IND vs IRE: ಅತಿ ಹೆಚ್ಚು ಮೇಡನ್ ಓವರ್; ಇತಿಹಾಸ ಬರೆದ ಯಾರ್ಕರ್ ಕಿಂಗ್ ಬುಮ್ರಾ..!
T20 World Cup 2024, Jasprit Bumrah: ಐರ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ 6ನೇ ಓವರ್ ಎಸೆಯಲು ದಾಳಿಗಿಳಿದ ಬುಮ್ರಾ, ಈ ಓವರ್ನಲ್ಲಿ ಒಂದೇ ಒಂದು ರನ್ ನೀಡಲಿಲ್ಲ. ಅಂದರೆ ಬುಮ್ರಾ ಎಸೆದ 6ನೇ ಓವರ್ ಮೇಡನ್ ಆಯಿತು. ಈ ಮೂಲಕ ಬುಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದರು.
1 / 7
2024 ರ ಟಿ20 ವಿಶ್ವಕಪ್ನ 8 ನೇ ಪಂದ್ಯವು ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ.
2 / 7
ಐರ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ 6ನೇ ಓವರ್ ಎಸೆಯಲು ದಾಳಿಗಿಳಿದ ಬುಮ್ರಾ, ಈ ಓವರ್ನಲ್ಲಿ ಒಂದೇ ಒಂದು ರನ್ ನೀಡಲಿಲ್ಲ. ಅಂದರೆ ಬುಮ್ರಾ ಎಸೆದ 6ನೇ ಓವರ್ ಮೇಡನ್ ಆಯಿತು. ಈ ಮೂಲಕ ಬುಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದರು.
3 / 7
ಇದು ಟಿ20 ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ 11ನೇ ಮೇಡನ್ ಓವರ್ ಆಗಿತ್ತು. ಇದರೊಂದಿಗೆ ಟೆಸ್ಟ್ ಆಡುವ ರಾಷ್ಟ್ರದ ಬೌಲರ್‌ಗಳ ಪೈಕಿ ಅತಿ ಹೆಚ್ಚು ಮೇಡನ್ ಓವರ್‌ಗಳನ್ನು ಎಸೆದ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ.
4 / 7
ಇದರೊಂದಿಗೆ ಈ ಪಟ್ಟಿಯಲ್ಲಿ ಈ ಮೊದಲು ಬುಮ್ರಾ ಜೊತೆಗೆ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದ ಮಾಜಿ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದ್ದಾರೆ. ಭುವನೇಶ್ವರ್ ಕುಮಾರ್ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ 10 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ್ದರು.
5 / 7
ಬುಮ್ರಾ ಜೊತೆಗೆ ಈ ಪಂದ್ಯದಲ್ಲಿ 2 ವಿಕೆಟ್ ಪಡೆದ ಅರ್ಷದೀಪ್ ಸಿಂಗ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಈ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.
6 / 7
ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನ ಪವರ್ಪ್ಲೇನಲ್ಲಿ ಇದುವರೆಗೆ 25 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದೀಗ ಬುಮ್ರಾರನ್ನು ಹಿಂದಿಕ್ಕಿರುವ ಅರ್ಷದೀಪ್ ಸಿಂಗ್ ಪವರ್ಪ್ಲೇನಲ್ಲಿ 26 ವಿಕೆಟ್‌ಗಳನ್ನು ಪಡೆದಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭುವನೇಶ್ವರ್ ಕುಮಾರ್ 47 ವಿಕೆಟ್ ಉರುಳಿಸಿದ್ದಾರೆ.
7 / 7
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ಭಾರತದ ವೇಗಿಗಳ ದಾಳಿಗೆ ನಲುಗಿ ಕೇವಲ 96 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಉಪನಾಯಕ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು.
Published On - 10:39 pm, Wed, 5 June 24