Updated on: Oct 16, 2022 | 9:32 PM
T20 World Cup in 2022: ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ಗೆ ಚಾಲನೆ ದೊರೆತಿದೆ. ಈ ಬಾರಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಅದರಲ್ಲಿ 240 ಆಟಗಾರರು ಕಾಣಿಸಿಕೊಂಡಿದ್ದಾರೆ.
ಈ ಆಟಗಾರರಲ್ಲಿ ಕೆಲ ಆಟಗಾರರಿಗೆ ಇದು ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್ ಕೆಲ ಹಿರಿಯ ಆಟಗಾರರು ಕೂಡ ಸ್ಥಾನ ಪಡೆದಿದ್ದು, 2024 ರ ಟಿ20 ವರ್ಲ್ಡ್ಕಪ್ ವೇಳೆ ಈ ಆಟಗಾರರು ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
ಹಾಗಿದ್ರೆ ಯಾವೆಲ್ಲಾ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ನೋಡೋಣ....
1- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಗಪ್ಟಿಲ್ಗೆ ಇದು ಕೊನೆಯ ವಿಶ್ವಕಪ್ ಆಗಿರಲಿದೆ. ಏಕೆಂದರೆ 36 ವರ್ಷದ ಗಪ್ಟಿಲ್ ಇನ್ನೆರಡು ವರ್ಷ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
2- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ವಾರ್ನರ್ ಕೂಡ ಈ ವಿಶ್ವಕಪ್ ಮೂಲಕ ಟಿ20 ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಯಿದೆ. 35 ವರ್ಷದ ವಾರ್ನರ್ ಸ್ಥಾನಕ್ಕಾಗಿ ಈಗಾಗಲೇ ಯುವ ಆಟಗಾರ ದಂಡೇ ಆಸ್ಟ್ರೇಲಿಯಾದಲ್ಲಿದೆ.
3- ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್): ಅಫ್ಘಾನ್ ತಂಡದ ನಾಯಕ ನಬಿಗೂ ಇದು ಕೊನೆಯ ವಿಶ್ವಕಪ್ ಆಗಿರಲಿದೆ. ಏಕೆಂದರೆ 38 ವರ್ಷದ ನಬಿಯು ಕಳಪೆ ಫಾರ್ಮ್ನಿಂದ ಬಳಲುತ್ತಿದ್ದು, ಹೀಗಾಗಿ ಈ ವಿಶ್ವಕಪ್ ಅಂತ್ಯದೊಂದಿಗೆ ಅವರ ಕ್ರಿಕೆಟ್ ಕೆರಿಯರ್ ಕೂಡ ಕೊನೆಗೊಳ್ಳುವ ಸಾಧ್ಯತೆಯಿದೆ.
4- ಮೊಯೀನ್ ಅಲಿ (ಇಂಗ್ಲೆಂಡ್); ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯೀನ್ ಅಲಿ ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸದ್ಯ 35 ವರ್ಷದವರಾಗಿರುವ ಮೊಯೀನ್ ಅಲಿ 2024 ರಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಅಲಿಗೆ ಇದುವೇ ಕೊನೆಯ ಟಿ20 ವಿಶ್ವಕ್ಪ ಆಗಿರಲಿದೆ.
5- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್): 35 ವರ್ಷದ ಶಕೀಬ್ ಅಲ್ ಹಸನ್ ಈ ಬಾರಿ ಬಾಂಗ್ಲಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಈ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಹಿರಿಯ ಆಟಗಾರರನ್ನು ಕೈ ಬಿಡುವುದು ಖಚಿತ. ಹೀಗಾಗಿ ಶಕೀಬ್ಗೂ ಇದು ಕೊನೆಯ ವಿಶ್ವಕಪ್ ಆಗಿರಲಿದೆ.
6- ಆರೋನ್ ಫಿಂಚ್ (ಆಸ್ಟ್ರೇಲಿಯಾ): ಈಗಾಗಲೇ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿರುವ ಆಸ್ಟ್ರೇಲಿಯಾ ನಾಯಕ ಫಿಂಚ್ ಈ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ನಿಂದ ಕೂಡ ನಿವೃತ್ತಿ ಹೊಂದಿದರೆ ಅಚ್ಚರಿಪಡಬೇಕಿಲ್ಲ. ಏಕೆಂದರೆ 35 ವರ್ಷದ ಫಿಂಚ್ ಸ್ಥಾನಕ್ಕಾಗಿ ಈಗಾಗಲೇ ಕ್ಯಾಮರೋನ್ ಗ್ರೀನ್ ಪೈಪೋಟಿಗೆ ಇಳಿದಿದ್ದಾರೆ.
7- ರೋಹಿತ್ ಶರ್ಮಾ (ಭಾರತ): ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೂ ಇದು ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ. 35 ವರ್ಷದ ಹಿಟ್ಮ್ಯಾನ್ ಮುಂದಿನ 2 ವರ್ಷಗಳ ಕಾಲ ತಂಡದಲ್ಲಿ ಉಳಿದುಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ 2024 ರ ವಿಶ್ವಕಪ್ನಲ್ಲಿ ಹಿಟ್ಮ್ಯಾನ್ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.
8- ದಿನೇಶ್ ಕಾರ್ತಿಕ್ (ಭಾರತ): ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಡಿಕೆ ಅಚ್ಚರಿಯ ಕಂಬ್ಯಾಕ್ ಮೂಲಕ ಟಿ20 ವಿಶ್ವಕಪ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇದಾಗ್ಯೂ ಅವರು 2024 ರವರೆಗೆ ತಂಡದಲ್ಲಿ ಇರುವುದು ಅನುಮಾನ. ಹೀಗಾಗಿ 37 ವರ್ಷದ ದಿನೇಶ್ ಕಾರ್ತಿಕ್ಗೂ ಇದು ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ.