T20 World Cup 2022: 2 ವಾರಗಳ ಮುಂಚೆ ನ್ಯೂಜಿಲೆಂಡ್ ತಂಡದಲ್ಲಿದ್ದ ಕ್ರಿಕೆಟಿಗ ಈಗ ನೆದರ್​ಲ್ಯಾಂಡ್ಸ್​ ಆಟಗಾರ..!

T20 World Cup 2022: ನ್ಯೂಜಿಲೆಂಡ್ ತಂಡದಲ್ಲಿದ್ದ ಆಲ್​ರೌಂಡರ್ ಲೋಗನ್ ವ್ಯಾನ್ ಬೀಕ್ ಇದೀಗ ನೆದರ್​ಲ್ಯಾಂಡ್ಸ್ ಪರ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಹೀಗೆ ವಾರಗಳ ಅಂತರದಲ್ಲಿ ಲೋಗನ್ ತಂಡವನ್ನು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Oct 16, 2022 | 8:54 PM

ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಕಾಣಿಸಿಕೊಂಡ ಆಟಗಾರ ವಾರಗಳ ಅಂತರದಲ್ಲಿ ಜೆರ್ಸಿ ಬದಲಿಸಿದರೆ ಹೇಗಿರುತ್ತೆ? ಈ ಬಾರಿಯ ಟಿ20 ವಿಶ್ವಕಪ್​ ಅಂತಹದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

1 / 7
ಕೆಲ ವಾರಗಳ ಹಿಂದೆ ಟೀಮ್ ಇಂಡಿಯಾ ಎ ತಂಡದ ವಿರುದ್ಧ ನ್ಯೂಜಿಲೆಂಡ್ ಎ ತಂಡವು ಸರಣಿ ಆಡಿತ್ತು. ಈ ವೇಳೆ ನ್ಯೂಜಿಲೆಂಡ್ ತಂಡದಲ್ಲಿದ್ದ ಆಲ್​ರೌಂಡರ್ ಲೋಗನ್ ವ್ಯಾನ್ ಬೀಕ್ ಇದೀಗ ನೆದರ್​ಲ್ಯಾಂಡ್ಸ್ ಪರ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಹೀಗೆ ವಾರಗಳ ಅಂತರದಲ್ಲಿ ಲೋಗನ್ ತಂಡವನ್ನು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.

2 / 7
ಟೀಮ್ ಇಂಡಿಯಾ ವಿರುದ್ಧ ಆಡಲಾದ ಅನಧಿಕೃತ ಸರಣಿಯಲ್ಲಿ ನ್ಯೂಜಿಲೆಂಡ್ ಪರ ಕಣಕ್ಕಿಳಿದಿದ್ದ ಲೋಗನ್ 5 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು. ಇದಾಗ್ಯೂ ಲೋಗನ್ ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿಲ್ಲ. ಹೀಗಾಗಿ ಸಿಕ್ಕ ಅವಕಾಶದಲ್ಲಿ ದೇಶವನ್ನೇ ಬದಲಿಸಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೊಂದು ನಿಮ್ಮಲ್ಲೂ ಇರುತ್ತದೆ. ಇದಕ್ಕೆ ಉತ್ತರ....

3 / 7
ಲೋಗನ್ ನ್ಯೂಜಿಲೆಂಡ್​ನ ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರೂ, ಅವರ ತಂದೆ ಡಚ್ ಮೂಲದವರು. ಅದಕ್ಕೇ ಅಲ್ಲಿನ ಪಾಸ್ ಪೋರ್ಟ್ ಕೂಡ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಅವರಿಗೆ ನೆದರ್​ಲ್ಯಾಂಡ್ಸ್​ ಪರ ಕ್ರಿಕೆಟ್ ಆಡುವ ಅರ್ಹತೆ ಸಿಕ್ಕಿದೆ.

4 / 7
ಅಂದಹಾಗೆ ನ್ಯೂಜಿಲೆಂಡ್ ಎ ತಂಡದಲ್ಲಿರುವಾಗಲೇ ಲೋಗನ್ ನೆದರ್​ಲ್ಯಾಂಡ್ಸ್ ಪರ ಪದಾರ್ಪಣೆ ಮಾಡಿದ್ದರು ಎಂಬುದು ವಿಶೇಷ. ಅಂದರೆ 2014 ರಲ್ಲಿ ಯುಎಇ ವಿರುದ್ಧದ ಟಿ20 ಪಂದ್ಯದೊಂದಿಗೆ ನೆದರ್​ಲ್ಯಾಂಡ್ಸ್​ಗಾಗಿ ತಮ್ಮ ಚೊಚ್ಚಲ ಪಂದ್ಯವಾಡಿದ್ದರು. ಅಲ್ಲದೆ ಕಳೆದ ವರ್ಷ, ಅವರು ಸ್ಕಾಟ್ಲೆಂಡ್ ವಿರುದ್ಧ ನೆದರ್​ಲ್ಯಾಂಡ್ಸ್ ಪರ ಏಕದಿನ ಪಂದ್ಯವನ್ನೂ ಕೂಡ ಆಡಿದ್ದರು.

5 / 7
ಇದೀಗ ಟಿ20 ವಿಶ್ವಕಪ್​ನಲ್ಲಿ ಮತ್ತೆ ನೆದರ್​ಲ್ಯಾಂಡ್ಸ್ ಪರ ಕಣಕ್ಕಿಳಿಯುವ ಮೂಲಕ ನ್ಯೂಜಿಲೆಂಡ್ ಎ ತಂಡದ ಆಟಗಾರ ಲೋಗನ್ ವ್ಯಾನ್ ಬೀಕ್ ಎಲ್ಲರ ಗಮನ ಸೆಳೆದಿದ್ದಾರೆ.

6 / 7
ಇನ್ನು ಟಿ20 ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ವಿರುದ್ಧ ನೆದರ್​ಲ್ಯಾಂಡ್ಸ್ ತಂಡವು 3 ವಿಕೆಟ್​ಗಳಿಂದ ರೋಚಕ ಜಯ ಸಾಧಿಸಿದೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ 112 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನೆದರ್​ಲ್ಯಾಂಡ್ಸ್ ತಂಡವು 19.5 ಓವರ್​ಗಳಲ್ಲಿ ಗುರಿಮುಟ್ಟುವ ಮೂಲಕ ರೋಚಕ ಜಯ ತನ್ನದಾಗಿಸಿಕೊಂಡಿತು.

7 / 7
Follow us
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್