Nicholas Pooran: ಪೂರನ್​ ಸಿಡಿಲಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

|

Updated on: Jun 18, 2024 | 7:30 PM

T20 World Cup 2024: ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ನಿಕೋಲಸ್ ಪೂರನ್ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಪೂರನ್ 8 ಭರ್ಜರಿ ಸಿಕ್ಸರ್​ನೊಂದಿಗೆ 98 ರನ್ ಬಾರಿಸಿ ಶತಕ ವಂಚಿತರಾಗಿದ್ದರು. ಇದಾಗ್ಯೂ ಈ 98 ರನ್​ಗಳೊಂದಿಗೆ ಎರಡು ಭರ್ಜರಿ ದಾಖಲೆ ಬರೆಯುವಲ್ಲಿ ಪೂರನ್ ಯಶಸ್ವಿಯಾಗಿದ್ದಾರೆ.

1 / 6
T20 World Cup 2024: ಟಿ20 ವಿಶ್ವಕಪ್​ನ 40ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನಿಕೋಲಸ್ ಪೂರನ್ (Nicholas Pooran) ಹಲವು ದಾಖಲೆ ನಿರ್ಮಿಸಿದ್ದಾರೆ. ಅದರಲ್ಲೂ ದಾಖಲೆಗಳ ಸರದಾರ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಎರಡು ದಾಖಲೆಗಳನ್ನು ಪೂರನ್ ಅಳಿಸಿ ಹಾಕಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

2 / 6
ಅಫ್ಘಾನಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಿಕೋಲಸ್ ಪೂರನ್ 53 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 98 ರನ್ ಸಿಡಿಸಿದ್ದರು. ಈ ಎಂಟು ಸಿಕ್ಸರ್​ಗಳೊಂದಿಗೆ ಪೂರನ್ ವಿಂಡೀಸ್​ನ ಸಿಕ್ಸರ್ ಸರದಾರ ಎನಿಸಿಕೊಂಡರು.

3 / 6
ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ವೆಸ್ಟ್ ಇಂಡೀಸ್ ಪರ 79 ಟಿ20 ಪಂದ್ಯಗಳನ್ನಾಡಿರುವ ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ ಒಟ್ಟು 124 ಸಿಕ್ಸ್​ಗಳನ್ನು ಬಾರಿಸಿ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಪೂರನ್ ಯಶಸ್ವಿಯಾಗಿದ್ದಾರೆ.

4 / 6
ವೆಸ್ಟ್ ಇಂಡೀಸ್ ಪರ ಈವರೆಗೆ 92 ಟಿ20 ಪಂದ್ಯಗಳನ್ನಾಡಿರುವ ನಿಕೋಲಸ್ ಪೂರನ್ ಒಟ್ಟು 128 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ಪರ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 / 6
ಹಾಗೆಯೇ ಈ ಪಂದ್ಯದಲ್ಲಿ 98 ರನ್​ಗಳಿಸುವುದರೊಂದಿಗೆ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ಪೂರನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಗೇಲ್ ಹೆಸರಿನಲ್ಲಿತ್ತು.

6 / 6
ಕ್ರಿಸ್ ಗೇಲ್ 79 ಟಿ20 ಪಂದ್ಯಗಳಲ್ಲಿ ಒಟ್ಟು 1899 ರನ್​ ಕಲೆಹಾಕಿದ್ದರು. ಇದೀಗ ನಿಕೋಲಸ್ ಪೂರನ್ 84 ಟಿ20 ಇನಿಂಗ್ಸ್​ಗಳಿಂದ ಒಟ್ಟು 2012 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿಂಡೀಸ್ ಪರ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.