AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

INDW vs SAW: ತ್ರಿಕೋನ ಸರಣಿ ಗೆದ್ದ ಆಫ್ರಿಕಾ: ಫೈನಲ್​ನಲ್ಲಿ ಭಾರತೀಯ ಮಹಿಳೆಯರ ಕಳಪೆ ಪ್ರದರ್ಶನ

South Africa women vs India Women: ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳೆಯರ ತ್ರಿಕೋನ ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದೆ. ಫೈನಲ್ ಕಾದಾಟದಲ್ಲಿ ಹರಿಣಗಳ ದಾಳಿಗೆ ತತ್ತರಿಸಿದ ಹರ್ಮನ್​ಪ್ರೀತ್ ಪಡೆ ಸೋಲುಂಡಿದೆ.

Vinay Bhat
|

Updated on: Feb 03, 2023 | 7:59 AM

Share
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳೆಯರ ತ್ರಿಕೋನ ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದೆ. ರೌಂಡ್ ರಾಬಿನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ಗೆ ಸೋಲುಣಿಸಿ ಫೈನಲ್ ತಲುಪಿದ್ದ ಭಾರತ ಮಹಿಳಾ ತಂಡ ಫೈನಲ್​ಗೆ ಪ್ರವೇಶ ಪಡೆದಿತ್ತು. ಆದರೆ, ಫೈನಲ್ ಕಾದಾಟದಲ್ಲಿ ಹರಿಣಗಳ ದಾಳಿಗೆ ತತ್ತರಿಸಿದ ಹರ್ಮನ್​ಪ್ರೀತ್ ಪಡೆ ಸೋಲುಂಡಿದೆ.

1 / 8
ಈಸ್ಟ್‌ ಲಂಡನ್​ನ ಬಫೆಲೊ ಪಾರ್ಕ್​ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ಅಲ್ಪ ಮೊತ್ತದ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್​ಗಳ ಜಯ ಸಾಧಿಸುವ ಮೂಲಕ ತ್ರಿಕೋನ ಸರಣಿಯನ್ನು ವಶಪಡಿಸಿಕೊಂಡಿದೆ.

2 / 8
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮುನಃ ಕಳಪೆ ಆರಂಭ ಪಡೆದುಕೊಂಡಿತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಜೆಮಿಯಾ ರೋಡ್ರಿಗಸ್ 11 ರನ್​ಗೆ ಔಟಾದರು.

3 / 8
ಈ ಸಂದರ್ಭ ಜೊತೆಯಾದ ಹರ್ಲಿನ್ ಡಿಯೋಲ್ ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್ ಕೆಲಹೊತ್ತು ತಂಡಕ್ಕೆ ಆಸರೆಯಾದರು. ಕೌರ್ 22 ಎಸೆತಗಳಲ್ಲಿ 21 ರನ್ ಕಲೆಹಾಕಿದರೆ, ಹರ್ಲಿನ್ 56 ಎಸೆತಗಳಲ್ಲಿ 46 ರನ್ ಬಾರಿಸಿದರು.

4 / 8
ಕೊನೆಯಲ್ಲಿ ದೀಪ್ತಿ ಶರ್ಮಾ ಅಜೇಯ 16 ಹಾಗೂ ಪೂಜಾ ವಸ್ತ್ರಾಕರ್ ಅಜೇಯ 1 ರನ್ ಕಲೆಹಾಕಿದರು. ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಆಫ್ರಿಕಾ ಪರ ನಾನ್‌ಕುಲುಲೆಕೊ ಮ್ಲಾಬಾ 2 ವಿಕೆಟ್ ಪಡೆದರೆ, ಅಯಬೊಂಗ ಖಾಕ ಹಾಗೂ ನಾಯಕಿ ಸ್ಯುನ್ ಲುಸ್ ತಲಾ 1 ವಿಕೆಟ್ ಪಡೆದರು.

5 / 8
ಭಾರತ ಗಳಿಸಿದ ಅಲ್ಪ ಮೊತ್ತವು ಗೆಲುವಿಗೆ ಸಾಕಾಗಲಿಲ್ಲ. ಭಾರತದ ಬೌಲರ್‌ಗಳ ಪ್ರಯತ್ನಕ್ಕೆ ಜಯದ ಫಲ ಸಿಗಲಿಲ್ಲ. ದೀಪ್ತಿ ಶರ್ಮಾ, ಸ್ನೇಹಾ ರಾಣಾ ಹಾಗೂ ರಾಜೇಶ್ವರಿ ಗಾಯಕವಾಡ ಅವರು ಉತ್ತಮ ಬೌಲಿಂಗ್ ಮಾಡಿದರು. ಅದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 47ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು.

6 / 8
ಆದರೆ ಈ ಹಂತದಲ್ಲಿ ಏಕಾಂಗಿ ಹೋರಾಟ ಮಾಡಿದ ಐದನೇ ಕ್ರಮಾಂಕದ ಶ್ಲೊಯೆ ಟ್ರಯಾನ್ ತಂಡಕ್ಕೆ ಗೆಲುವು ತಂದುಕೊಟ್ಟರು. ಟ್ರಯಾನ್ ಕೇವಲ 32 ಎಸೆತಗಳಲ್ಲಿ 6 ಫೋರ್, 2 ಸಿಕ್ಸರ್​ನೊಂದಿಗೆ ಅಜೇಯ 57 ರನ್ ಚಚ್ಚಿದರು.

7 / 8
ದಕ್ಷಿಣ ಆಫ್ರಿಕಾ 18 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿತು. ಭಾರತ ಪರ ಸ್ನೇಹ್ ರಾಣ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ರಾಜೇಶ್ವರಿ ಹಾಗೂ ರೇಣುಕಾ ಸಿಂಗ್ ತಲಾ 1 ವಿಕೆಟ್ ಪಡೆದರು.

8 / 8
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?

ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ

ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ

‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ

ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ

400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?

ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ

ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ

ಕುಡಿದ ಮತ್ತಲ್ಲಿ ಅಪಘಾತ ಮಾಡಿ ನಟ ಮಯೂರ್ ಪಟೇಲ್ ಹೇಳಿದ್ದೇನು?

ಪಿತೃಗಳ ಹೆಸರಿನಲ್ಲಿ ಗಿಡಗಳನ್ನು ನೆಡುವುದರ ಹಿಂದಿನ ಮಹತ್ವ