ಕೇವಲ 3 ರನ್ಗೆ 5 ವಿಕೆಟ್: ಟಿ20 ಕ್ರಿಕೆಟ್ನಲ್ಲಿ ಸೂಫಿಯಾನ್ ವಿಶ್ವ ದಾಖಲೆ
TV9 Web | Updated By: ಝಾಹಿರ್ ಯೂಸುಫ್
Updated on:
Dec 04, 2024 | 8:54 AM
Sufiyan Muqeem: ಪಾಕಿಸ್ತಾನ್ ಪರ ಈವರೆಗೆ 7 ಟಿ20 ಪಂದ್ಯಗಳನ್ನಾಡಿರುವ 25 ವರ್ಷದ ಸುಫಿಯಾನ್ ಮುಖೀಮ್ 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರ ನಡುವೆ ಕೇವಲ 3 ರನ್ಗೆ 5 ವಿಕೆಟ್ ಉರುಳಿಸಿ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
1 / 6
ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಪಾಕಿಸ್ತಾನ್ ತಂಡದ ಯುವ ಸ್ಪಿನ್ನರ್ ಸುಫಿಯಾನ್ ಮುಖೀಮ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಕೇವಲ 3 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ.
2 / 6
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡದ ಬ್ಯಾಟರ್ಗಳು ಸುಫಿಯಾನ್ ಮುಖೀಮ್ ಅವರ ಸ್ಪಿನ್ ಮೋಡಿಗೆ ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಸಹ ಪರದಾಡಿದರು. ಇದರ ನಡುವೆ 2.4 ಓವರ್ ಎಸೆದ ಸುಫಿಯಾನ್ ಕೇವಲ 3 ರನ್ ನೀಡಿ 5 ವಿಕೆಟ್ ಉರುಳಿಸಿದರು.
3 / 6
ಈ 3 ವಿಕೆಟ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ರನ್ ನೀಡಿ 5 ವಿಕೆಟ್ ಕಬಳಿಸಿದ ಪಾಕ್ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಪೂರ್ಣ ಸದಸ್ಯ ರಾಷ್ಟ್ರದ ಪರ ಕಣಕ್ಕಿಳಿದು ಅತೀ ಕಡಿಮೆ ರನ್ ನೀಡಿ 5 ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು.
4 / 6
ಇದಕ್ಕೂ ಮುನ್ನ ಪೂರ್ಣ ಸದಸ್ಯ ರಾಷ್ಟ್ರಗಳ ಪರ ಅತೀ ಕಡಿಮೆ ರನ್ ನೀಡಿ 5 ವಿಕೆಟ್ ಕಬಳಿಸಿದ ದಾಖಲೆ ಶ್ರೀಲಂಕಾದ ರಂಗನಾ ಹೆರಾತ್ (2014) ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ (2017) ಹೆಸರಿನಲ್ಲಿತ್ತು. ಈ ಇಬ್ಬರು ಬೌಲರ್ಗಳು ಕೇವಲ 3 ರನ್ ನೀಡಿ 5 ವಿಕೆಟ್ ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
5 / 6
ಇದೀಗ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 2.4 ಓವರ್ಗಳನ್ನು ಎಸೆದ ಸುಫಿಯಾನ್, 16 ಎಸೆತಗಳಲ್ಲಿ ಕೇವಲ 3 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲಿ ಅತೀ ಕಡಿಮೆ ರನ್ ನೀಡಿ 5 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
6 / 6
ಇನ್ನು ಸುಫಿಯಾನ್ ಮುಖೀಮ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಝಿಂಬಾಬ್ವೆ ತಂಡವು 12.4 ಓವರ್ಗಳಲ್ಲಿ 57 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 5.3 ಓವರ್ಗಳಲ್ಲಿ 61 ರನ್ ಬಾರಿಸಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.