- Kannada News Photo gallery Cricket photos ICC World Cup 2023 Rohit sharma is set to take charge in his 100th match as India captain vs england
ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದ ಕೂಡಲೇ ನಾಯಕನಾಗಿ ಶತಕ ಬಾರಿಸಲಿದ್ದಾರೆ ರೋಹಿತ್..!
Rohit Sharma, ICC World Cup 2023: ಏಕದಿನ ವಿಶ್ವಕಪ್‌ನಲ್ಲಿ ಭಾರತ ತನ್ನ ಆರನೇ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 29 ರಂದು ನಡೆಯಲಿದ್ದು, ನಾಯಕನಾಗಿ ರೋಹಿತ್ ಶರ್ಮಾಗೆ ಇದು 100ನೇ ಪಂದ್ಯವಾಗಿದೆ.
Updated on: Oct 28, 2023 | 7:43 AM

ಏಕದಿನ ವಿಶ್ವಕಪ್‌ನಲ್ಲಿ ಭಾರತ ತನ್ನ ಆರನೇ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 29 ರಂದು ನಡೆಯಲಿದ್ದು, ನಾಯಕನಾಗಿ ರೋಹಿತ್ ಶರ್ಮಾಗೆ ಇದು 100ನೇ ಪಂದ್ಯವಾಗಿದೆ.

ರೋಹಿತ್ ಶರ್ಮಾ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 99 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 73 ಪಂದ್ಯಗಳನ್ನು ಗೆದ್ದಿದ್ದರೆ, 23 ಪಂದ್ಯಗಳಲ್ಲಿ ಸೋತಿದೆ. ಎರಡು ಪಂದ್ಯಗಳು ಡ್ರಾಗೊಂಡಿವೆ.

ನಾಯಕನಾಗಿ, ರೋಹಿತ್ ಶರ್ಮಾ ಎರಡು ಏಷ್ಯಾಕಪ್, ನಿದಾಹಸ್ ಟ್ರೋಫಿ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದ್ದಾರೆ.

ಇದರೊಂದಿಗೆ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ಸಾವಿರ ರನ್ ಪೂರೈಸುವ ಹೊಸ್ತಿಲಿನಲ್ಲಿದ್ದು, ಇಂಗ್ಲೆಂಡ್ ವಿರುದ್ಧ 47 ರನ್ ಗಳಿಸಿದ ತಕ್ಷಣ ಈ ದಾಖಲೆ ಬರೆಯಲ್ಲಿದ್ದಾರೆ.

ರೋಹಿತ್ ಶರ್ಮಾ ಇದುವರೆಗೆ 476 ಇನ್ನಿಂಗ್ಸ್‌ಗಳಲ್ಲಿ 456 ಪಂದ್ಯಗಳಲ್ಲಿ 17,953 ರನ್ ಗಳಿಸಿದ್ದಾರೆ. ಇದರಲ್ಲಿ 45 ಶತಕ ಮತ್ತು 98 ಅರ್ಧಶತಕಗಳು ಸೇರಿವೆ. ಇದರಲ್ಲಿ 264 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ.

ರೋಹಿತ್ ಶರ್ಮಾ ಇದುವರೆಗೆ ಆಡಿರುವ 5 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 62.20 ಸರಾಸರಿಯಲ್ಲಿ 311 ರನ್ ಗಳಿಸಿದ್ದು, ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಟಾಪ್ 5ರೊಳಗೆ ಸ್ಥಾನ ಪಡೆದಿದ್ದಾರೆ.



















