T20 World Cup 2024: ಒಂದೇ ಪಂದ್ಯದಲ್ಲಿ ಹಲವು ವಿಶ್ವ ದಾಖಲೆ ಬರೆದ ವೆಸ್ಟ್ ಇಂಡೀಸ್
T20 World Cup 2024: ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 218 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 114 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿಂಡೀಸ್ ಪಡೆ 104 ರನ್ಗಳ ಭರ್ಜರಿ ಜಯ ಸಾಧಿಸಿದೆ.
1 / 6
ಸೇಂಟ್ ಲೂಸಿಯಾದಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ನೊಂದಿಗೆ ವೆಸ್ಟ್ ಇಂಡೀಸ್ ತಂಡ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ರಶೀದ್ ಖಾನ್ ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.
2 / 6
ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಚಾನ್ಸನ್ ಚಾರ್ಲ್ಸ್ (43) ಉತ್ತಮ ಆರಂಭ ಒದಗಿಸಿದ್ದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಕೇವಲ 53 ಎಸೆತಗಳಲ್ಲಿ 98 ರನ್ ಚಚ್ಚಿದರು. ಈ ಮೂಲಕ ವಿಂಡೀಸ್ ಪಡೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
3 / 6
ಇದರೊಂದಿಗೆ ಟಿ20 ವಿಶ್ವಕಪ್ 2024 ರಲ್ಲಿ ಗರಿಷ್ಠ ಸ್ಕೋರ್ಗಳಿಸಿದ ತಂಡವೆಂಬ ಕೀರ್ತಿ ವೆಸ್ಟ್ ಇಂಡೀಸ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ನೆದರ್ಲೆಂಡ್ಸ್ ವಿರುದ್ಧ 201 ರನ್ ಬಾರಿಸಿದ್ದ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು.
4 / 6
ಹಾಗೆಯೇ ಈ ಪಂದ್ಯದ ಪವರ್ಪ್ಲೇನಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಬರೋಬ್ಬರಿ 92 ರನ್ ಕಲೆಹಾಕಿದ್ದರು. ಇದು ಟಿ20 ವಿಶ್ವಕಪ್ ಅತೀ ಇತಿಹಾಸದಲ್ಲೇ ಮೂಡಿಬಂದ ಗರಿಷ್ಠ ಪವರ್ಪ್ಲೇ ಸ್ಕೋರ್ ಎಂಬುದು ವಿಶೇಷ. ಇದಕ್ಕೂ ಮುನ್ನ ಈ ದಾಖಲೆ 2014 ರಲ್ಲಿ ಐರ್ಲೆಂಡ್ ವಿರುದ್ಧ ಮೊದಲ 6 ಓವರ್ಗಳಲ್ಲಿ 91 ರನ್ ಬಾರಿಸಿದ್ದ ನೆದರ್ಲೆಂಡ್ಸ್ ತಂಡದ ಹೆಸರಿನಲ್ಲಿತ್ತು.
5 / 6
ಇದಲ್ಲದೆ ಟಿ20 ವಿಶ್ವಕಪ್ನಲ್ಲಿ ಇದು ವೆಸ್ಟ್ ಇಂಡೀಸ್ ತಂಡದ ಗರಿಷ್ಠ ಸ್ಕೋರ್ ಎಂಬುದು ವಿಶೇಷ. 2007ರ ಟಿ20 ವಿಶ್ವಕಪ್ನಲ್ಲಿ ವಿಂಡೀಸ್ ಪಡೆ ಸೌತ್ ಆಫ್ರಿಕಾ ವಿರುದ್ಧ 205 ರನ್ಗಳಿಸಿದ್ದು ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಇದೀಗ ಅಫ್ಘಾನಿಸ್ತಾನ್ ವಿರುದ್ಧ 218 ರನ್ಗಳಿಸಿ ವೆಸ್ಟ್ ಇಂಡೀಸ್ ಹೊಸ ಇತಿಹಾಸ ನಿರ್ಮಿಸಿದೆ.
6 / 6
ಅಫ್ಘಾನಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 104 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ವಿಶೇಷ ಎಂದರೆ ವಿಂಡೀಸ್ ಪಡೆಯು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಎರಡು ಬಾರಿ 100 ಕ್ಕಿಂತ ಅಧಿಕ ರನ್ಗಳ ಅಂತರದ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ವಿಂಡೀಸ್, ಉಗಾಂಡ ವಿರುದ್ಧ 134 ರನ್ಗಳ ಜಯ ಸಾಧಿಸಿತ್ತು. ಇದೀಗ ಅಫ್ಘಾನ್ ಪಡೆಯನ್ನು 104 ರನ್ಗಳ ಅಂತರದಿಂದ ಬಗ್ಗು ಬಡಿದು ಒಂದೇ ವಿಶ್ವಕಪ್ನಲ್ಲಿ 2 ಬಾರಿ ಶತಕದ ಅಂತರಗಳ ಭರ್ಜರಿ ಜಯ ಸಾಧಿಸಿದೆ.