ಬರೋಬ್ಬರಿ 463 ರನ್​ಗಳು… ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್​ಕೆ

Updated on: Sep 06, 2025 | 7:54 AM

Matthew Breetzke Records: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲೆರಡು ಪಂದ್ಯಗಳ ಮೂಲಕ 200+ ರನ್​ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಮ್ಯಾಥ್ಯೂ ಬ್ರೀಟ್ಝ್​ಕೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯೊಂದಿಗೆ ಮತ್ತೊಂದು ಭರ್ಜರಿ ರೆಕಾರ್ಡ್ ಬರೆಯುವಲ್ಲಿ ಸೌತ್ ಆಫ್ರಿಕಾದ ಯುವ ದಾಂಡಿಗ ಯಶಸ್ವಿಯಾಗಿದ್ದಾರೆ.

1 / 6
ಸೌತ್ ಆಫ್ರಿಕಾದ ಯುವ ದಾಂಡಿಗ ಮ್ಯಾಥ್ಯೂ ಬ್ರೀಟ್ಝ್​ಕೆ (Matthew breetzke) ಏಕದಿನ ಕ್ರಿಕೆಟ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಮೊದಲ ಐದು ಪಂದ್ಯಗಳ ಮೂಲಕ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಐದು ಮ್ಯಾಚ್​ಗಳ ಮೂಲಕ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಮ್ಯಾಥ್ಯೂ ಬ್ರೀಟ್ಝ್​ಕೆ ತಮ್ಮದಾಗಿಸಿಕೊಂಡಿದ್ದಾರೆ.

2 / 6
ಲಂಡನ್​​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಬ್ರೀಟ್ಝ್​ಕೆ 77 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಆಕರ್ಷಕ 85 ರನ್ ಬಾರಿಸಿದರು.

3 / 6
ಈ 85 ರನ್​ಗಳೊಂದಿಗೆ ಬ್ರೀಟ್ಝ್​ಕೆ ಏಕದಿನ ಕ್ರಿಕೆಟ್​ನಲ್ಲಿ 400+ ರನ್​ಗಳಿಸಿದ ಸಾಧನೆ ಮಾಡಿದ್ದಾರೆ. ಅದು ಕೂಡ ಕೇವಲ 5 ಪಂದ್ಯಗಳ ಮೂಲಕ ಎಂಬುದು ವಿಶೇಷ. ಅಂದರೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ 5 ಮ್ಯಾಚ್​ಗಳ ಮೂಲಕ 400+ ರನ್ ಕಲೆಹಾಕಿದ ವಿಶ್ವ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಮ್ಯಾಥ್ಯೂ ಬ್ರೀಟ್ಝ್​ಕೆ ತಮ್ಮಾಗಿಸಿಕೊಂಡಿದ್ದಾರೆ.

4 / 6
ಇದಕ್ಕೂ ಮುನ್ನ ಏಕದಿನ ಕ್ರಿಕೆಟ್​ನ ಮೊದಲ 5 ಇನಿಂಗ್ಸ್​ಗಳಲ್ಲಿ ಅತೀ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆ ನೆದರ್​ಲೆಂಡ್ಸ್​ನ ಟಾಮ್ ಕೂಪರ್ ಹೆಸರಿನಲ್ಲಿತ್ತು. 2010 ರಲ್ಲಿ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಕೂಪರ್ ಮೊದಲ ಐದು ಇನಿಂಗ್ಸ್​ಗಳ ಮೂಲಕ ಕಲೆಹಾಕಿದ್ದು ಬರೋಬ್ಬರಿ 374 ರನ್​​ಗಳು.

5 / 6
ಇದೀಗ ಕೂಪರ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿ ಮ್ಯಾಥ್ಯೂ ಬ್ರೀಟ್ಝ್​ಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಏಕದಿನ ಕ್ರಿಕೆಟ್​ನಲ್ಲಿ ಆಡಿದ ಮೊದಲ ಐದು ಇನಿಂಗ್ಸ್​ಗಳಲ್ಲೂ 50+ ಸ್ಕೋರ್​ಗಳಿಸುವ ಮೂಲಕ. ಅಂದರೆ ಚೊಚ್ಚಲ ಪಂದ್ಯದಲ್ಲಿ 150 ರನ್ ಬಾರಿಸಿದ್ದ ಬ್ರೀಟ್ಝ್​ಕೆ ದ್ವಿತೀಯ ಪಂದ್ಯದಲ್ಲಿ 83 ರನ್​ ಗಳಿಸಿದ್ದರು. ಇನ್ನು ಮೂರನೇ ಪಂದ್ಯದಲ್ಲಿ 57, ನಾಲ್ಕನೇ ಪಂದ್ಯದಲ್ಲಿ 88 ರನ್​ ಕಲೆಹಾಕಿದ್ದರು. ಇದೀಗ ಐದನೇ ಪಂದ್ಯದಲ್ಲಿ 85 ರನ್ ಬಾರಿಸಿದ್ದಾರೆ.

6 / 6
ಅಂದರೆ ಮ್ಯಾಥ್ಯೂ ಬ್ರೀಟ್ಝ್​ಕೆ ಮೊದಲ ಐದು ಪಂದ್ಯಗಳಲ್ಲಿ ಒಂದು ಶತಕ ಹಾಗೂ 4 ಅರ್ಧಶತಕಗಳೊಂದಿಗೆ  ಒಟ್ಟು 463 ರನ್​​ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಐದು ಇನಿಂಗ್ಸ್​ಗಳಲ್ಲಿ 400+ ರನ್​ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು 26 ವರ್ಷದ ಮ್ಯಾಥ್ಯೂ ಬ್ರೀಟ್ಝ್​ಕೆ ತಮ್ಮದಾಗಿಸಿಕೊಂಡಿದ್ದಾರೆ.