T20 World Cup 2024: 3000 ದಿನಗಳ ನಂತರ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ ಇಂಗ್ಲೆಂಡ್..!

T20 World Cup 2024: 9ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಆಂಗ್ಲರು ಆಡಿದ ಮೊದಲ ಪಂದ್ಯದಲ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಖಾತೆ ಹಾಕಿಕೊಂಡಿದ್ದಾರೆ. ಟಿ20 ವಿಶ್ವಕಪ್​ನಲ್ಲಿ 3000 ದಿನಗಳ ನಂತರ ಅಂದರೆ 2016 ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡ ಎದುರಿಸಿದ್ದ ಮುಜುಗರವನ್ನು ಮತ್ತೊಮ್ಮೆ ಅನುಭವಿಸಿದೆ.

|

Updated on: Jun 05, 2024 | 5:00 PM

2024 ರ ಟಿ 20 ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಬೇಕು ಎಂದುಕೊಂಡಿದ್ದ ಇಂಗ್ಲೆಂಡ್‌ಗೆ ನಿರಾಸೆ ಎದುರಾಗಿದೆ. ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಯುರೋಪಿಯನ್ ತಂಡವನ್ನು ಸೋಲಿಸುವ ಆಂಗ್ಲರ ಆಕಾಂಕ್ಷೆಯೂ ನುಚ್ಚುನೂರಾಗಿದೆ.

1 / 7
ಇದೆಲ್ಲದರ ಹೊರತಾಗಿ ಆಂಗ್ಲರು ಆಡಿದ ಮೊದಲ ಪಂದ್ಯದಲ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಖಾತೆ ಹಾಕಿಕೊಂಡಿದ್ದಾರೆ. ಟಿ20 ವಿಶ್ವಕಪ್​ನಲ್ಲಿ 3000 ದಿನಗಳ ನಂತರ ಅಂದರೆ 2016 ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡ ಎದುರಿಸಿದ್ದ ಮುಜುಗರವನ್ನು ಮತ್ತೊಮ್ಮೆ ಅನುಭವಿಸಿದೆ.

2 / 7
ವಾಸ್ತವವಾಗಿ ನಿನ್ನೆ ನಡೆದ ಟಿ20 ವಿಶ್ವಕಪ್ 6ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡದ ಆರಂಭಿಕರಿಬ್ಬರು ಒಟ್ಟಾಗಿ ಮೊದಲ 10 ಓವರ್‌ಗಳಲ್ಲಿ ಸ್ಕೋರ್ ಬೋರ್ಡ್‌ನಲ್ಲಿ 90 ರನ್‌ ದಾಖಲಿಸಿದರು. ಅಂದರೆ ಈ 10 ಓವರ್​ಗಳಲ್ಲಿ ಸ್ಕಾಟ್ಲೆಂಡ್‌ನ ಯಾವುದೇ ವಿಕೆಟ್ ಬೀಳಲಿಲ್ಲ.

3 / 7
ಇದಾದ ನಂತರ ಮಳೆಯಿಂದ ನಿಂತಿ ಪಂದ್ಯ ಮತ್ತೆ ಆರಂಭವಾಗಲೇ ಇಲ್ಲ. ಆದರೆ, ಈ 10 ಓವರ್​ಗಳಲ್ಲಿ ಸ್ಕಾಟ್ಲೆಂಡ್ ತಂಡದ ಒಂದೇ ಒಂದು ವಿಕೆಟ್ ತೆಗೆಯುವುದರಲ್ಲಿ ವಿಫಲರಾದ ಇಂಗ್ಲೆಂಡ್ ವೇಗಿಗಳು 3000 ದಿನಗಳ ನಂತರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗುವಂತ್ತಾಗಿದೆ.

4 / 7
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್‌ನ ಇನ್ನಿಂಗ್ಸ್‌ನ ಮೊದಲ 6 ಓವರ್‌ಗಳಲ್ಲಿ ಅಂದರೆ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ಪತನವಾಗಲಿಲ್ಲ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ವಿಕೆಟ್ ಪಡೆಯಲು ತಂಡದ 5 ಬೌಲರ್‌ಗಳನ್ನು ಬಳಸಿದರೂ ಯಾವುದೇ ಯಶಸ್ಸು ಸಿಗಲಿಲ್ಲ.

5 / 7
2016ರ ಟಿ20 ವಿಶ್ವಕಪ್‌ನಲ್ಲಿ ಅಂದರೆ ನಿಖರವಾಗಿ 3000 ದಿನಗಳ ಹಿಂದೆ ಇದೇ ಮುಜುಗರಕ್ಕೆ ಇಂಗ್ಲೆಂಡ್‌ ಒಳಗಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂದಿನ ಪಂದ್ಯದ ಪವರ್‌ಪ್ಲೇಯಲ್ಲಿ ಇಂಗ್ಲೆಂಡ್‌ ವಿಕೆಟ್‌ ಪಡೆಯುವಲ್ಲಿ ವಿಫಲವಾಗಿತ್ತು. 18 ಮಾರ್ಚ್ 2016 ರಂದು ನಡೆದ ಆ ಪಂದ್ಯದ ಪವರ್‌ಪ್ಲೇ ಅಂದರೆ ಮೊದಲ 6 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಯಾವುದೇ ವಿಕೆಟ್ ನಷ್ಟವಿಲ್ಲದೆ 83 ರನ್‌ ಕಲೆಹಾಕಿತ್ತು.

6 / 7
ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಆಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ 2 ಎಸೆತಗಳು ಬಾಕಿ ಇರುವಂತೆ 230 ರನ್‌ಗಳ ಗುರಿಯನ್ನು ಸಾಧಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತ್ತು.

7 / 7
Follow us
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ

ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು

ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ

‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?

ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್

ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ

Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು

ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು

ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು

ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್