IPL 2023 All Team Jersey: ಐಪಿಎಲ್ 10 ತಂಡಗಳ ಹೊಸ ಜೆರ್ಸಿ ಅನಾವರಣ: ಇಲ್ಲಿದೆ ಫೋಟೋಸ್

IPL 2023 Kannada: ಐಪಿಎಲ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದ್ದು, ಅಹಮದಾಬಾದ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Mar 26, 2023 | 9:30 PM

IPL 2023 ALL Team Jersey: ಇಂಡಿಯನ್ ಪ್ರೀಮಿಯರ್ ಲೀಗ್​ನ 2023ರ ಆವೃತಿಗಾಗಿ ಎಲ್ಲಾ ತಂಡಗಳು ತಮ್ಮ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿದೆ. ಪ್ರತಿ ತಂಡಗಳು ಈ ಬಾರಿ ಕೂಡ ತಮ್ಮ ಟ್ರೇಡ್ ಮಾರ್ಕ್​ ಬಣ್ಣಗಳನ್ನು ಉಳಿಸಿಕೊಂಡಿದ್ದು, ವಿನ್ಯಾಸದಲ್ಲಿ ಮಾತ್ರ ಕೆಲ ಬದಲಾವಣೆ ಮಾಡಿಕೊಂಡಿದೆ. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ಮಾತ್ರ ಹೊಸ ಬಣ್ಣದ ಜೆರ್ಸಿಯಲ್ಲಿ ಈ ಬಾರಿ ಕಣಕ್ಕಿಳಿಯುತ್ತಿರುವುದು ವಿಶೇಷ.

1 / 12
ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ಹಿಂದಿನ ಪಿಂಕ್ ಜೆರ್ಸಿಯನ್ನೇ ಈ ಬಾರಿ ಕೂಡ ಮುಂದುವರೆಸಿದೆ. ಆದರೆ ಕಳೆದ ಸೀಸನ್​ನಲ್ಲಿದ್ದ ಬ್ಲೂ ಶೋಲ್ಡರ್ ಬಣ್ಣದ ಬದಲಾಗಿ ಈ ಬಾರಿ ಪಿಂಕ್ ಮಿಶ್ರಿತ ನೀಲಿ ಬಣ್ಣವನ್ನು ಬಳಸಲಾಗಿದೆ. ಇದರ ಹೊರತಾಗಿ ತಂಡದ ಪ್ರಾಯೋಜಕತ್ವದಲ್ಲಿ ಮಾತ್ರ ಬದಲಾವಣೆಯಾಗಿದೆ ಎನ್ನಬಹುದು.

2 / 12
ಮುಂಬೈ ಇಂಡಿಯನ್ಸ್ ತನ್ನ ಹೊಸ ಬ್ಲೂ ಜೆರ್ಸಿಯ ಮೇಲ್ಮೈ ವಿನ್ಯಾಸದೊಳಗೆ, ಮುಂಬೈ ನಗರ, ಇತಿಹಾಸ-ಪರಂಪರೆ, ಟ್ಯಾಕ್ಸಿ, ಗೇಟ್ ವೇ ಆಫ್ ಇಂಡಿಯಾದ ಚಿತ್ರಣಗಳನ್ನು ಬಳಸಿರುವುದು ವಿಶೇಷ.

3 / 12
ಕಳೆದ ಸೀಸನ್​ನಲ್ಲಿ ಸಂಪೂರ್ಣ ಆರೆಂಜ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಎಸ್​ಆರ್​ಹೆಚ್ ತಂಡವು ಈ ಸಲ, ಆರೆಂಜ್ ಹಾಗೂ ಬ್ಲ್ಯಾಕ್​ ಬಣ್ಣಗಳಲ್ಲಿ ಕಿಟ್​ ಅನ್ನು ರೂಪಿಸಿದೆ. ಇಲ್ಲಿ ತಂಡದ ಜೆರ್ಸಿಯು ಆರೆಂಜ್ ಬಣ್ಣದಲ್ಲಿದ್ದರೆ, ಪ್ಯಾಂಟ್​ಗೆ ಕಪ್ಪು ಬಣ್ಣ ನೀಡಲಾಗಿದೆ. ಹಾಗೆಯೇ ಭುಜದ ಮೇಲೆ ಕಪ್ಪು ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.

4 / 12
ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಜೆರ್ಸಿಯ ಬಣ್ಣವನ್ನೇ ಬದಲಿಸಿದೆ. ಕಳೆದ ಬಾರಿಯಿದ್ದ ಆಕ್ವಾ ಮೆರೈನ್ ಬ್ಲೂ ಜೆರ್ಸಿಯ ಬದಲಿಗೆ ಈ ಬಾರಿ ಕಡು ನೀಲಿ ಬಣ್ಣದ ಸಮವಸ್ತ್ರದಲ್ಲಿ ಲಕ್ನೋ ಕಣಕ್ಕಿಳಿಯಲಿದೆ. ಇನ್ನು ಹೊಸ ಜೆರ್ಸಿಗೆ ಕಡು ನೀಲಿ ಜೊತೆ ಕೆಂಪು ಬಣ್ಣದ ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.

5 / 12
ಗುಜರಾತ್ ಟೈಟಾನ್ಸ್ ತಂಡವು ಕಳೆದ ಬಾರಿಯ ಜೆರ್ಸಿಯನ್ನು ಮರುವಿನ್ಯಾಸಗೊಳಿಸಿದೆ. ಇಲ್ಲಿ ತಂಡದ ಲೋಗೋದ ಮೇಲೆ ಚಾಂಪಿಯನ್​ ಪಟ್ಟಕ್ಕೇರಿರುವುದನ್ನು ಪ್ರತಿನಿಧಿಸುವಂತೆ ಸ್ಟಾರ್ ನೀಡಲಾಗಿದೆ. ಹಾಗೆಯೇ ಜೆರ್ಸಿಯ ಕಾಲರ್​ ವಿನ್ಯಾಸ ಬದಲಿಸಲಾಗಿದ್ದು, ಇದರ ಹೊರತಾಗಿ ತಂಡದ ಸಮವಸ್ತ್ರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿಲ್ಲ.

6 / 12
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಕಳೆದ ಬಾರಿ ಎಡಬದಿಗೆ ನೀಡಲಾಗಿದ್ದ ಶೇಡ್​ ಅನ್ನು ಈ ಬಾರಿ ತೋಳ್ಭಾಗದಲ್ಲಿ ನೀಡಿರುವುದು ವಿಶೇಷ. ಅಲ್ಲದೆ ಮುಂಭಾಗವು ನೀಲಿ ಬಣ್ಣದಲ್ಲಿದ್ದರೆ, ಹಿಂಭಾಗವನ್ನು ಕೆಂಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.

7 / 12
ಎಂಎಸ್​ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಸಲ ಕೂಡ ಯೆಲ್ಲೊ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಇನ್ನು ಕಳೆದ ಬಾರಿಯ ವಿನ್ಯಾಸವನ್ನೇ ಈ ಬಾರಿ ಕೂಡ ಮುಂದುವರೆಸಲಾಗಿದ್ದು, ಇದಾಗ್ಯೂ ಜೆರ್ಸಿ ಮುಂಭಾಗದ ಪ್ರಾಯೋಜಕತ್ವ ಬದಲಾಗಿದೆ.

8 / 12
ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಜೆರ್ಸಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ಕಳೆದ ಸೀಸನ್​ನಲ್ಲಿ ವಿನ್ಯಾಸಗೊಳಿಸಲಾದ ಅದೇ ಮಾದರಿಯ ಜೆರ್ಸಿಯಲ್ಲಿ ಈ ಬಾರಿ ಕೂಡ ಕಣಕ್ಕಿಳಿಯಲಿದೆ.

9 / 12
ಕೆಕೆಆರ್ ತಂಡದ ಜೆರ್ಸಿಯಲ್ಲೂ ಹೇಳಿಕೊಳ್ಳುವಂತಹ ಬದವಲಾಣೆಯಾಗಿಲ್ಲ. ಕಳೆದ ಬಾರಿಯ ವಿನ್ಯಾಸವನ್ನೇ ಈ ಸಲ ಕೂಡ ಮುಂದುವರೆಸಲಾಗಿದ್ದು, ಜೆರ್ಸಿಯ ಮುಂಭಾಗದ ಪ್ರಯೋಜಕರು ಮಾತ್ರ ಬದಲಾಗಿದ್ದಾರೆ.

10 / 12
ಆರ್​ಸಿಬಿ ತಂಡದ ಜೆರ್ಸಿಯ ವಿನ್ಯಾಸದಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಸೀಸನ್​ನ ಜೆರ್ಸಿಗೆ ಹೋಲಿಸಿದರೆ, ಮುಂಭಾಗದಲ್ಲಿ ನೀಡಲಾಗಿದ್ದ ಮುತ್ತೂಟ್ ಫಿನ್​ಕಾರ್ಪ್ ಬದಲಿಗೆ ಈ ಬಾರಿ ಕತ್ತಾರ್ ಏರ್​ವೇಸ್​ನ ಜಾಹೀರಾತು ಕಾಣಿಸಿಕೊಂಡಿದೆ.  ಉಳಿದಂತೆ ವಿನ್ಯಾಸ ಹಾಗೂ ಬಣ್ಣಗಳನ್ನು ಹಾಗೆಯೇ ಮುಂದುವರೆಸಲಾಗಿದೆ.

11 / 12
ಐಪಿಎಲ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದ್ದು, ಅಹಮದಾಬಾದ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ.

12 / 12
Follow us
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್

ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ

ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ