Team India: ಅಭಿಮಾನಿಯನ್ನು ದಂಡದಿಂದ ಪಾರು ಮಾಡಿದ ಟೀಮ್ ಇಂಡಿಯಾ
TV9 Web | Updated By: ಝಾಹಿರ್ ಯೂಸುಫ್
Updated on:
Oct 25, 2022 | 7:33 PM
T20 World Cup 2022: ಪಾಕಿಸ್ತಾನ್ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ ಅಕ್ಟೋಬರ್ 27 ರಂದು 2ನೇ ಪಂದ್ಯವಾಡಲಿದೆ. ಸಿಡ್ನಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
1 / 5
T20 World Cup 2022: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಪಾಕಿಸ್ತಾನ್ ವಿರುದ್ಧ ರೋಚಕ ಗೆಲುವಿನ ಮೂಲಕ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿರ್ಧಾರ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
2 / 5
ಭಾರತ-ಪಾಕ್ ನಡುವಣ ಪಂದ್ಯದ ವೇಳೆ ಟೀಮ್ ಇಂಡಿಯಾ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದರು. ಅಲ್ಲದೆ ಈ ವೇಳೆ ಭಾರತೀಯ ಆಟಗಾರರನ್ನು ಭೇಟಿಯಾಗಲು ಯತ್ನಿಸಿದ್ದರು. ಇದರಿಂದ ಕೆಲ ಕ್ಷಣಗಳ ಕಾಲ ಪಂದ್ಯವನ್ನು ನಿಲ್ಲಿಸಬೇಕಾಯಿತು.
3 / 5
ಅತ್ತ ಭದ್ರತಾ ಸಿಬ್ಬಂದಿಗಳು ಟೀಮ್ ಇಂಡಿಯಾ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಪಂದ್ಯಕ್ಕೆ ಅಡ್ಡಿಪಡಿಸಿದ ಕಾರಣ ಆತನ ಮೇಲೆ ಸುಮಾರು 6 ಲಕ್ಷ ರೂ. ದಂಡ ವಿಧಿಸಲು ಮುಂದಾಗಿತ್ತು. ಆದರೆ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿ ವಿರುದ್ಧ ಟೀಮ್ ಇಂಡಿಯಾ ಆಟಗಾರರು ಯಾವುದೇ ದೂರು ನೀಡಲಿಲ್ಲ. ಇದರಿಂದ ಆತನನ್ನು ಯಾವುದೇ ದೂರಿಲ್ಲದ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
4 / 5
ಮೈದಾನಕ್ಕೆ ನುಗ್ಗಿದ ಅಭಿಮಾನಿಯ ಹೇಳಿಕೆಯನ್ನು ಆಧರಿಸಿ ಆಯಾ ತಂಡಗಳು ದೂರು ನೀಡಬಹುದಾಗಿದೆ. ಈ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸುವವರಿಗೆ ದಂಡ ವಿಧಿಸಿ, ಇಂತಹ ಘಟನೆಗಳನ್ನು ತಡೆಯಲು ನಿಯಮಗಳನ್ನು ರೂಪಿಸಲಾಗಿದೆ. ಇದಾಗ್ಯೂ ಟೀಮ್ ಇಂಡಿಯಾ ಅಭಿಮಾನಿ ವಿರುದ್ಧ ಯಾವುದೇ ಕ್ರಮಕೊಳ್ಳುವಂತೆ ಭಾರತ ತಂಡದವರು ಸೂಚಿಸಿಲ್ಲ. ಹೀಗಾಗಿ ಮೈದಾನಕ್ಕೆ ನುಗ್ಗಿದ ಕ್ರಿಕೆಟ್ ಫ್ಯಾನ್ 6 ಲಕ್ಷ ರೂ. ದಂಡ ಕಟ್ಟಿಸಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
5 / 5
ಸದ್ಯ ಪಾಕಿಸ್ತಾನ್ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ ಅಕ್ಟೋಬರ್ 27 ರಂದು 2ನೇ ಪಂದ್ಯವಾಡಲಿದೆ. ಸಿಡ್ನಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
Published On - 7:32 pm, Tue, 25 October 22