Updated on: Oct 16, 2022 | 10:32 PM
ಟಿ20 ವಿಶ್ವಕಪ್ನ 8ನೇ ಆವೃತ್ತಿಗೆ ಚಾಲನೆ ದೊರೆತಿದೆ. ಈ ಬಾರಿ ಕೂಡ ಒಟ್ಟು 16 ತಂಡಗಳು ಕಣದಲ್ಲಿದೆ. ಈ ಹದಿನಾರು ತಂಡಗಳಲ್ಲಿ ಒಟ್ಟು 240 ಆಟಗಾರರು ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ಈ 240 ಆಟಗಾರರಲ್ಲಿ ಕೇವಲ ಇಬ್ಬರು ಆಟಗಾರರು ಮಾತ್ರ ಇದುವರೆಗಿನ ಎಲ್ಲಾ ಟಿ20 ವಿಶ್ವಕಪ್ ಆಡಿದ್ದಾರೆ.
ಅಂದರೆ 2007 ಚೊಚ್ಚಲ ಟಿ20 ವಿಶ್ವಕಪ್ನಿಂದ ಹಿಡಿದು 2009, 2010, 2012, 2014, 2016, 2021 ಮತ್ತು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡಿರುವುದು ಕೇವಲ ಇಬ್ಬರು ಆಟಗಾರರು ಮಾತ್ರ.
ಈ ಇಬ್ಬರು ಆಟಗಾರರು ಎಲ್ಲಾ ಟಿ20 ವಿಶ್ವಕಪ್ಗೂ ಆಯ್ಕೆಯಾದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರೆಂದರೆ....
ಶಕೀಬ್ ಅಲ್ ಹಸನ್: ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ 2007 ರಿಂದ ಎಲ್ಲಾ ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ.
ರೋಹಿತ್ ಶರ್ಮಾ: 2007 ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ಹಿಟ್ಮ್ಯಾನ್, ಆ ಬಳಿಕ ಪ್ರತಿ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ಇದೀಗ ಮೊದಲ ಬಾರಿಗೆ ನಾಯಕನಾಗಿ ಟಿ20 ವಿಶ್ವಕಪ್ ಆಡುತ್ತಿದ್ದಾರೆ.