T20 World Cup 2021: ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಭಾರತದ ಏಕೈಕ ಆಟಗಾರ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Oct 21, 2021 | 11:16 AM
T20 World Cup 2021: 8 ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದರಲ್ಲಿ ಭಾರತೀಯ ಆಟಗಾರ ಕೂಡ ಇರೋದು ವಿಶೇಷ. ಹಾಗಿದ್ರೆ ಚುಟುಕು ಕದನದಲ್ಲಿ ಶತಕ ಬಾರಿಸಿದ ಆಟಗಾರರು ಯಾರೆಂದು ನೋಡೋಣ.
1 / 9
ಕ್ರಿಕೆಟ್ನಲ್ಲಿ ಬ್ಯಾಟರುಗಳು ಶತಕ ಸಿಡಿಸುವುದು ದೊಡ್ಡ ವಿಷಯ. ಅದರಲ್ಲೂ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಶತಕ ಮೂಡಿಬರುವುದು ಸಾಮಾನ್ಯ. ಇದಾಗ್ಯೂ ಟಿ20 ಫಾರ್ಮ್ಯಾಟ್ನಲ್ಲಿ ಕಡಿಮೆ ಎಸೆತದಲ್ಲಿ ಶತಕ ಪೂರೈಸುವುದು ಅಷ್ಟೊಂದು ಸುಲಭವಲ್ಲ. ಅದರಲ್ಲೂ ವಿಶ್ವಕಪ್ನಂತಹ ಒತ್ತಡ ಹೊಂದಿರುವ ಟೂರ್ನಿಗಳಲ್ಲಿ ಬ್ಯಾಟರ್ಗಳಿಂದ ಶತಕ ನಿರೀಕ್ಷಿಸುವಂತಿಲ್ಲ. ಅದಾಗ್ಯೂ 8 ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದರಲ್ಲಿ ಭಾರತೀಯ ಆಟಗಾರ ಕೂಡ ಇರೋದು ವಿಶೇಷ. ಹಾಗಿದ್ರೆ ಚುಟುಕು ಕದನದಲ್ಲಿ ಶತಕ ಬಾರಿಸಿದ ಆಟಗಾರರು ಯಾರೆಂದು ನೋಡೋಣ.
2 / 9
ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಮೊದಲ ಶತಕ ಬಾರಿಸಿದ್ದರು. 11 ಸೆಪ್ಟೆಂಬರ್ 2007 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೇಲ್ 57 ಎಸೆತಗಳಲ್ಲಿ 117 ರನ್ ಗಳಿಸಿದರು ಇದರಲ್ಲಿ ಏಳು ಬೌಂಡರಿ ಮತ್ತು 10 ಸಿಕ್ಸರ್‌ಗಳು ಮೂಡಿಬಂದಿತ್ತು.
3 / 9
ವಿಶ್ವಕಪ್‌ನಲ್ಲಿ ಭಾರತದ ಪರ ಶತಕ ಗಳಿಸಿದ ಏಕೈಕ ಬ್ಯಾಟರ್ ಸುರೇಶ್ ರೈನಾ. 2010 ರ ಟಿ20 ವಿಶ್ವಕಪ್‌ನಲ್ಲಿ ರೈನಾ ದಕ್ಷಿಣ ಆಫ್ರಿಕಾ ವಿರುದ್ಧ 60 ಎಸೆತಗಳಲ್ಲಿ 101 ರನ್ ಬಾರಿಸಿ ಮಿಂಚಿದ್ದರು.
4 / 9
2010 ರ ವಿಶ್ವಕಪ್ನಲ್ಲಿಯೇ, ಶ್ರೀಲಂಕಾದ ಮಹೇಲ ಜಯವರ್ಧನೆ ಜಿಂಬಾಬ್ವೆ ವಿರುದ್ಧ ಶತಕ ಗಳಿಸಿದರು. ಜಯವರ್ಧನೆ 64 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ನೊಂದಿಗೆ 100 ರನ್ ಬಾರಿಸಿದ್ದರು.
5 / 9
ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಮ್ ಟಿ20 ವಿಶ್ವಕಪ್‌ನಲ್ಲಿ ನಾಲ್ಕನೇ ಶತಕ ಬಾರಿಸಿದರು. 2012ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 58 ಎಸೆತಗಳಲ್ಲಿ 123 ರನ್ ಸಿಡಿಸಿದ್ದರು.
6 / 9
2014 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಶ್ರೀಲಂಕಾ ವಿರುದ್ಧ 64 ಎಸೆತಗಳಲ್ಲಿ 116 ರನ್ ಬಾರಿಸಿದ್ದರು. ಹೇಲ್ಸ್ ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ್ದರು.
7 / 9
2014ರ ವಿಶ್ವಕಪ್ನಲ್ಲೇ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ ಅಹ್ಮದ್ ಶೆಹಜಾದ್ 62 ಎಸೆತಗಳಲ್ಲಿ 111 ರನ್ ಬಾರಿಸಿ ಮಿಂಚಿದ್ದರು.
8 / 9
ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪರ ಶತಕ ಗಳಿಸಿದ ಏಕೈಕ ಬ್ಯಾಟರ್ ತಮೀಮ್ ಇಕ್ಬಾಲ್. ತಮೀಮ್ 2016 ರಲ್ಲಿ ಒಮಾನ್ ವಿರುದ್ಧ ಶತಕ ಬಾರಿಸಿ ಮಿಂಚಿದ್ದರು. 63 ಎಸೆತಗಳನ್ನು ಎದುರಿಸಿದ್ದ ತಮೀಮ್ ಇಕ್ಬಾಲ್ 10 ಬೌಂಡರಿ ಹಾಗೂ 5 ಸಿಕ್ಸ್ನೊಂದಿಗೆ 103 ರನ್ ಬಾರಿಸಿದ್ದರು.
9 / 9
ಟಿ20 ವಿಶ್ವಕಪ್‌ನಲ್ಲಿ 2 ಶತಕ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2016ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 48 ಎಸೆತಗಳಲ್ಲಿ ಗೇಲ್ ಶತಕ ಸಿಡಿಸಿದ್ದರು. ಇದಕ್ಕೂ ಮುನ್ನ 2007 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 57 ಎಸೆತಗಳಲ್ಲಿ 117 ರನ್ ಬಾರಿಸಿದ್ದರು.