ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ರಿಯಾನ್ ಪರಾಗ್! ಹಳೆಯ ದಾಖಲೆಗಳೆಲ್ಲ ಉಡೀಸ್
Riyan Parag: 2023 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸುತ್ತಿರುವ ರಿಯಾನ್ ಪರಾಗ್ ಕೇರಳ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿದದು, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
1 / 6
2023 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸುತ್ತಿರುವ ರಿಯಾನ್ ಪರಾಗ್ ಕೇರಳ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿದದು, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
2 / 6
ಕೇರಳ ವಿರುದ್ಧದ ಈ ಅರ್ಧಶತಕ ಈ ಲೀಗ್ನಲ್ಲಿ ಪರಾಗ್ ಅವರ ಸತತ 6ನೇ ಅರ್ಧಶತಕವಾಗಿದ್ದು, ಈ ಮೂಲಕ ಪರಾಗ್ ಟಿ20 ಕ್ರಿಕೆಟ್‌ನಲ್ಲಿ ಸತತ 6 ಅರ್ಧಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
3 / 6
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2023 ರಲ್ಲಿ ಇದುವರೆಗೆ ಏಳು ಪಂದ್ಯಗಳನ್ನಾಡಿರುವ ಪರಾಗ್, 62.86 ರ ಸರಾಸರಿಯಲ್ಲಿ 440 ರನ್ ಗಳಿಸಿದ್ದಾರೆ. ಇದಲ್ಲದೆ ಕೇರಳ ವಿರುದ್ಧದ ಪಂದ್ಯದಲ್ಲಿ ಅಸ್ಸಾಂ ತಂಡ ಎರಡು ವಿಕೆಟ್‌ಗಳ ಜಯ ಸಾದಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
4 / 6
ಅಸ್ಸಾಂ ತಂಡ ಇನ್ನೂ ಒಂದೇ ಒಂದು ಪಂದ್ಯದಲ್ಲಿ ಸೋತಿಲ್ಲದೆ ಇರುವುದಕ್ಕೆ ಪರಾಗ್ ಅವರ ಆಟವೇ ಪ್ರಮುಖ ಕಾರಣವಾಗಿದೆ. ಮುಂಬೈನ ಶರದ್ ಪವಾರ್ ಒಳಾಂಗಣ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೂರು ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ಸಿಕ್ಸರ್‌ಗಳನ್ನು ಹೊಡೆದು ಅಸ್ಸಾಂ ತಂಡವನ್ನು ಗೆಲುವಿನ ದಡ ಸೇರಿಸಿದರು.
5 / 6
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪರಾಗ್ ಅವರು ಕೊನೆಯ 6 ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿರುವ ರನ್ಗಳನ್ನು ನೋಡುವುದಾದರೆ.. 61, 76*, 53*, 76, 53*, 76, 72, 57*.
6 / 6
ಈ ಪಂದ್ಯಕ್ಕೂ ಮೊದಲು ಹಿಮಾಚಲ ವಿರುದ್ಧ 37 ಎಸೆತಗಳಲ್ಲಿ 72 ರನ್ ಗಳಿಸಿದ ಪರಾಗ್, ವೀರೇಂದ್ರ ಸೆಹ್ವಾಗ್, ಡೆವೊನ್ ಕಾನ್ವೆ, ಹ್ಯಾಮಿಲ್ಟನ್ ಮಸಕಡ್ಜಾ, ಕಮ್ರಾನ್ ಅಕ್ಮಲ್, ಜೋಸ್ ಬಟ್ಲರ್, ಡೇವಿಡ್ ವಾರ್ನರ್ ಮತ್ತು ವೇಯ್ನ್ ಮ್ಯಾಡ್ಸೆನ್ ಅವರು ಸತತ ಐದು ಇನ್ನಿಂಗ್ಸ್‌ಗಳಲ್ಲಿ ಐದು ಅರ್ಧಶತಕಗಳನ್ನು ಸಿಡಿಸಿದ ದಾಖಲೆಯನ್ನೂ ಮುರಿದರು.