T20 World Cup 2022: ಈ ಬಾರಿ ಉಡೀಸ್ ಆಗಲಿದೆ 10 ವಿಶ್ವ ದಾಖಲೆಗಳು
TV9 Web | Updated By: ಝಾಹಿರ್ ಯೂಸುಫ್
Updated on:
Oct 16, 2022 | 6:09 PM
T20 World Cup 2022: ಈ ಬಾರಿಯ ವಿಶ್ವಕಪ್‌ನಲ್ಲಿ ಭರ್ಜರಿ ಪೈಪೋಟಿಯನ್ನು ಎದುರು ನೋಡಬಹುದು. ಈ ಪೈಪೋಟಿಯ ನಡುವೆ 10 ಪ್ರಮುಖ ದಾಖಲೆಗಳು ಕೂಡ ಮುರಿಯಬಹುದು. ಆ ದಾಖಲೆಗಳು ಯಾವುವು ಎಂದರೆ...
1 / 12
8ನೇ ಆವೃತ್ತಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಶುರುವಾಗಿದೆ. ಕಾಂಗರೂ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಕಣಕ್ಕೆ ಇಳಿದರೆ, ಟೀಮ್ ಇಂಡಿಯಾ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.
2 / 12
ಹಾಗೆಯೇ ವೆಸ್ಟ್ ಇಂಡೀಸ್, ಶ್ರೀಲಂಕಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್‌ನಂತಹ ತಂಡಗಳು ಮತ್ತೊಮ್ಮೆ ಚಾಂಪಿಯನ್ ಆಗಲು ತಮ್ಮ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಭರ್ಜರಿ ಪೈಪೋಟಿಯನ್ನು ಎದುರು ನೋಡಬಹುದು. ಈ ಪೈಪೋಟಿಯ ನಡುವೆ 10 ಪ್ರಮುಖ ದಾಖಲೆಗಳು ಕೂಡ ಮುರಿಯಬಹುದು. ಆ ದಾಖಲೆಗಳು ಯಾವುವು ಎಂದರೆ...
3 / 12
1. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್: ಈ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಟಿ20 ವಿಶ್ವಕಪ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿ ಶ್ರೀಲಂಕಾ ತಂಡದ ಮಾಜಿ ನಾಯಕ ಗುರುತಿಸಿಕೊಂಡಿದ್ದಾರೆ. ಮಹೇಲ ಜಯವರ್ಧನೆ 31 ಪಂದ್ಯಗಳಲ್ಲಿ 1016 ರನ್ ಗಳಿಸಿದ್ದಾರೆ. ಇತ್ತ ಭಾರತ ತಂಡದ ನಾಯಕ ರೋಹಿತ್ ಶರ್ಮಾ (847 ರನ್), ಮಾಜಿ ನಾಯಕ ವಿರಾಟ್ ಕೊಹ್ಲಿ (845 ರನ್), ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (762 ರನ್) ಕೂಡ ನಂತರದ ಸ್ಥಾನದಲ್ಲಿದ್ದು, ಹೀಗಾಗಿ ಈ ದಾಖಲೆಯನ್ನು ಮುರಿಯುವ ಅವಕಾಶ ಈ ಮೂವರು ಬ್ಯಾಟ್ಸ್ಮನ್ಗಳಿಗಿದೆ.
4 / 12
2. ಅತಿ ಹೆಚ್ಚು ಶತಕಗಳ ದಾಖಲೆ: ಟಿ20 ವಿಶ್ವಕಪ್‌ನಲ್ಲಿ ಎಂಟು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದ್ದಾರೆ. ಇವರಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್. ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ ಮತ್ತು ನಾಯಕ ಜೋಸ್ ಬಟ್ಲರ್ ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. 2014 ರಲ್ಲಿ ಹೇಲ್ಸ್ ಮತ್ತು 2021 ರಲ್ಲಿ ಬಟ್ಲರ್ ಶತಕ ಬಾರಿಸಿದ್ದರು. ಈ ಬಾರಿ ಹೇಲ್ಸ್ ಹಾಗೂ ಬಟ್ಲರ್ ಶತಕ ಬಾರಿಸಿದ್ರೆ, 2007 ಮತ್ತು 2016ರಲ್ಲಿ ಶತಕ ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಬಹುದು ಅಥವಾ ಮುರಿಯಬಹುದು.
5 / 12
3. 50 + ರನ್ಸ್ ಇನಿಂಗ್ಸ್: ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 10 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (8 ಬಾರಿ) ಮತ್ತು ಡೇವಿಡ್ ವಾರ್ನರ್ (6 ಬಾರಿ) ಇದ್ದು, ಹೀಗಾಗಿ ಕೊಹ್ಲಿಯ ದಾಖಲೆಯನ್ನು ಮುರಿಯುವ ಅವಕಾಶ ಈ ಇಬ್ಬರು ಬ್ಯಾಟ್ಸ್ಮನ್ಗಳಿಗಿದೆ.
6 / 12
4. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್: ಒಂದೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. 2014ರಲ್ಲಿ ಆರು ಪಂದ್ಯಗಳನ್ನಾಡಿದ್ದ ಕೊಹ್ಲಿ 319 ರನ್ ಗಳಿಸಿದ್ದರು. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಹಾಗೂ ಮೊಹಮ್ಮದ್ ರಿಜ್ವಾನ್ ಈ ದಾಖಲೆ ಮುರಿಯಬಹುದು.
7 / 12
5. ಹೆಚ್ಚು ವಿಕೆಟ್‌ಗಳು: ಶಕೀಬ್ ಅಲ್ ಹಸನ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಹೊಂದಿದ್ದಾರೆ. ಅವರು 31 ಪಂದ್ಯಗಳಲ್ಲಿ 41 ವಿಕೆಟ್ ಪಡೆದಿದ್ದಾರೆ. ಈ ವಿಶ್ವಕಪ್ ಆಡುತ್ತಿರುವ ಆಟಗಾರರ ಪೈಕಿ ರವಿಚಂದ್ರನ್ ಅಶ್ವಿನ್ ಅವರಿಗೆ ಈ ದಾಖಲೆ ಮುರಿಯುವ ಅವಕಾಶವಿದೆ. ಅಶ್ವಿನ್ 18 ಪಂದ್ಯಗಳಲ್ಲಿ 26 ವಿಕೆಟ್ ಪಡೆದು ಇದೀಗ 2ನೇ ಸ್ಥಾನದಲ್ಲಿದ್ದಾರೆ.
8 / 12
6. ಅತಿ ಹೆಚ್ಚು ನಾಲ್ಕು ವಿಕೆಟ್‌ಗಳು: ಈ ವಿಶ್ವಕಪ್‌ನಲ್ಲಿ ಪಾಕ್ ಸ್ಪಿನ್ನರ್ ಅಜ್ಮಲ್ ಅವರ ದಾಖಲೆಯನ್ನು ಮುರಿಯುವ ಅವಕಾಶ ಶಕೀಬ್ ಅಲ್ ಹಸನ್ಗೆ ಸಿಗಲಿದೆ. ಹಾಗೆಯೇ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಸಹ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಸಯೀದ್ ಅಜ್ಮಲ್ ದಾಖಲೆಯನ್ನು ಈ ಬಾರಿ ಮುರಿಯಬಹುದು.
9 / 12
7. ಟಿ20 ವಿಶ್ವಕಪ್‌ನಲ್ಲಿ ಅತೀ ವಿಕೆಟ್‌ಗಳು: T20 ವಿಶ್ವಕಪ್‌ನಲ್ಲಿ ಆರು ಆಟಗಾರರು 13 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಪಡೆದಿದ್ದಾರೆ. ಉಮರ್ ಗುಲ್ ಮೊದಲೆರಡು ಆವೃತ್ತಿಗಳಲ್ಲಿ 13 ವಿಕೆಟ್ ಕಬಳಿಸಿದ್ದರು. 2010 ರಲ್ಲಿ, ಡರ್ಕ್ ನ್ಯಾನ್ಸ್ 14 ವಿಕೆಟ್‌ಗಳೊಂದಿಗೆ ಅವರ ದಾಖಲೆಯನ್ನು ಮುರಿದರು. 2012ರಲ್ಲಿ ಅಜಂತಾ ಮೆಂಡಿಸ್ 15 ವಿಕೆಟ್ ಪಡೆದಿದ್ದರು. ಈ ದಾಖಲೆ ಆರು ವರ್ಷಗಳ ಕಾಲ ನೆಲೆನಿಂತಿತ್ತು. 2021 ರಲ್ಲಿ ವನಿಂದು ಹಸರಂಗ 16 ವಿಕೆಟ್ ಪಡೆದು ಹೊಸ ದಾಖಲೆ ಬರೆದರು. ಇದೀಗ ಈ ದಾಖಲೆ ಮುರಿಯುವ ಅವಕಾಶ ಹಲವು ಬೌಲರ್ಗಳಿಗಿವೆ.
10 / 12
8. ಅತಿ ಹೆಚ್ಚು ಕ್ಯಾಚ್ ಗಳು: ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್ ಟಿ20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಅವರು 30 ಪಂದ್ಯಗಳಲ್ಲಿ 23 ಕ್ಯಾಚ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಇದೀಗ ಮಾರ್ಟಿನ್ ಗಪ್ಟಿಲ್ (19 ಕ್ಯಾಚ್), ಡೇವಿಡ್ ವಾರ್ನರ್ (18), ರೋಹಿತ್ ಶರ್ಮಾ (15), ಸ್ಟೀವ್ ಸ್ಮಿತ್ (14), ಗ್ಲೆನ್ ಮ್ಯಾಕ್ಸ್‌ವೆಲ್ (14) ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.
11 / 12
9. ವಿಕೆಟ್ ಕೀಪಿಂಗ್‌ನಲ್ಲಿ ಅತಿ ಹೆಚ್ಚು ಬಲಿಪಶು: ಈ ದಾಖಲೆಯು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಒಟ್ಟು 33 ಪಂದ್ಯಗಳಲ್ಲಿ ಧೋನಿ 32 ಆಟಗಾರರನ್ನು ಔಟ್ ಮಾಡಿದ್ದಾರೆ. ಇದೀಗ ಕ್ವಿಂಟನ್ ಡಿ ಕಾಕ್ (15) ಮತ್ತು ಮ್ಯಾಥ್ಯೂ ವೇಡ್ (14) ಅವರಿಗೆ ಈ ದಾಖಲೆ ಮುರಿಯುವ ಅವಕಾಶವಿದೆ.
12 / 12
10. ಒಂದೇ ವಿಶ್ವಕಪ್‌ನಲ್ಲಿ ವಿಕೆಟ್ ಕೀಪಿಂಗ್ ದಾಖಲೆ: ಒಂದೇ ವಿಶ್ವಕಪ್‌ನಲ್ಲಿ ಒಂಭತ್ತು ಬಲಿಪಶು ಪಡೆದ ವಿಕೆಟ್ ಕೀಪರ್ಗಳಲ್ಲಿ ಐವರಿದ್ದಾರೆ. ಎಬಿ ಡಿವಿಲಿಯರ್ಸ್, ಆಡಮ್ ಗಿಲ್‌ಕ್ರಿಸ್ಟ್, ಕಮ್ರಾನ್ ಅಕ್ಮಲ್, ಕುಮಾರ ಸಂಗಕ್ಕಾರ ಮತ್ತು ಮ್ಯಾಥ್ಯೂ ವೇಡ್ ಈ ಸಾಧನೆ ಮಾಡಿದ್ದರು. ಈ ಬಾರಿ ಯಾವುದಾದರೂ ವಿಕೆಟ್ ಕೀಪರ್ 10 ವಿಕೆಟ್ ಬಲಿ (ಸ್ಟಂಪ್+ಕ್ಯಾಚ್) ಪಡೆದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.