Suryakumar Yadav: ಹೊಸ ವಿಶ್ವ ದಾಖಲೆ: ಸಿಕ್ಸರ್ ಕಿಂಗ್ ಸೂರ್ಯಕುಮಾರ್
TV9 Web | Updated By: ಝಾಹಿರ್ ಯೂಸುಫ್
Updated on:
Oct 03, 2022 | 10:25 AM
Suryakumar Yadav: ಮುಂದಿನ ಪಂದ್ಯದಲ್ಲಿ 7 ರನ್ ಬಾರಿಸಿದರೆ ಟೀಮ್ ಇಂಡಿಯಾ ಪರ ಟಿ20 ಯಲ್ಲಿ ಒಂದೇ ವರ್ಷದಲ್ಲಿ 800 ರನ್ ಕಲೆಹಾಕಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿರುವುದು ವಿಶೇಷ.
1 / 7
ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗೌಹಾಟಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ಸೂರ್ಯ ಕೇವಲ 22 ಎಸೆತಗಳಲ್ಲಿ 61 ರನ್ ಚಚ್ಚಿದ್ದರು.
2 / 7
ವಿಶೇಷ ಎಂದರೆ ಈ 61 ರನ್ಗಳ ಸ್ಪೋಟಕ ಇನಿಂಗ್ಸ್ನಲ್ಲಿ ಸೂರ್ಯ 5 ಸಿಕ್ಸ್ ಹಾಗೂ 5 ಫೋರ್ ಸಿಡಿಸಿದ್ದರು. ಈ ಐದು ಭರ್ಜರಿ ಸಿಕ್ಸ್ಗಳೊಂದಿಗೆ ಸೂರ್ಯಕುಮಾರ್ ಯಾದವ್ ಒಂದೇ ವರ್ಷದಲ್ಲಿ 50 ಸಿಕ್ಸ್ಗಳನ್ನು ಪೂರೈಸಿದ್ದಾರೆ.
3 / 7
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 50 ಸಿಕ್ಸ್ಗಳನ್ನು ಬಾರಿಸಿದ ಮತ್ತೋರ್ವ ಬ್ಯಾಟ್ಸ್ಮನ್ ಇಲ್ಲ. ಇದೀಗ ಒಂದು ವರ್ಷದಲ್ಲಿ 50 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸ ಬರೆದಿದ್ದಾರೆ.
4 / 7
ಇದಕ್ಕೂ ಮುನ್ನ 2021 ರಲ್ಲಿ 42 ಸಿಕ್ಸ್ ಸಿಡಿಸಿ ಪಾಕಿಸ್ತಾನ್ ಮೊಹಮ್ಮದ್ ರಿಜ್ವಾನ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಉಡೀಸ್ ಮಾಡಿರುವ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.
5 / 7
ಇನ್ನು ಸೌತ್ ಆಫ್ರಿಕಾ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾದ ಅತಿರಥ ಮಹಾರಥರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಅಂದರೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇದೀಗ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಶಿಖರ್ ಧವನ್ ಅವರ ಹೆಸರಿನಲ್ಲಿತ್ತು.
6 / 7
ಈ ಹಿಂದೆ 2018 ರಲ್ಲಿ ಶಿಖರ್ ಧವನ್ 689 ರನ್ ಬಾರಿಸುವ ಮೂಲಕ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
7 / 7
ಅಲ್ಲದೆ ಈ ವರ್ಷ ಬರೋಬ್ಬರಿ 793 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶೇಷ ದಾಖಲೆಯನ್ನೂ ಕೂಡ ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದಾರೆ. ಇನ್ನು ಮುಂದಿನ ಪಂದ್ಯದಲ್ಲಿ 7 ರನ್ ಬಾರಿಸಿದರೆ ಟೀಮ್ ಇಂಡಿಯಾ ಪರ ಟಿ20 ಯಲ್ಲಿ ಒಂದೇ ವರ್ಷದಲ್ಲಿ 800 ರನ್ ಕಲೆಹಾಕಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿರುವುದು ವಿಶೇಷ.
Published On - 10:25 am, Mon, 3 October 22