- Kannada News Photo gallery Cricket photos t20 world cup 2022 Virat kohli fan ameesha basera photo viral
ನೆಟ್ಟಿಗರ ನಿದ್ದೆಗೆಡಿಸಿದ ವಿರಾಟ್ ಅಭಿಮಾನಿ; ಕೊಹ್ಲಿಯೊಂದಿಗೆ ಕಾಣಿಸಿಕೊಂಡ ಈ ಚಂದ್ರಚಕೋರಿ ಯಾರು?
ಅಮೀಶಾ ಬಸೇರಾ ಮತ್ತು ವಿರಾಟ್ ಕೊಹ್ಲಿಯ ಈ ಫೋಟೋ ಸಖತ್ ವೈರಲ್ ಆಗಿದ್ದು, ಕೊಹ್ಲಿಯ ಈ ಅಭಿಮಾನಿಯ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
Updated on: Oct 17, 2022 | 12:12 PM

ತನ್ನ ಅದ್ಭುತ ಬ್ಯಾಟಿಂಗ್ನಿಂದ ಕ್ರಿಕೆಟ್ ಲೋಕದಲ್ಲಿ ಸಾಮ್ರಾಟನಾಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಕೊಹ್ಲಿ ಹೊರಗೆ ಕಾಣಿಸಿಕೊಂಡಾಗಲೆಲ್ಲ ಸಾವಿರಾರು ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗಾಗಿ ಹಾಗೂ ಆಟೋಗ್ರಾಫ್ಗಾಗಿ ಅವರ ಹಿಂದೆ ಮುಗಿಬೀಳುತ್ತಾರೆ. ಸದ್ಯ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದಲ್ಲಿರುವ ಕೊಹ್ಲಿಯನ್ನು ಅಭಿಮಾನಿಯೊಬ್ಬಳು ಬೇಟಿಯಾಗಿದ್ದಾಳೆ.

ಅಭ್ಯಾಸ ಪಂದ್ಯಗಳಿಗಾಗಿ ಬ್ರಿಸ್ಬೇನ್‌ನಲ್ಲಿರುವ ವಿರಾಟ್ ಕೊಹ್ಲಿಯನ್ನು ಅಮೀಶಾ ಬಸೇರಾ ಎಂಬ ಅಭಿಮಾನಿಯೊಬ್ಬಳು ಬೇಟಿಯಾಗಿದ್ದು, ಅವರೊಂದಿಗೆ ಸೆಲ್ಫಿಯೊಂದನ್ನು ತೆಗೆದುಕೊಂಡಿದ್ದಾಳೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಯುವತಿ ಹರಿಬಿಟ್ಟಿದ್ದಾಳೆ.

ಅಮೀಶಾ ಬಸೇರಾ ಮತ್ತು ವಿರಾಟ್ ಕೊಹ್ಲಿಯ ಈ ಫೋಟೋ ಸಖತ್ ವೈರಲ್ ಆಗಿದ್ದು, ಕೊಹ್ಲಿಯ ಈ ಅಭಿಮಾನಿಯ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಮಿಶಾ ಮೂಲತಃ ಕ್ವೀನ್ಸ್‌ಲ್ಯಾಂಡ್ ನಿವಾಸಿಯಾಗಿದ್ದು, ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಅಮೀಶಾ ಬಸೇರಾ ಕೊಹ್ಲಿಯೊಂದಿಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೊದಲು ಅವರಿಗೆ ಸುಮಾರು 1000 ಅನುಯಾಯಿಗಳಿದ್ದರು. ಆದರೆ ಈ ಫೋಟೋ ವೈರಲ್ ಆದ ಬಳಿಕ ಈಗ ಅವರ ಫಾಲೋವರ್ಸ್ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ.

ಸದ್ಯ ಬ್ರಿಸ್ಬೇನ್‌ನಲ್ಲಿರುವ ಟೀಂ ಇಂಡಿಯಾ ಆಸ್ಟ್ರೇಲಿಯ ವಿರುದ್ಧ T20 ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಆದರೆ ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸದ ವಿರಾಟ್ ಕೊಹ್ಲಿ ಕೇವಲ 19 ರನ್ ಗಳಿಸಿ ಔಟಾದರು. ಇದೀಗ ಎರಡನೇ ಅಭ್ಯಾಸ ಪಂದ್ಯ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.




