ಆಫ್ರಿಕಾ ತಂಡಕ್ಕೆ ಬಿಗ್ ಶಾಕ್; ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ ಸ್ಫೋಟಕ ಬ್ಯಾಟರ್..!

|

Updated on: Jan 08, 2024 | 2:49 PM

Heinrich Klaasen Retirement: 2019 ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಹೆನ್ರಿಕ್ ಕ್ಲಾಸೆನ್ ಇದರ ನಂತರ 2023 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ನಾಲ್ಕು ವರ್ಷಗಳಲ್ಲಿ, ಅವರು ಆಫ್ರಿಕನ್ ತಂಡಕ್ಕಾಗಿ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು.

1 / 8
ಒಂದು ವಾರದೊಳಗೆ ಆಫ್ರಿಕಾ ತಂಡಕ್ಕೆ ಎರಡೆರಡು ಬ್ಯಾಕ್​ ಟು ಬ್ಯಾಕ್ ಆಘಾತ ಎದುರಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಆಫ್ರಿಕಾ ತಂಡದ ಮಾಜಿ ನಾಯಕ ಡೀನ್ ಎಲ್ಗರ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಇದೀಗ ತಂಡದ ಮತ್ತೊಬ್ಬ ಆಟಗಾರ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

2 / 8
ಡೀನ್ ಎಲ್ಗರ್ ಬಳಿಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ಸ್ಟಾರ್ ಆಟಗಾರ ಯಾರು ಎಂದರೆ ಅದು ಆಫ್ರಿಕಾ ತಂಡದ ಸ್ಫೋಟಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್. ಅನುಭವಿ ಸೀಮಿತ ಓವರ್‌ಗಳ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ.

3 / 8
2019 ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಹೆನ್ರಿಕ್ ಕ್ಲಾಸೆನ್ ಇದರ ನಂತರ 2023 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ನಾಲ್ಕು ವರ್ಷಗಳಲ್ಲಿ, ಅವರು ಆಫ್ರಿಕನ್ ತಂಡಕ್ಕಾಗಿ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು.

4 / 8
ಆಫ್ರಿಕಾ ಪರ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾದ ಕ್ಲಾಸೆನ್ ಅವರ ಬ್ಯಾಟ್‌ನಿಂದ ಎಂಟು ಇನ್ನಿಂಗ್ಸ್‌ಗಳಲ್ಲಿ 13.0 ಸರಾಸರಿಯಲ್ಲಿ 104 ರನ್‌ಗಳು ಸಿಡಿದಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ವೈಯಕ್ತಿಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವೆಂದರೆ ಅದು ಕೇವಲ 35 ರನ್ ಮಾತ್ರ.

5 / 8
ವಾಸ್ತವವಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಕ್ಲಾಸೆನ್ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅವರ ಜಾಗದಲ್ಲಿ ಕೈಲ್ ವೆರೆನ್​ಗೆ ಅವಕಾಶ ಸಿಕ್ಕಿತ್ತು. ಆದರೆ ತಂಡದ ಆಯ್ಕೆಯಾದ ಬಳಿಕ ಮಾತನಾಡಿದ್ದ ತಂಡದ ಕೋಚ್ ಶುಕ್ರಿ ಕಾನ್ರಾಡ್, ಕ್ಲಾಸೆನ್ ಇನ್ನೂ ಟೆಸ್ಟ್ ತಂಡದ ಯೋಜನೆಗಳ ಭಾಗವಾಗಿದ್ದಾರೆ ಎಂದಿದ್ದರು. ಆದರೀಗ ಕ್ಲಾಸೆನ್ ಆ ಮಾದರಿಯಿಂದಲೇ ಹೊರನಡೆದಿದ್ದಾರೆ.

6 / 8
ಕ್ಲಾಸೆನ್ ರೆಡ್ ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದು. ಆದರೆ ಅವರು ಸೀಮಿತ ಓವರ್​ಗಳಲ್ಲಿ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರೆಸಲಿದ್ದಾರೆ. 32 ವರ್ಷ ವಯಸ್ಸಿನ ಕ್ಲಾಸೆನ್​ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಆಫ್ರಿಕಾ ತಂಡಕ್ಕೆ ಮತ್ತೆ ಮರಳಲು ಹರಸಾಹಸ ಪಡುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.

7 / 8
ಹೆನ್ರಿಕ್ ಕ್ಲಾಸೆನ್ ಅವರ ಏಕದಿನ ಮತ್ತು ಟಿ20 ವೃತ್ತಿ ಬದುಕಿನ ಬಗ್ಗೆ ಹೇಳುವುದಾದರೆ,. ಸೀಮಿತ ಓವರ್​ಗಳಲ್ಲಿ ಪ್ರಸ್ತುತ ಅವರು ಪ್ರೋಟೀಸ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಕ್ಲಾಸೆನ್ ಇದುವರೆಗೆ ಆಫ್ರಿಕಾ ಪರ ಒಟ್ಟು 54 ಏಕದಿನ ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ.

8 / 8
ಈ ಅವಧಿಯಲ್ಲಿ, ಅವರು 50 ಏಕದಿನ ಇನ್ನಿಂಗ್ಸ್‌ಗಳಲ್ಲಿ 40.07 ಸರಾಸರಿಯಲ್ಲಿ 1723 ರನ್ ಮತ್ತು 39 ಟಿ20 ಇನ್ನಿಂಗ್ಸ್‌ಗಳಲ್ಲಿ 22.56 ಸರಾಸರಿಯಲ್ಲಿ 722 ರನ್ ಗಳಿಸಿದರು. ಕ್ಲಾಸೆನ್ ಏಕದಿನದಲ್ಲಿ ನಾಲ್ಕು ಶತಕ ಮತ್ತು ಆರು ಅರ್ಧ ಶತಕಗಳನ್ನು ಸಿಡಿಸಿದರೆ, ಟಿ20 ಮಾದರಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಸಿಡಿಸಿದ್ದಾರೆ.