ಪಂತ್​ರನ್ನು ಭೇಟಿಯಾದ ರೈನಾ, ಭಜ್ಜಿ, ಶ್ರೀಶಾಂತ್; ಈಗ ಹೇಗಿದೆ ರಿಷಬ್ ಆರೋಗ್ಯ? ಫೋಟೋ ನೋಡಿ

|

Updated on: Mar 26, 2023 | 3:31 PM

Rishabh Pant: ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಪಂತ್​ರನ್ನು ಗೆಳೆಯರು ಹಾಗೂ ಸಹ ಆಟಗಾರರು ಭೇಟಿ ನೀಡಿ ಕುಶಲೋಪರಿ ವಿಚಾರಿಸುತ್ತಿದ್ದಾರೆ.

1 / 5
ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿ ತೀವ್ರ ಇಂಜುರಿಗೊಳಗಾಗಿದ್ದ  ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

2 / 5
ತೀವ್ರ ಗಾಯಗಳಿಂದ ನಲುಗಿ ಹೋಗಿದ ಪಂತ್​ಗೆ ಕಾಲು ಮುರಿತವಾಗಿತ್ತು. ಇದೀಗ ಚಿಕಿತ್ಸೆಯ ಬಳಿಕ ಮನೆಯಲ್ಲಿ ನಿಧಾನವಾಗಿ ನಡೆಯಲಾರಂಭಿಸಿರುವ ಪಂತ್ ಕೆಲವು ದಿನಗಳ ಹಿಂದೆ ತಾನು ನಡೆದಾಡುವ ಹಾಗೂ ಸ್ವಿಮಿಂಗ್​ಫುಲ್​ ಒಳಗೆ ನಡೆದಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.

3 / 5
ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಪಂತ್​ರನ್ನು ಗೆಳೆಯರು ಹಾಗೂ ಸಹ ಆಟಗಾರರು ಭೇಟಿ ನೀಡಿ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಇತ್ತೀಚೆಗೆ ಸುರೇಶ್ ರೈನಾ, ಹರ್ಭಜನ್ ಸಿಂಗ್ ಮತ್ತು ಎಸ್ ಶ್ರೀಶಾಂತ್ ಗಾಯಗೊಂಡಿರುವ ರಿಷಬ್ ಪಂತ್ ಅವರನ್ನು ಭೇಟಿ ಮಾಡಿದ್ದರು.

4 / 5
ಭೇಟಿಯ ಬಳಿಕ ಪಂತ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಪಂತ್ ನಗು ಮುಖದಲ್ಲಿ ಕಾಣಿಸಿಕೊಂಡಿದ್ದಾರೆ. ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಶ್ರೀಶಾಂತ್ ಕೂಡ ಅವರೊಂದಿಗೆ ಕುಳಿತು ನಗುತ್ತಿರುವುದನ್ನು ಕಾಣಬಹುದಾಗಿದೆ.

5 / 5
ಕೆಲವು ದಿನಗಳ ಹಿಂದೆ ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಭೇಟಿಯಾಗಿ ರಿಷಭ್ ಆರೋಗ್ಯ ವಿಚಾರಿಸಿದ್ದರು.

Published On - 3:31 pm, Sun, 26 March 23