T20 World Cup 2021: ಲೀಗ್ ಹಂತದಲ್ಲಿ ಟೀಮ್ ಇಂಡಿಯಾಗೆ 5 ಪಂದ್ಯ: ಹೀಗಿದೆ ವೇಳಾಪಟ್ಟಿ
TV9 Web | Updated By: ಝಾಹಿರ್ ಯೂಸುಫ್
Updated on:
Oct 21, 2021 | 2:03 PM
T20 World Cup 2021 India Schedule: ಪಾಕಿಸ್ತಾನ್ ಅಲ್ಲದೆ ಈ ಗ್ರೂಪ್ನಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ್ ತಂಡಗಳಿವೆ. ಹಾಗೆಯೇ ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ 2 ತಂಡಗಳ ವಿರುದ್ದ ಕೂಡ ಭಾರತ ಆಡಬೇಕಿದೆ. ಹಾಗಿದ್ರೆ ಟೀಮ್ ಇಂಡಿಯಾ ವೇಳಾಪಟ್ಟಿ ಹೇಗಿದೆ ನೋಡೋಣ.
1 / 8
ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಅಕ್ಟೋಬರ್ 17 ರಿಂದ 22 ರವರೆಗೆ ಅರ್ಹತಾ ಸುತ್ತಿನಲ್ಲಿ 8 ತಂಡಗಳು ಆಡಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೂಪರ್ 12 ಹಂತಕ್ಕೇರಲಿದೆ. ಅದರಂತೆ ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿದೆ.
2 / 8
ಇನ್ನು ಭಾರತ ತಂಡ ಗ್ರೂಪ್ 2 ನಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದೆ. ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ವನ್ನು ಟೀಮ್ ಇಂಡಿಯಾ ಎದುರಿಸುತ್ತಿರುವುದು ವಿಶೇಷ.
3 / 8
ಪಾಕಿಸ್ತಾನ್ ಅಲ್ಲದೆ ಈ ಗ್ರೂಪ್ನಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ್ ತಂಡಗಳಿವೆ. ಹಾಗೆಯೇ ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ 2 ತಂಡಗಳ ವಿರುದ್ದ ಕೂಡ ಭಾರತ ಆಡಬೇಕಿದೆ. ಹಾಗಿದ್ರೆ ಟೀಮ್ ಇಂಡಿಯಾ ವೇಳಾಪಟ್ಟಿ ಹೇಗಿದೆ ನೋಡೋಣ.
4 / 8
India vs Pakistan, T20 World cup 2021
5 / 8
ಅಕ್ಟೋಬರ್ 31: ಇಂಡಿಯಾ vs ನ್ಯೂಜಿಲೆಂಡ್ (ಈ ಪಂದ್ಯ ಕೂಡ ದುಬೈನಲ್ಲೇ ನಡೆಯಲಿದ್ದು, ಇದು ರಾತ್ರಿ: 7:30ಕ್ಕೆ ನಡೆಯಲಿದೆ)
6 / 8
ನವೆಂಬರ್ 3: ಇಂಡಿಯಾ vs ಅಫ್ಘಾನಿಸ್ತಾನ ( ಈ ಪಂದ್ಯ ಅಬುಧಾಬಿಯಲ್ಲಿ ರಾತ್ರಿ: 7:30ಕ್ಕೆ ಶುರುವಾಗಲಿದೆ)
7 / 8
ನವೆಂಬರ್ 5: ಇಂಡಿಯಾ vs ಅರ್ಹತಾ ಗುಂಪಿನಿಂದ ಆಯ್ಕೆಯಾಗುವ ತಂಡ ( ಈ ಪಂದ್ಯ ರಾತ್ರಿ: 7:30ಕ್ಕೆ, ದುಬೈನಲ್ಲಿ ನಡೆಯಲಿದೆ)
8 / 8
ನವೆಂಬರ್ 8: ಇಂಡಿಯಾ vs ಅರ್ಹತಾ ಗುಂಪಿನಿಂದ ಆಯ್ಕೆಯಾಗುವ ತಂಡ (ದುಬೈನಲ್ಲಿ ರಾತ್ರಿ 7:30ಕ್ಕೆ ಈ ಪಂದ್ಯ ಶುರುವಾಗಲಿದೆ )