T20 Blast: ಸ್ಪೋಟಕ ಸೆಂಚುರಿ ಸಿಡಿಸಿ ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ ಬರೆದ ವಿನ್ಸ್

| Updated By: ಝಾಹಿರ್ ಯೂಸುಫ್

Updated on: Jun 04, 2023 | 9:22 PM

T20 Blast 2023: 145 ರನ್​ಗಳ ಸಾಧಾರಣ ಗುರಿ ಪಡೆದ ಹ್ಯಾಂಪ್​ಶೈರ್ ತಂಡಕ್ಕೆ ಆರಂಭಿಕರಾದ ಜೇಮ್ಸ್​ ವಿನ್ಸ್ ಹಾಗೂ ಬೆನ್ ಡಕ್​ಮಾರ್ಟ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು.

1 / 12
T20 Blast: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಜೇಮ್ಸ್ ವಿನ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಇಂಗ್ಲೆಂಡ್​ನ ಲೂಕ್ ವ್ರೈಟ್ ಅವರ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 12
ಹ್ಯಾಂಪ್‌ಶೈರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸೆಕ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಆದರೆ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಜೇಮ್ಸ್ ವಿನ್ಸ್ ಪವರ್​ಪ್ಲೇನಲ್ಲೇ ನಿರೂಪಿಸಿದ್ದರು.

3 / 12
ಮೊದಲ ಓವರ್​ನಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿನ್ಸ್ ಎಸೆಕ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ವಿನ್ಸ್​ ಬ್ಯಾಟ್​ನಿಂದ 8 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳು ಮೂಡಿಬಂತು. ಅಲ್ಲದೆ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು.

4 / 12
ನಾಯಕ ಜೇಮ್ಸ್ ವಿನ್ಸ್ ಅವರ ಈ ಸ್ಪೋಟಕ ಶತಕದ ನೆರವಿನಿಂದ ಹ್ಯಾಂಪ್​ಶೈರ್ ತಂಡವು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 214 ರನ್​ ಕಲೆಹಾಕಿತು.

5 / 12
215 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಎಸೆಕ್ಸ್ ತಂಡವು 14.1 ಓವರ್​ಗಳಲ್ಲಿ 96 ರನ್​ಗಳಿಸಿ ಸರ್ವಪತನ ಕಂಡಿತು. ಇದರೊಂದಿಗೆ ಹ್ಯಾಂಪ್​ಶೈರ್ ತಂಡವು 118 ರನ್​ಗಳ ಭರ್ಜರಿ ಜಯ ಸಾಧಿಸಿದೆ.

6 / 12
ಇನ್ನು ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲೂ ಜೇಮ್ಸ್ ವಿನ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಸೆಕ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

7 / 12
ಆದರೆ ಹ್ಯಾಂಪ್​ಶೈರ್ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಪರದಾಡಿದ ಸಸೆಕ್ಸ್ ಬ್ಯಾಟರ್​ಗಳು 18.5 ಓವರ್​ಗಳಲ್ಲಿ 144 ರನ್​ಗಳಿಸಿ ಆಲೌಟ್ ಆದರು.

8 / 12
145 ರನ್​ಗಳ ಸಾಧಾರಣ ಗುರಿ ಪಡೆದ ಹ್ಯಾಂಪ್​ಶೈರ್ ತಂಡಕ್ಕೆ ಆರಂಭಿಕರಾದ ಜೇಮ್ಸ್​ ವಿನ್ಸ್ ಹಾಗೂ ಬೆನ್ ಡಕ್​ಮಾರ್ಟ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಪರಿಣಾಮ 10 ಓವರ್​ಗೂ ಮುನ್ನವೇ ತಂಡದ ಸ್ಕೋರ್ 100ರ ಗಡಿದಾಟಿದೆ.

9 / 12
ಇನ್ನು ಬೆನ್​ ಡಕ್​ಮಾರ್ಟ್​ 51 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅಜೇಯ 69 ರನ್​ ಬಾರಿಸಿದರೆ, ಜೇಮ್ಸ್ ವಿನ್ಸ್ ಕೇವಲ 39 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಫೋರ್​ನೊಂದಿಗೆ ಅಜೇಯ 71 ರನ್​ ಚಚ್ಚಿದರು. ಇದರೊಂದಿಗೆ ಹ್ಯಾಂಪ್​ಶೈರ್ ತಂಡವು 14.5 ಓವರ್​ಗಳಲ್ಲಿ 145 ರನ್​ಗಳ ಗುರಿ ಸಾಧಿಸಿ 10 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

10 / 12
ವಿಶೇಷ ಎಂದರೆ ಈ ಶತಕ ಹಾಗೂ ಅರ್ಧಶತಕದ ನೆರವಿನಿಂದ ಟಿ20 ಬ್ಲಾಸ್ಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಜೇಮ್ಸ್ ವಿನ್ಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಲೂಕ್ ವ್ರೈಟ್ ಹೆಸರಿನಲ್ಲಿತ್ತು.

11 / 12
2004 ರಿಂದ 2022 ರವರೆಗೆ ಟಿ20 ಬ್ಲಾಸ್ಟ್​ ಟೂರ್ನಿ ಆಡಿದ್ದ ಲೂಕ್ ವ್ರೈಟ್ 166 ಇನಿಂಗ್ಸ್​ಗಳಿಂದ 5026 ರನ್​ ಕಲೆಹಾಕಿದ್ದರು. ಅಲ್ಲದೆ ಟಿ20 ಬ್ಲಾಸ್ಟ್​ನಲ್ಲಿ 5 ಸಾವಿರ ರನ್​ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.

12 / 12
ಇದೀಗ ಜೇಮ್ಸ್ ವಿನ್ಸ್ 165 ಇನಿಂಗ್ಸ್​ಗಳ ಮೂಲಕ ಒಟ್ಟು 5228 ರನ್ ಕಲೆಹಾಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಟಿ20 ಬ್ಲಾಸ್ಟ್​ನಲ್ಲಿ 5 ಸಾವಿರ ರನ್ ಪೂರೈಸಿದ 2ನೇ ಆಟಗಾರ ಹಾಗೂ ಅತೀ ಹೆಚ್ಚು ರನ್​ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

Published On - 9:22 pm, Sun, 4 June 23