ICC Awards: ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸೂರ್ಯ! ರೇಸ್​ನಲ್ಲಿ ಈ 4 ಆಟಗಾರರು

| Updated By: ಪೃಥ್ವಿಶಂಕರ

Updated on: Dec 29, 2022 | 3:09 PM

ICC Awards: 2022 ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಲ್ಕು ವಿಭಿನ್ನ ದೇಶಗಳ ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದೆ. ಇದರಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅವರ ಹೆಸರೂ ಸೇರಿದೆ.

1 / 5
ಪ್ರತಿ ವರ್ಷದಂತೆ ಈ ಬಾರಿಯೂ ಐಸಿಸಿ ತನ್ನ ವಿಶೇಷ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಬಿಡುಗಡೆ ಮಾಡಿದೆ. 2022 ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಲ್ಕು ವಿಭಿನ್ನ ದೇಶಗಳ ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದೆ. ಇದರಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅವರ ಹೆಸರೂ ಸೇರಿದೆ.

2 / 5
ಸೂರ್ಯಕುಮಾರ್ ಈ ವರ್ಷ ಟಿ20 ಮಾದರಿಯಲ್ಲಿ 187.43 ಸ್ಟ್ರೈಕ್ ರೇಟ್‌ನಲ್ಲಿ ಗರಿಷ್ಠ 1164 ರನ್ ಗಳಿಸಿದ್ದಾರೆ. ಈ ವರ್ಷ ಟಿ20 ಮಾದರಿಯಲ್ಲಿ 68 ಸಿಕ್ಸರ್‌ಗಳನ್ನು ಬಾರಿಸಿರುವ ಸೂರ್ಯ, ಒಂಬತ್ತು ಅರ್ಧ ಶತಕ ಮತ್ತು ಎರಡು ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಐಸಿಸಿ ಶ್ರೇಯಾಂಕದಲ್ಲಿ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

3 / 5
ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಜಾ ಕೂಡ ಈ ವರ್ಷ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಟಿ20 ಕ್ರಿಕೆಟ್​ನಲ್ಲಿ 150 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ರಜಾ 735 ರನ್ ಕಲೆಹಾಕಿದ್ದಾರೆ. ಅದೇ ಸಮಯದಲ್ಲಿ ಬೌಲಿಂಗ್​ನಲ್ಲೂ 25 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 5
ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಕೂಡ ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಆಲ್​ರೌಂಡರ್ ಪ್ರದರ್ಶನ ನೀಡಿದ್ದ ಕರನ್ ಇಡೀ ಟೂರ್ನಿಯಲ್ಲಿ 13 ವಿಕೆಟ್ ಪಡೆದು ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವರ್ಷ 19 ಪಂದ್ಯಗಳನ್ನು ಆಡಿರುವ ಕರನ್ 25 ವಿಕೆಟ್ ಜೊತೆಗೆ 67 ರನ್ ಕೂಡ ಬಾರಿಸಿದ್ದರು. ಈ ಅದ್ಭುತ ಆಟದಿಂದಾಗಿ ಐಪಿಎಲ್ ಮಿನಿ ಹರಾಜಿನಲ್ಲಿ ಕರನ್ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ

5 / 5
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಿಂದಾಗಿ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವರ್ಷ ಆಡಿರುವ 25 ಟಿ20 ಪಂದ್ಯಗಳಲ್ಲಿ ರಿಜ್ವಾನ್ 996 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ವಿಕೆಟ್ ಕೀಪಿಂಗ್​ನಲ್ಲಿ ಒಂಬತ್ತು ಕ್ಯಾಚ್‌ಗಳೊಂದಿಗೆ ಮೂರು ಸ್ಟಂಪಿಂಗ್‌ ಸಹ ಮಾಡಿದ್ದಾರೆ. ಈ ವರ್ಷ ಟಿ20ಯಲ್ಲಿ 10 ಅರ್ಧ ಶತಕ ಸಿಡಿಸಿರುವ ರಿಜ್ವಾನ್ ಪ್ರಸ್ತುತ ಐಸಿಸಿ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.