T20 World Cup 2022: 2 ವಾರಗಳ ಮುಂಚೆ ನ್ಯೂಜಿಲೆಂಡ್ ತಂಡದಲ್ಲಿದ್ದ ಕ್ರಿಕೆಟಿಗ ಈಗ ನೆದರ್ಲ್ಯಾಂಡ್ಸ್ ಆಟಗಾರ..!
TV9 Web | Updated By: ಝಾಹಿರ್ ಯೂಸುಫ್
Updated on:
Oct 16, 2022 | 8:54 PM
T20 World Cup 2022: ನ್ಯೂಜಿಲೆಂಡ್ ತಂಡದಲ್ಲಿದ್ದ ಆಲ್ರೌಂಡರ್ ಲೋಗನ್ ವ್ಯಾನ್ ಬೀಕ್ ಇದೀಗ ನೆದರ್ಲ್ಯಾಂಡ್ಸ್ ಪರ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಹೀಗೆ ವಾರಗಳ ಅಂತರದಲ್ಲಿ ಲೋಗನ್ ತಂಡವನ್ನು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.
1 / 7
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಕಾಣಿಸಿಕೊಂಡ ಆಟಗಾರ ವಾರಗಳ ಅಂತರದಲ್ಲಿ ಜೆರ್ಸಿ ಬದಲಿಸಿದರೆ ಹೇಗಿರುತ್ತೆ? ಈ ಬಾರಿಯ ಟಿ20 ವಿಶ್ವಕಪ್ ಅಂತಹದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
2 / 7
ಕೆಲ ವಾರಗಳ ಹಿಂದೆ ಟೀಮ್ ಇಂಡಿಯಾ ಎ ತಂಡದ ವಿರುದ್ಧ ನ್ಯೂಜಿಲೆಂಡ್ ಎ ತಂಡವು ಸರಣಿ ಆಡಿತ್ತು. ಈ ವೇಳೆ ನ್ಯೂಜಿಲೆಂಡ್ ತಂಡದಲ್ಲಿದ್ದ ಆಲ್ರೌಂಡರ್ ಲೋಗನ್ ವ್ಯಾನ್ ಬೀಕ್ ಇದೀಗ ನೆದರ್ಲ್ಯಾಂಡ್ಸ್ ಪರ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಹೀಗೆ ವಾರಗಳ ಅಂತರದಲ್ಲಿ ಲೋಗನ್ ತಂಡವನ್ನು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.
3 / 7
ಟೀಮ್ ಇಂಡಿಯಾ ವಿರುದ್ಧ ಆಡಲಾದ ಅನಧಿಕೃತ ಸರಣಿಯಲ್ಲಿ ನ್ಯೂಜಿಲೆಂಡ್ ಪರ ಕಣಕ್ಕಿಳಿದಿದ್ದ ಲೋಗನ್ 5 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು. ಇದಾಗ್ಯೂ ಲೋಗನ್ ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿಲ್ಲ. ಹೀಗಾಗಿ ಸಿಕ್ಕ ಅವಕಾಶದಲ್ಲಿ ದೇಶವನ್ನೇ ಬದಲಿಸಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೊಂದು ನಿಮ್ಮಲ್ಲೂ ಇರುತ್ತದೆ. ಇದಕ್ಕೆ ಉತ್ತರ....
4 / 7
ಲೋಗನ್ ನ್ಯೂಜಿಲೆಂಡ್ನ ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರೂ, ಅವರ ತಂದೆ ಡಚ್ ಮೂಲದವರು. ಅದಕ್ಕೇ ಅಲ್ಲಿನ ಪಾಸ್ ಪೋರ್ಟ್ ಕೂಡ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಅವರಿಗೆ ನೆದರ್ಲ್ಯಾಂಡ್ಸ್ ಪರ ಕ್ರಿಕೆಟ್ ಆಡುವ ಅರ್ಹತೆ ಸಿಕ್ಕಿದೆ.
5 / 7
ಅಂದಹಾಗೆ ನ್ಯೂಜಿಲೆಂಡ್ ಎ ತಂಡದಲ್ಲಿರುವಾಗಲೇ ಲೋಗನ್ ನೆದರ್ಲ್ಯಾಂಡ್ಸ್ ಪರ ಪದಾರ್ಪಣೆ ಮಾಡಿದ್ದರು ಎಂಬುದು ವಿಶೇಷ. ಅಂದರೆ 2014 ರಲ್ಲಿ ಯುಎಇ ವಿರುದ್ಧದ ಟಿ20 ಪಂದ್ಯದೊಂದಿಗೆ ನೆದರ್ಲ್ಯಾಂಡ್ಸ್ಗಾಗಿ ತಮ್ಮ ಚೊಚ್ಚಲ ಪಂದ್ಯವಾಡಿದ್ದರು. ಅಲ್ಲದೆ ಕಳೆದ ವರ್ಷ, ಅವರು ಸ್ಕಾಟ್ಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ ಪರ ಏಕದಿನ ಪಂದ್ಯವನ್ನೂ ಕೂಡ ಆಡಿದ್ದರು.
6 / 7
ಇದೀಗ ಟಿ20 ವಿಶ್ವಕಪ್ನಲ್ಲಿ ಮತ್ತೆ ನೆದರ್ಲ್ಯಾಂಡ್ಸ್ ಪರ ಕಣಕ್ಕಿಳಿಯುವ ಮೂಲಕ ನ್ಯೂಜಿಲೆಂಡ್ ಎ ತಂಡದ ಆಟಗಾರ ಲೋಗನ್ ವ್ಯಾನ್ ಬೀಕ್ ಎಲ್ಲರ ಗಮನ ಸೆಳೆದಿದ್ದಾರೆ.
7 / 7
ಇನ್ನು ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ವಿರುದ್ಧ ನೆದರ್ಲ್ಯಾಂಡ್ಸ್ ತಂಡವು 3 ವಿಕೆಟ್ಗಳಿಂದ ರೋಚಕ ಜಯ ಸಾಧಿಸಿದೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ 112 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ ತಂಡವು 19.5 ಓವರ್ಗಳಲ್ಲಿ ಗುರಿಮುಟ್ಟುವ ಮೂಲಕ ರೋಚಕ ಜಯ ತನ್ನದಾಗಿಸಿಕೊಂಡಿತು.