Suryakumar Yadav: ಎಬಿಡಿಯನ್ನೇ ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್

| Updated By: ಝಾಹಿರ್ ಯೂಸುಫ್

Updated on: Feb 02, 2023 | 9:23 PM

Suryakumar Yadav: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 13 ಎಸೆತಗಳಲ್ಲಿ 24 ರನ್​ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ವಿಶೇಷ ಸಾಧನೆ ಮಾಡಿದ್ದಾರೆ.

1 / 5
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 13 ಎಸೆತಗಳಲ್ಲಿ 24 ರನ್​ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ವಿಶೇಷ ಸಾಧನೆ ಮಾಡಿದ್ದಾರೆ. ಅದು ಕೂಡ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್​ ಅನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

2 / 5
ಹೌದು, ನ್ಯೂಜಿಲೆಂಡ್ ವಿರುದ್ಧ 24 ರನ್​ಗಳಿಸುವ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 2 ಸ್ಥಾನ ಮೇಲೇರಿದ್ದಾರೆ. ಈ ಮೂಲಕ ಟಿ20 ರನ್​ ಸರದಾರರ ಪಟ್ಟಿಯಲ್ಲಿ ಎಬಿಡಿಯನ್ನು ಹಿಂದಿಕ್ಕಿದ್ದಾರೆ.

3 / 5
ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಟಿ20 ಕ್ರಿಕೆಟ್​ನಲ್ಲಿ 75 ಇನಿಂಗ್ಸ್​ ಮೂಲಕ 10 ಅರ್ಧಶತಕಗಳೊಂದಿಗೆ ಒಟ್ಟು 1672 ರನ್​ ಕಲೆಹಾಕಿದ್ದಾರೆ. ಇದೀಗ ಟಿ20 ರನ್​ಗಳಿಕೆಯ ವಿಷಯದಲ್ಲಿ ಎಬಿಡಿಯನ್ನು ಸೂರ್ಯಕುಮಾರ್ ಹಿಂದಿಕ್ಕಿರುವುದು ವಿಶೇಷ.

4 / 5
ಸೂರ್ಯಕುಮಾರ್ ಯಾದವ್ ಕೇವಲ 46 ಟಿ20 ಇನಿಂಗ್ಸ್​ ಮೂಲಕ ಒಟ್ಟು 1675 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಶತಕ ಹಾಗೂ 13 ಅರ್ಧಶತಕಗಳನ್ನು ಬಾರಿಸಿದ್ದಾರೆ.

5 / 5
ಸದ್ಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 107 ಟಿ20 ಇನಿಂಗ್ಸ್ ಮೂಲಕ ಒಟ್ಟು 4008	ರನ್ ಬಾರಿಸಿದ್ದಾರೆ. ಈ ವೇಳೆ 37 ಅರ್ಧಶತಕಗಳು ಹಾಗೂ 1 ಶತಕ ಕೂಡ ಮೂಡಿಬಂದಿವೆ. ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಟಿ20 ಕ್ರಿಕೆಟ್​ನಲ್ಲಿ ಯಾವುದೇ ಬ್ಯಾಟ್ಸ್​ಮನ್ 4000 ರನ್ ಕಲೆಹಾಕಿಲ್ಲ ಎಂಬುದೇ ವಿಶೇಷ.