T20 Record: ಬರೋಬ್ಬರಿ 105 ಎಸೆತಗಳು…ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್

| Updated By: ಝಾಹಿರ್ ಯೂಸುಫ್

Updated on: Mar 28, 2023 | 7:23 PM

T20 Cricket Records: ರಶೀದ್ ಖಾನ್ ಇದೀಗ ಐಪಿಎಲ್​ಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ಕೂಡ ಅಫ್ಘಾನ್ ಸ್ಪಿನ್ನರ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತೀಯ ಪಿಚ್​ನಲ್ಲೂ ರಶೀದ್ ಖಾನ್ ಅವರ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.

1 / 6
ಹೊಡಿಬಡಿ ಕ್ರಿಕೆಟ್ ಪಂದ್ಯಾಟ ಎಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್​ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಕೊಳ್ಳದೇ ಸತತವಾಗಿ ಎಷ್ಟು ಓವರ್ ಎಸೆಯಬಹುದು? ಒಂದು...ಎರಡು...ಮೂರು...ನಾಲ್ಕು..! ಆದರೆ ಅಫ್ಘಾನಿಸ್ತಾನ್ ಸ್ಪಿನ್ ಮಾಂತ್ರಿ ರಶೀದ್ ಖಾನ್ ಬರೋಬ್ಬರಿ 17 ಓವರ್​ಗಳನ್ನು ಎಸೆದಿದ್ದಾರೆ.

2 / 6
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರಶೀದ್ ಖಾನ್ ಕಳೆದ 17 ಓವರ್​ಗಳಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಂಡಿರಲಿಲ್ಲ. ಅಂದರೆ ಅವರ ಬೌಲಿಂಗ್​ನಲ್ಲಿ ಯಾವುದೇ ಬ್ಯಾಟರ್​ ಫೋರ್ ಅಥವಾ ಸಿಕ್ಸ್ ಬಾರಿಸಿರಲಿಲ್ಲ. ಇದುವೇ ಈಗ ಹೊಸ ವಿಶ್ವ ದಾಖಲೆಯಾಗಿದೆ.

3 / 6
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದೆ 100 ಎಸೆತಗಳನ್ನು ಎಸೆದ ಮೊದಲ ಬೌಲರ್ ಎಂಬ ವಿಶ್ವ ದಾಖಲೆ ರಶೀದ್ ಖಾನ್ ಪಾಲಾಗಿದೆ.

4 / 6
ಅಷ್ಟೇ ಅಲ್ಲದೆ ಒಂದೇ ಒಂದು ಬೌಂಡರಿ ಚಚ್ಚಿಸಿಕೊಳ್ಳದೇ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಓವರ್​ ಎಸೆದ ವಿಶ್ವ ದಾಖಲೆ ಕೂಡ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಹೆಸರಿಗೆ ಸೇರ್ಪಡೆಯಾಗಿದೆ.

5 / 6
ಇನ್ನು ರಶೀದ್ ಖಾನ್ ಹೆಸರಿನಲ್ಲಿ ಮುಂದುವರೆದಿದ್ದ ಈ ವಿಶೇಷ ದಾಖಲೆಗೆ ಬ್ರೇಕ್ ಹಾಕಿದ್ದು ಪಾಕಿಸ್ತಾನದ ಬ್ಯಾಟರ್ ಸೈಮ್ ಅಯ್ಯೂಬ್. ಶಾರ್ಜಾದಲ್ಲಿ ನಡೆದ ಪಾಕಿಸ್ತಾನ್-ಅಫ್ಘಾನಿಸ್ತಾನ್ ನಡುವಣ 3ನೇ ಟಿ20 ಪಂದ್ಯದಲ್ಲಿ ಸೈಮ್ ರಶೀದ್ ಖಾನ್ ಎಸೆತದಲ್ಲಿ ಬೌಂಡರಿ ಬಾರಿಸಿದರು.

6 / 6
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸತತ 105 ಎಸೆತಗಳಲ್ಲಿ ಯಾವುದೇ ಬೌಂಡರಿ ನೀಡದೆ ಮಿಂಚಿದ ರಶೀದ್ ಖಾನ್ ಇದೀಗ ಐಪಿಎಲ್​ಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ಕೂಡ ಅಫ್ಘಾನ್ ಸ್ಪಿನ್ನರ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತೀಯ ಪಿಚ್​ನಲ್ಲೂ ರಶೀದ್ ಖಾನ್ ಅವರ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.