Yuzvendra Chahal: ‘ನನಗೆ ಅದೊಂದು ಕನಸಿದೆ’; ವೃತ್ತಿ ಬದುಕಿನ ಮಹದಾಸೆಯನ್ನು ಬಿಚ್ಚಿಟ್ಟ ಯುಜ್ವೇಂದ್ರ ಚಹಾಲ್

|

Updated on: Jun 19, 2023 | 10:38 AM

Yuzvendra Chahal: ಚಹಾಲ್ ಟೀಂ ಇಂಡಿಯಾ ಪರ ಇದುವರೆಗೆ ಒಟ್ಟು 147 ಪಂದ್ಯಗಳನ್ನು ಆಡಿದ್ದಾರೆ. ಆದರೆ 7 ವರ್ಷಗಳ ಹಿಂದೆಯೇ ಟೀಂ ಇಂಡಿಯಾ ಸೇರಿಕೊಂಡ ಚಹಾಲ್​ಗೆ ಇದುವರೆಗು ಟೆಸ್ಟ್ ತಂಡದ ಕದ ತೆರೆದಿಲ್ಲ.

1 / 6
ಏಳು ವರ್ಷಗಳ ಹಿಂದೆ ಅಂದರೆ, 2016 ರಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್​ಗೆ ಕಾಲಿಟ್ಟ  ಯುಜ್ವೇಂದ್ರ ಚಹಾಲ್ ಅದೇಷ್ಟೋ ಪಂದ್ಯಗಳಲ್ಲಿ ಟೀಂ ಇಂಡಿಯಾದ ಗೆಲುವಿನ ಹೀರೋ ಎನಿಸಿಕೊಂಡಿದ್ದಾರೆ. ಆಡಿದ ಮೊದಲ ಏಕದಿನ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದ ಚಹಾಲ್ ಅದೇ ಜಿಂಬಾಬ್ವೆ ವಿರುದ್ಧವೇ ಟಿ20 ಕ್ರಿಕೆಟ್​ಗೂ ಪದಾರ್ಪಣೆ ಮಾಡಿದರು.

2 / 6
ಚಹಾಲ್ ಟೀಂ ಇಂಡಿಯಾ ಪರ ಇದುವರೆಗೆ ಒಟ್ಟು 147 ಪಂದ್ಯಗಳನ್ನು ಆಡಿದ್ದಾರೆ. ಆದರೆ 7 ವರ್ಷಗಳ ಹಿಂದೆಯೇ ಟೀಂ ಇಂಡಿಯಾ ಸೇರಿಕೊಂಡ ಚಹಾಲ್​ಗೆ ಇದುವರೆಗು ಟೆಸ್ಟ್ ತಂಡದ ಕದ ತೆರೆದಿಲ್ಲ. ಇದೀಗ ಟೆಸ್ಟ್ ತಂಡದ ಪರ ಆಡುವ ಬಯಕೆ ಹೊರಹಾಕಿರುವ 32 ವರ್ಷ ವಯಸ್ಸಿನ ಚಹಾಲ್ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನನ್ನ ಕನಸು ಇನ್ನೂ ಈಡೇರಿಲ್ಲ ಎಂದಿದ್ದಾರೆ.

3 / 6
ಟೆಸ್ಟ್ ತಂಡದಲ್ಲಿ ಆಡುವ ಬಯಕೆ ಹೊರಹಾಕಿರುವ ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, 'ಪ್ರತಿಯೊಬ್ಬ ಕ್ರಿಕೆಟಿಗನು ತನ್ನ ದೇಶಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕನಸು ಕಾಣುತ್ತಾನೆ. ಅದರಲ್ಲೂ ಬಿಳಿ ಜರ್ಸಿಯಲ್ಲಿ ಕೆಂಪು ಬಾಲ್ ಕ್ರಿಕೆಟ್ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನಿಗೆ ಕನಸ್ಸಾಗಿರುತ್ತದೆ. ನನಗೂ ಅದೇ ರೀತಿಯ ಕನಸಿದೆ. ವೈಟ್ ಬಾಲ್ ಕ್ರಿಕೆಟ್​ನಲ್ಲಿ ನಾನು ಸಾಕಷ್ಟು ಸಾಧನೆ ಮಾಡಿದ್ದೇನೆ. ಆದರೆ ನನಗೆ ಇನ್ನೂ ರೆಡ್ ಬಾಲ್ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿಲ್ಲ.

4 / 6
ನಾನು ಇನ್ನೂ ಟೆಸ್ಟ್ ಕ್ರಿಕೆಟಿಗ ಟ್ಯಾಗ್ ಪಡೆಯುವ ಕನಸು ಕಾಣುತ್ತಿದ್ದೇನೆ. ದೇಶೀಯ ಕ್ರಿಕೆಟ್ ಮತ್ತು ರಣಜಿ ಟ್ರೋಫಿಯಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಅದರೊಂದಿಗೆ ಶೀಘ್ರದಲ್ಲೇ ಬಿಳಿ ಜೆರ್ಸಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಚಹಾಲ್ ಹೇಳಿಕೊಂಡಿದ್ದಾರೆ.

5 / 6
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಚಹಾಲ್ ಅವರ ಸಾಧನೆ ಎಲ್ಲರಿಗೂ ತಿಳಿದಿದೆ. ಸೀಮಿತ ಓವರ್ ಮಾದರಿಯಲ್ಲಿ ಚಹಾಲ್ ಟೀಂ ಇಂಡಿಯಾಕ್ಕೆ ಅನಿವಾರ್ಯವಾಗಿದ್ದಾರೆ. ಇದರ ಹೊರತಾಗಿಯೂ ಚಹಾಲ್ ಇನ್ನೂ ಟಿ20 ವಿಶ್ವಕಪ್‌ನಲ್ಲಿ ಆಡಿಲ್ಲ. ಚಹಾಲ್ 2022ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿದ್ದರು. ಆದರೆ ಅವರಿಗೆ ಆಡುವ ಅವಕಾಶ ಸಿಗಲಿಲ್ಲ.

6 / 6
ವಿಶ್ವಕಪ್​ನಲ್ಲಿ ಅವಕಾಶ ಸಿಗದಿರುವುದರ ಬಗ್ಗೆ ಮಾತನಾಡಿದ ಚಹಾಲ್, ಕೆಲವು ವಿಷಯಗಳು ಯಾರ ಕೈಯಲ್ಲೂ ಇಲ್ಲ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನ ಯಾವಾಗಲೂ ತಂಡಕ್ಕೆ ಸಹಾಯ ಮಾಡುವುದು. ಪ್ರತಿ ಪಂದ್ಯದಲ್ಲೂ 100% ನೀಡಲು ಪ್ರಯತ್ನಿಸುತ್ತೇನೆ. ಯಾವ ಪಂದ್ಯದಲ್ಲಿ ಅವಕಾಶ ಸಿಗುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲ. ಪ್ರತಿ ಪಂದ್ಯದಲ್ಲೂ ಅವಕಾಶ ಸಿಗದಿದ್ದರೂ ನೀಲಿ ಜೆರ್ಸಿಯಲ್ಲಿ ಆಡಿದ ಅನುಭವ ಸದಾ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಚಹಾಲ್ ಹೇಳಿಕೊಂಡಿದ್ದಾರೆ.

Published On - 10:34 am, Mon, 19 June 23