್​​​ಗಳ ಮುನ್ನಡೆ ಪಡೆದಿದ್ದ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್​​ನಲ್ಲಿ ಬರೋಬ್ಬರಿ 260 ರನ್​ ಕಲೆಹಾಕಿದೆ. ಈ ಮೂಲಕ ಭಾರತದಲ್ಲಿ ನಾಲ್ಕನೇ ಇನಿಂಗ್ಸ್​​ನಲ್ಲಿ ಅತ್ಯಧಿಕ ರನ್​​ಗಳ ಟಾರ್ಗೆಟ್ (548) ನೀಡಿದ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡ ನಿರ್ಮಿಸಿದೆ.

4 / 5
ಇನ್ನು ಈ ಗುರಿಯನ್ನು ಬೆನ್ನತ್ತಿ ಟೀಮ್ ಇಂಡಿಯಾ ಗೆಲ್ಲುವುದು ಕೂಡ ಅಸಾಧ್ಯ. ಏಕೆಂದರೆ ಕೊನೆಯ ಇನಿಂಗ್ಸ್​ನಲ್ಲಿ 500+ ರನ್​​​ಗಳ ಗುರಿ ಬೆನ್ನತ್ತಿರುವುದು ಕೇವಲ ಒಮ್ಮೆ ಮಾತ್ರ. ಅದು ಕೂಡ 1939 ರಲ್ಲಿ. ಅಂದು ಸೌತ್ ಆಫ್ರಿಕಾ ನೀಡಿದ 696 ರನ್​​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 656 ರನ್​ಗಳಿಸಿ ಪಂದ್ಯವನ್ನು ಡ್ರಾಗೊಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಭಾರತದ ಗೆಲುವು ಅಸಾಧ್ಯ ಎಂದೇ ಹೇಳಬಹುದು.

5 / 5