IND vs BAN: 6 ತಂಡಗಳ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ರೋಹಿತ್ ಶರ್ಮಾ..!

Updated on: Jun 22, 2024 | 10:21 PM

T20 World Cup 2024, Rohit Sharma: ಈ ಪಂದ್ಯದಲ್ಲಿ ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಗಳಿಸಿದರು. ಅವರ ಈ ಚುಟುಕು ಇನ್ನಿಂಗ್ಸ್​ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಸೇರಿದ್ದವು. ಪಂದ್ಯದಲ್ಲಿ ಸಿಡಿಸಿದ ಏಕೈಕ ಸಿಕ್ಸರ್​ನೊಂದಿಗೆ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 50 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೂಲಕ ಅಪರೂಪದ ದಾಖಲೆಯನ್ನೂ ನಿರ್ಮಿಸಿದರು.

1 / 6
ಟಿ20 ವಿಶ್ವಕಪ್ ಸೂಪರ್-8 ಸುತ್ತಿನ ಎರಡನೇ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ, ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿದೆ.

ಟಿ20 ವಿಶ್ವಕಪ್ ಸೂಪರ್-8 ಸುತ್ತಿನ ಎರಡನೇ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ, ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿದೆ.

2 / 6

ತಂಡದ ಪರ ಹಾರ್ದಿಕ್ ಪಾಂಡ್ಯ ಅಜೇಯ ಅರ್ಧಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ 37 ರನ್, ರಿಷಬ್ ಪಂತ್ 36 ರನ್ ಹಾಗೂ ಶಿವಂ ದುಬೆ 34 ರನ್​ಗಳ ಕಾಣಿಕೆ ನೀಡಿದರು. ಇನ್ನು ಈ ಪಂದ್ಯದಲ್ಲಿ 23 ರನ್​​ಗಳ ಅಲ್ಪ ಇನ್ನಿಂಗ್ಸ್ ಆಡಿದ ನಾಯಕ ರೋಹಿತ್ ಶರ್ಮಾ, ಕ್ರಿಸ್ ಗೇಲ್ ಅವರ ದೊಡ್ಡ ದಾಖಲೆಯನ್ನೂ ಮುರಿದರು.

3 / 6

ಈ ಪಂದ್ಯದಲ್ಲಿ ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಗಳಿಸಿದರು. ಅವರ ಈ ಚುಟುಕು ಇನ್ನಿಂಗ್ಸ್​ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಸೇರಿದ್ದವು. ಪಂದ್ಯದಲ್ಲಿ ಸಿಡಿಸಿದ ಏಕೈಕ ಸಿಕ್ಸರ್​ನೊಂದಿಗೆ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 50 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೂಲಕ ಅಪರೂಪದ ದಾಖಲೆಯನ್ನೂ ನಿರ್ಮಿಸಿದರು.

4 / 6

ಬಾಂಗ್ಲಾದೇಶದ ವಿರುದ್ಧ 50 ಸಿಕ್ಸರ್​ಗಳನ್ನು ಪೂರೈಸುವ ಮೂಲಕ ರೋಹಿತ್, ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ವಿವಿಧ ತಂಡಗಳ ವಿರುದ್ಧ 50 ಸಿಕ್ಸರ್‌ಗಳನ್ನು ಬಾರಿಸಿದಂತ್ತಾಗಿದೆ. ಇದರೊಂದಿಗೆ ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ವಿವಿಧ ತಂಡಗಳ ವಿರುದ್ಧ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

5 / 6

ರೋಹಿತ್ ಶರ್ಮಾಗೂ ಮೊದಲು ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಕ್ರಿಸ್ ಗೇಲ್ 5 ವಿವಿಧ ತಂಡಗಳ ವಿರುದ್ಧ ಈ ಸಾಧನೆ ಮಾಡಿದ್ದರು. ಗೇಲ್ ಹೊರತುಪಡಿಸಿ, ಶಾಹೀದ್ ಅಫ್ರಿದಿ, ಎಂಎಸ್ ಧೋನಿ ಹಾಗೂ ಬ್ರೆಂಡನ್ ಮೆಕಲಮ್ ತಲಾ ಮೂರು ತಂಡಗಳ ವಿರುದ್ಧ ಈ ಸಾಧನೆ ಮಾಡಿದ್ದಾರೆ.

6 / 6

ಇನ್ನು ಈ ವಿಶ್ವಕಪ್‌ನಲ್ಲಿ ಇದುವರೆಗೆ ಆಡಿದ್ದ ಪಂದ್ಯಗಳಲ್ಲಿ ಉತ್ತಮ ಆರಂಭ ಕಲ್ಪಿಸಿಕೊಡುವಲ್ಲಿ ವಿಫಲವಾಗಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರಂಭಿಕ ಜೋಡಿ, ಈ ಪಂದ್ಯದಲ್ಲಿ ಕೇವಲ 3.4 ಓವರ್​ಗಳಲ್ಲಿ 39 ರನ್​ಗಳ ಜೊತೆಯಾಟ ನೀಡಿತು.

Loading...
Unable to load recommendations.
Follow Us