Hardik Pandya: ವೆಸ್ಟ್ ಇಂಡೀಸ್ ಸ್ಕೋರ್​ ಕಾರ್ಡ್​ನಲ್ಲಿ ಹಾರ್ದಿಕ್ ಪಾಂಡ್ಯ..!

|

Updated on: Jun 04, 2024 | 12:53 PM

T20 World Cup 2024: ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನವನ್ನು ಬುಧವಾರ ಆರಂಭಿಸಲಿದೆ. ಜೂನ್ 5 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜೂನ್ 9 ರಂದು ಪಾಕಿಸ್ತಾನ್, ಜೂನ್ 12 ರಂದು ಯುಎಸ್​ಎ ಮತ್ತು ಜೂನ್ 15 ರಂದು ಕೆನಡಾ ತಂಡಗಳ ವಿರುದ್ಧ ಸೆಣಸಲಿದೆ.

1 / 5
T20 World Cup 2024: ಟಿ20 ವಿಶ್ವಕಪ್​ನ 2ನೇ ಪಂದ್ಯದ ಸ್ಕೋರ್​ ಕಾರ್ಡ್​ನಲ್ಲಿ ಟೀಮ್ ಇಂಡಿಯಾ (Team India) ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಅವರ ಫೋಟೋ ಕಾಣಿಸಿಕೊಂಡಿದೆ. ವೆಸ್ಟ್ ಇಂಡೀಸ್ ಮತ್ತು ಪಪುವಾ ನ್ಯೂ ಗಿನಿಯಾ ನಡುವಣ ಈ ಪಂದ್ಯದ ವೇಳೆ ತೋರಿಸಲಾದ ಸ್ಕೋರ್​ ಕಾರ್ಡ್​ನಲ್ಲಿ ಆಕಸ್ಮಿಕವಾಗಿ ಪಾಂಡ್ಯ ಚಿತ್ರವನ್ನು ಬಳಸಲಾಗಿದೆ.

2 / 5
ವೆಸ್ಟ್ ಇಂಡೀಸ್ ಬ್ಯಾಟರ್​ಗಳ ಪಟ್ಟಿಯಲ್ಲೂ ಮತ್ತು ಪಪುವಾ ನ್ಯೂ ಗಿನಿಯಾ ಬೌಲರ್​ಗಳ ಪಟ್ಟಿಯಲ್ಲೂ ಹಾರ್ದಿಕ್ ಪಾಂಡ್ಯ ಫೋಟೋ ಕಾಣಿಸಿಕೊಂಡಿರುವುದು ವಿಶೇಷ. ಹೀಗೆ ಐದು ಕಡೆ ಟೀಮ್ ಇಂಡಿಯಾ ಆಟಗಾರನ ಫೋಟೋ ಬಳಸಿ ಪಂದ್ಯಾವಳಿಯ ಪ್ರಸಾರಕರು ಎಡವಟ್ಟು ಮಾಡಿಕೊಂಡಿದ್ದಾರೆ.

3 / 5
ವಿಂಡೀಸ್​ ಬ್ಯಾಟರ್​ಗಳಾದ ರೋಸ್ಟನ್ ಚೇಸ್, ಬ್ರೆಂಡನ್ ಕಿಂಗ್ ಮತ್ತು ಆ್ಯಂಡ್ರೆ ರಸೆಲ್ ಫೋಟೋ ಬದಲು ಹಾರ್ದಿಕ್ ಪಾಂಡ್ಯ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಹಾಗೆಯೇ ಪಪುವಾ ನ್ಯೂ ಗಿನಿಯಾ ಬೌಲರ್​ಗಳಾದ ಸೆಸ ಬುವ ಹಾಗೂ ಅಸಾದ್ ವಾಲ್ ಚಿತ್ರಗಳ ಬದಲು ಪಾಂಡ್ಯ ಫೋಟೋ ರಾರಾಜಿಸಿದ್ದವು. ಇದೀಗ ಈ ಸ್ಕೋರ್​ ಕಾರ್ಡ್​ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

4 / 5
ಟಿ20 ವಿಶ್ವಕಪ್​ನಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

5 / 5
ಇನ್ನು ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇದಾದ ಬಳಿಕ ಭಾರತ ತಂಡವು ಯುಎಸ್​ಎ ಮತ್ತು ಕೆನಡಾ ತಂಡಗಳ ವಿರುದ್ಧ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳ ಮುಕ್ತಾಯದೊಂದಿಗೆ ಸೂಪರ್-8 ಹಂತದ ಮ್ಯಾಚ್​ಗಳು ಶುರುವಾಗಲಿದೆ.

Published On - 11:56 am, Mon, 3 June 24